ಫೇಸ್ ಬುಕ್ ಪ್ರೇಮ; ಪ್ರೇಯಸಿ ನೋಡಲು ಪಾಕ್‌ಗೆ ಹೊರಟವ ಬಂಧನ

ಅಹಮದಾಬಾದ್, ಜುಲೈ 17 : ಪ್ರೇಯಸಿ ನೋಡಲು ಪಾಕಿಸ್ತಾನಕ್ಕೆ ಹೊರಟಿದ್ದ 20 ವರ್ಷದ ಯುವಕನನ್ನು ಬಿಎಸ್‌ಎಫ್ ಯೋಧರು ಬಂಧಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಯುವತಿ ಜೊತೆ ಯುವಕನಿಗೆ ಪ್ರೇಮಾಂಕುರವಾಗಿತ್ತು.

Recommended Video

      ಗೋವಾ ಹೋಗೋ ಪ್ಲಾನ್ ಇದ್ರೆ ಮೊದಲು ಕ್ಯಾನ್ಸಲ್ ಮಾಡಿ. |Oneindia kannada

      ಮಹಾರಾಷ್ಟ್ರ ಮೂಲದ 20 ವರ್ಷದ ಯುವಕನನ್ನು ಗುಜರಾತ್‌ನ ಕಚ್ ಪ್ರದೇಶದಲ್ಲಿ ಬಿಎಸ್‌ಎಫ್ ಬಂಧಿಸಿದೆ. ಗುಜರಾತ್ ರಾಜ್ಯದ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಲು ಯುವಕ ಪ್ರಯತ್ನ ನಡೆಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

      Maharashtra Man Arrested Who Try To Sneak Pakistan To Meet Girl

      ಯುವಕ ಫೇಸ್ ಬುಕ್ ಮೂಲಕ ಪಾಕಿಸ್ತಾನದಲ್ಲಿರುವ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಆಕೆಯನ್ನು ಭೇಟಿಯಾಗಲು ಗಡಿಯಿಂದ ಒಳನುಸುಳಲು ಪ್ರಯತ್ನ ನಡೆಸಿದ್ದ. ಈ ಸಂದರ್ಭದಲ್ಲಿ ಬಂಧಿಸಲಾಗಿದೆ.

      ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಿಂದ ಕೇವಲ 1.5 ಕಿ. ಮೀ. ದೂರದಲ್ಲಿದ್ದ ಯವಕ ಪಾಕಿಸ್ತಾನಕ್ಕೆ ಹೊರಟಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಾನು ಪ್ರೀತಿಸುವ ಹುಡುಗಿ ಕರಾಚಿಯಲ್ಲಿದ್ದಾಳೆ. ಅವಳನ್ನು ಭೇಟಿಯಾಗಬೇಕು ಎಂದು ಹೊರಟಿದ್ದೆ ಎಂದು ಆತ ವಿವರಣೆ ನೀಡಿದ್ದಾನೆ.

      ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯ ನಂಬರ್ ಪಡೆದಿದ್ದ ಆತ ಆಕೆಯ ಜೊತೆ ವಾಟ್ಸಪ್ ಚಾಟ್ ನಡೆಸಿದ್ದ. ಅದನ್ನು ಸಹ ಅಧಿಕಾರಿಗಳಿಗೆ ತೋರಿಸಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+