Get Updates
Get notified of breaking news, exclusive insights, and must-see stories!

ರಾಮ ಮಂದಿರ ನಿರ್ಮಾಣಕ್ಕಾಗಿ 21, 000 ರು ಕಾಣಿಕೆ ನೀಡಲಿರುವ ಹಾರ್ದಿಕ್

ಅಹಮದಾಬಾದ್, ಆ.4: ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿರುವ ಮುಖಂಡ, ಗುಜರಾತ್ ಕಾಂಗ್ರೆಸ್ಸಿನ ನೂತನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕಾಣಿಕೆ ನೀಡುವುದಾಗಿ ಘೋಷಿಸಿದ್ದಾರೆ. ಉತ್ತರಪ್ರದೇಶದ ಆಯೋಧ್ಯೆಯ ರಾಮ ಮಂದಿರಕ್ಕಾಗಿ ತಾವು ಹಾಗೂ ತಮ್ಮ ಕುಟುಂಬಸ್ಥರು 21, 000 ರು ಕಾಣಿಕೆ ನೀಡುವುದಾಗಿ ಹೇಳಿದ್ದಾರೆ.

ಶ್ರೀರಾಮಚಂದ್ರನಲ್ಲಿ ಅನನ್ಯ ಭಕ್ತಿ ಇದ್ದು, ಹಿಂದು ಸಂಘಟನೆಯಲ್ಲಿ ನಂಬಿಕೆ ಇರಿಸಿಕೊಂಡವನು, ರಾಮ ಮಂದಿರ ನಿರ್ಮಾಣದ ನಂತರ ರಾಮ ರಾಜ್ಯ ನಿರ್ಮಾಣವಾಗಲಿ ಎಂದು ಬಯಸುತ್ತೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದರು.

''ರಾಮ ರಾಜ್ಯವೆಂದರೆ ಪ್ರಜೆಗಳ ರಾಜ್ಯ, ರೈತ, ಯುವ ಸಮುದಾಯ, ಮಹಿಳೆಯರಿಗೆ ಸುಭಿಕ್ಷವಾಗಿರುವ ರಾಜ್ಯ, ಎಲ್ಲರಿಗೂ ಉದ್ಯೋಗ, ಮಹಿಳೆಯರ ಸುರಕ್ಷತೆ, ಶಿಕ್ಷಣ, ಗ್ರಾಮಗಳ ಅಭಿವೃದ್ಧಿ,ದೇಶದ ಆರ್ಥಿಕ ಪ್ರಗತಿ ಎಲ್ಲವೂ ಸಾಧ್ಯವಾಗಲಿ'' ಎಂದು ನಾನು ರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

Hardik Patel announces Rs 21,000 donation for Ram temple

ಆಗಸ್ಟ್ 5ರಂದು ಪ್ರಧಾನಿ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸುತ್ತಿದ್ದಾರೆ. ಶಂಕು ಸ್ಥಾಪನೆ ದಿನದಂದು 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಇಟ್ಟು ಮೋದಿ ಪೂಜಿಸಲಿದ್ದಾರೆ. ದೂರದರ್ಶನ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+