ಈ ಅಂಗಡಿಯಲ್ಲಿ ಮೊಬೈಲ್ ಕೊಂಡರೆ 2 ಕೆಜಿ ಈರುಳ್ಳಿ ಫ್ರೀ
ಅಹಮದಾಬಾದ್, ಡಿಸೆಂಬರ್10: ಮೊದಲೆಲ್ಲಾ ಈರುಳ್ಳಿ ಎಂದರೆ ಕೇಳೋರು ಗತಿ ಇರಲಿಲ್ಲ, ಈಗ ಈರುಳ್ಳಿ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ.
ಮೊದಲೆಲ್ಲಾ ಮೊಬೈಲ್ ಅಂಗಡಿಗಳಲ್ಲಿ ಮೊಬೈಲ್ ಕೊಂಡರೆ ಇಯರ್ ಫೋನ್ ಅಥವಾ ಇನ್ನಿತರೆ ಕೂಪನ್‌ಗಳನ್ನು ನೀಡುತ್ತಿದ್ದರು. ಆದರೆ ಈಗ ಮೊಬೈಲ್ ಕೊಂಡರೆ ಈರುಳ್ಳಿಯನ್ನು ಉಚಿತವಾಗಿ ನೀಡುತ್ತಿದ್ದಾರೆ.
ಮೈಸೂರಿನಲ್ಲಿ ಈರುಳ್ಳಿ ದಾಸ್ತಾನಿಗೂ ಬಿತ್ತು ಮಿತಿ; ಯರ್ರಾಬಿರ್ರಿ ಕೂಡಿಡುವಂತಿಲ್ಲ
ಈಗ ಈರುಳ್ಳಿ ಬೆಲೆ 180-200ರೂಗೆ ಬಂದು ತಲುಪಿದೆ. ಮುಂದಿನ 15 ದಿನ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಅಂಗಡಿಯವರಿಂದ ಇಂತಹ ಯೋಜನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ, ಈ ಮೊಬೈಲ್ ಅಂಗಡಿಯಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿದೆ.
ಅಂಗಡಿಯವರು 'ಈರುಳ್ಳಿ ಫ್ರೀ' ಯೋಜನೆಯ ನಂತರ ಮನಸ್ಸು ಬದಲಾಯಿಸುತ್ತಿದ್ದು, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಮೊಬೈಲ್ ಮಾರಾಟ ಕಡಿಮೆಯಾಗಿತ್ತು. ಈ ಯೋಜನೆಯ ತಂದ ಬಳಿಕ ಒಂದೇ ದಿನದಲ್ಲಿ 7 ಮೊಬೈಲ್‌ಗಳನ್ನು ಮಾರಾಟ ಮಾಡಿದ್ದೇನೆ ಎಂದು ಅಂಗಡಿಯವರು ಹೇಳಿದ್ದಾರೆ.
ಆದರೀಗ ಈರುಳ್ಳಿ ದರ ಏರಿಕೆ ಎಷ್ಟರ ಮಟ್ಟಿಗಿದೆ ಎಂದರೆ ಸೇಬು, ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಬೇಕೆಂಬುದು ಗ್ರಾಹಕರ ಬೇಡಿಕೆ.
ಅದಕ್ಕಾಗಿಯೇ ನಾವು ಈ ಪ್ರಸ್ತಾಪವನ್ನು ನೀಡಿದ್ದೇವೆ ಮತ್ತು ಅದರ ನಂತರ ಗ್ರಾಹಕರ ಒಳಹರಿವು ಹೆಚ್ಚಾಯಿತು. ಈ ಯೋಜನೆಯ ನಂತರ, ಗ್ರಾಹಕರ ಕುಟುಂಬವೂ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.