• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂದು ಓಡಿ ಹೋಗಿದ್ದ ವಧುವಿನ ತಾಯಿ-ವರನ ತಂದೆ ಇಂದು ಮತ್ತೆ ಎಸ್ಕೇಪ್.!

|
Google Oneindia Kannada News

ಗುಜರಾತ್, ಮಾರ್ಚ್ 02: ವಯಸ್ಸು 40 ರ ಗಡಿ ದಾಟಿದ್ದರೂ, ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದರೂ, ಗುಜರಾತಿನ ಹಿಮ್ಮತ್ ಪಟೇಲ್ ಮತ್ತು ಶೋಭನಾ ರಾವಲ್ ರದ್ದು ಮಾತ್ರ ದಶಕಗಳ ಹಿಂದಿನ ಪ್ರೇಮ ಕಹಾನಿ.!

ಬಾಲ್ಯದಲ್ಲಿ ಅಕ್ಕ-ಪಕ್ಕದ ಮನೆಯಲ್ಲಿದ್ದಾಗ ಹುಟ್ಟಿದ ಪ್ರೇಮಕ್ಕೆ ಮಧ್ಯ ವಯಸ್ಸಿನಲ್ಲಿ ಮರುಜೀವ ಸಿಕ್ಕ ಪರಿಣಾಮ ಮಕ್ಕಳ ಮದುವೆ ಇದೆ ಎಂಬುದನ್ನೂ ಲೆಕ್ಕಿಸದೆ ಹಿಮ್ಮತ್ ಪಟೇಲ್ ಮತ್ತು ಶೋಭನಾ ರಾವಲ್ ಓಡಿ ಹೋಗಿದ್ದರು.

ವರನ ಅಪ್ಪನ ಜೊತೆ ವಧುವಿನ ತಾಯಿ ಪರಾರಿ, ಮಕ್ಕಳ ಮದುವೆ ಮೂರಾಬಟ್ಟೆವರನ ಅಪ್ಪನ ಜೊತೆ ವಧುವಿನ ತಾಯಿ ಪರಾರಿ, ಮಕ್ಕಳ ಮದುವೆ ಮೂರಾಬಟ್ಟೆ

ಅಸಲಿಗೆ, ವರನ ತಂದೆಯಾಗಿದ್ದ ಹಿಮ್ಮತ್ ಪಟೇಲ್ ಮತ್ತು ವಧುವಿನ ತಾಯಿಯಾಗಿದ್ದ ಶೋಭನಾ ರಾವಲ್ ದಿಢೀರ್ ಅಂತ ಪರಾರಿ ಆಗಿದ್ರಿಂದ ಫೆಬ್ರವರಿಯಲ್ಲಿ ನಿಗದಿಯಾಗಿದ್ದ ಇವರಿಬ್ಬರ ಮಕ್ಕಳ ಮದುವೆ ಮುರಿದು ಬಿದ್ದಿತ್ತು. ಬಳಿಕ ವಾಪಸ್ ಆಗಿದ್ದ ಇವರಿಬ್ಬರು ಇದೀಗ ಮತ್ತೊಮ್ಮೆ ಎಸ್ಕೇಪ್ ಆಗಿದ್ದಾರೆ. ಮುಂದೆ ಓದಿರಿ...

ಓಡಿ ಹೋಗಿದ್ದ ವರನ ತಂದೆ-ವಧುವಿನ ತಾಯಿ

ಓಡಿ ಹೋಗಿದ್ದ ವರನ ತಂದೆ-ವಧುವಿನ ತಾಯಿ

ಕಳೆದ ಫೆಬ್ರವರಿಯಲ್ಲಿ ಹಿಮ್ಮತ್ ಪಾಂಡವ್ (46) ಪುತ್ರನಿಗೂ ಮತ್ತು ಶೋಭನಾ ರಾವಲ್ (43) ಪುತ್ರಿಗೂ ಮದುವೆ ನಿಗದಿ ಆಗಿತ್ತು. ಇನ್ನೇನು ಮದುವೆ ನಡೆಯಬೇಕಿತ್ತು. ಅಷ್ಟರಲ್ಲಿ, ಮಕ್ಕಳ ಮದುವೆಯನ್ನ ಮುಂದೆ ನಿಂತು ಮಾಡಬೇಕಿದ್ದ ವರನ ತಂದೆ ಮತ್ತು ವಧುವಿನ ತಾಯಿ ನಾಪತ್ತೆ ಆಗಿದ್ದರು. ಜನವರಿ 10 ರಿಂದ ಮಿಸ್ಸಿಂಗ್ ಆಗಿದ್ದ ಹಿಮ್ಮತ್ ಪಾಂಡವ್ ಮತ್ತು ಶೋಭನಾ ರಾವಲ್ ವಿರುದ್ಧ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿತ್ತು.

ವಾಪಸ್ ಆಗಿದ್ದ ಪ್ರೇಮಿಗಳು

ವಾಪಸ್ ಆಗಿದ್ದ ಪ್ರೇಮಿಗಳು

ಎರಡು ವಾರಗಳ ಕಾಲ 'ಮಿಸ್ಸಿಂಗ್' ಆಗಿದ್ದ ಹಿಮ್ಮತ್ ಪಾಂಡವ್ ಮತ್ತು ಶೋಭನಾ ರಾವಲ್ ಜನವರಿ 26 ರಂದು ತಮ್ಮ ತಮ್ಮ ನಿವಾಸಗಳಿಗೆ ಹಿಂದಿರುಗಿದರು. ಶೋಭನಾ ರಾವಲ್ ಮರಳಿದ ಬಳಿಕ ಆಕೆಯನ್ನ ಪತಿ ಸ್ವೀಕರಿಸಲಿಲ್ಲ. ಹೀಗಾಗಿ, ತಂದೆಯ ಮನೆಗೆ ಶೋಭನಾ ರಾವಲ್ ತೆರಳಿದ್ದರು.

ಮತ್ತೆ ಎಸ್ಕೇಪ್ ಆದ ಜೋಡಿ

ಮತ್ತೆ ಎಸ್ಕೇಪ್ ಆದ ಜೋಡಿ

ಹಿಮ್ಮತ್ ಪಾಂಡವ್ ಮತ್ತು ಶೋಭನಾ ರಾವಲ್ ವಾಪಸ್ ಆದ್ಮೇಲೆ ಫೆಬ್ರವರಿಯಲ್ಲಿ ಫಿಕ್ಸ್ ಆಗಿದ್ದ ಮಕ್ಕಳ ಮದುವೆ ನಿಂತು ಹೋಯ್ತು. ಈಗ ನೋಡಿದ್ರೆ, ಹಿಮ್ಮತ್ ಪಾಂಡವ್ ಮತ್ತು ಶೋಭನಾ ರಾವಲ್ ಮತ್ತೆ ಎಸ್ಕೇಪ್ ಆಗಿದ್ದಾರೆ. ಕಳೆದ ಶನಿವಾರದಿಂದ ಇಬ್ಬರೂ ಮನೆಯಲ್ಲಿ ಕಾಣುತ್ತಿಲ್ಲ. ಇಬ್ಬರ ವಿರುದ್ಧ ಈ ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಸೂರತ್ ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಇಬ್ಬರೂ ವಾಸಿಸುತ್ತಿದ್ದಾರೆ ಎಂದು ವರದಿ ಆಗಿದೆ.

ಬಾಲ್ಯದ ಲವ್ ಸ್ಟೋರಿ

ಬಾಲ್ಯದ ಲವ್ ಸ್ಟೋರಿ

ಅಷ್ಟಕ್ಕೂ, ಹಿಮ್ಮತ್ ಪಾಂಡವ್ ಮತ್ತು ಶೋಭನಾ ರಾವಲ್ ರವರ ಪ್ರೇಮ ಇಂದು ನಿನ್ನೆಯದ್ದಲ್ಲ. ಬಾಲ್ಯದಲ್ಲಿ ಅಕ್ಕ-ಪಕ್ಕದ ಮನೆಯಲ್ಲಿದ್ದ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ತಮ್ಮ ಪ್ರೀತಿಯನ್ನು ತ್ಯಾಗ ಮಾಡಿ ಬೇರೆಯವರೊಟ್ಟಿಗೆ ಮದುವೆ ಮಾಡಿಕೊಂಡಿದ್ದ ಮೇಲೆ ಶೋಭನಾ ರಾವಲ್ ಗುಜರಾತ್ ನ ನವ್ಸಾರಿಗೆ ಶಿಫ್ಟ್ ಆಗಿದ್ದರು.

ಮಕ್ಕಳ ಮದುವೆ ಮಾಡಬೇಕಿದ್ದವರೇ ಓಡಿ ಹೋದರು.!

ಮಕ್ಕಳ ಮದುವೆ ಮಾಡಬೇಕಿದ್ದವರೇ ಓಡಿ ಹೋದರು.!

ದಶಕಗಳಿಂದ 'ನಾನೊಂದು ತೀರಾ ನೀನೊಂದು ತೀರಾ..' ಅಂತಿದ್ದ ಪ್ರೇಮಿಗಳಾದ ಹಿಮ್ಮತ್ ಪಾಂಡವ್ ಮತ್ತು ಶೋಭನಾ ರಾವಲ್ ಮತ್ತೆ ಮುಖಾಮುಖಿಯಾಗಿದ್ದು ಮಕ್ಕಳ ಮದುವೆ ತಯಾರಿಯಲ್ಲಿ. ತಮ್ಮ ಪುತ್ರನಿಗೆ ಹೆಣ್ಣು ಹುಡುಕುತ್ತಿದ್ದ ಹಿಮ್ಮತ್ ಪಾಂಡವ್ ಗೆ ಶೋಭನಾ ರಾವಲ್ ಪುತ್ರಿಯ ಸಂಬಂಧ ಸಿಕ್ಕಿದೆ. ಮಕ್ಕಳ ಮದುವೆ ಮಾಡಲು ಮುಂದಾಗಿದ್ದ ಹಿಮ್ಮತ್ ಪಾಂಡವ್ ಮತ್ತು ಶೋಭನಾ ರಾವಲ್ ಇದೀಗ ಓಡಿ ಹೋಗಿ ಒಟ್ಟಿಗೆ ಜೀವನ ನಡೆಸಲು ಮನಸ್ಸು ಮಾಡಿದ್ದಾರೆ.

English summary
Gujarat Man and Woman, who ran away before their kids wedding elope again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X