ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಂತೆ ಗುಜರಾತ್‌ನಲ್ಲೂ ಊಹೆಗೂ ನಿಲುಕದ ಬಿಜೆಪಿ ರಾಜಕೀಯ ದಾಳ

|
Google Oneindia Kannada News

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿದಂತಹ ಸಂದರ್ಭದಲ್ಲಿ ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವ ಕುತೂಹಲ ಇಡೀ ರಾಜ್ಯದಲ್ಲಿ ಮನೆ ಮಾಡಿತ್ತು. ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲೂ ಇದೇ ಚರ್ಚೆಯ ವಿಷಯವಾಗಿತ್ತು. ಅದೇ ರೀತಿ ಗುಜರಾತ್‌ನಲ್ಲೂ ಒಂದು ದಿನದ ಹಿಂದೆ ಆಗಿದೆ.

ಈಗಾಗಲೇ ಗೊತ್ತಿರುವಂತೆ ಕಳೆದ ಆರು ತಿಂಗಳಲ್ಲಿ ಬಿಜೆಪಿ ವರಿಷ್ಠರು ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಪಡೆದುಕೊಂಡಿದ್ದಾರೆ. ತಾನು ನಡೆದಿದ್ದೇ ದಾರಿ ಎನ್ನುವ ಹಾಗೇ, ಹೈಕಮಾಂಡ್ ಹೇಳುವ ಮಾತಿಗೆ ಯಾವ ಮುಖ್ಯಮಂತ್ರಿಗಳೂ ತುಟಿ ಪಿಟಿಕ್ ಎನ್ನದೇ ರಾಜೀನಾಮೆ ನೀಡುತ್ತಿದ್ದಾರೆ.

ಗುಜರಾತ್ ಸಿಎಂ ರೂಪಾನಿ ರಾಜೀನಾಮೆ: ಸಿಎಂ ರೇಸಿನಲ್ಲಿರುವ ಐವರುಗುಜರಾತ್ ಸಿಎಂ ರೂಪಾನಿ ರಾಜೀನಾಮೆ: ಸಿಎಂ ರೇಸಿನಲ್ಲಿರುವ ಐವರು

ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ವೇಳೆ, ಎಲ್ಲೂ ಪಕ್ಷ ವಿರೋಧಿ ಹೇಳಿಕೆಯನ್ನು ನೀಡದಂತೆ ಬಿಜೆಪಿಯ ದೊಡ್ಡವರು ಎಚ್ಚರಿಕೆ ವಹಿಸಿಕೊಳ್ಳುವುದು ಗಮನಿಸಬೇಕಾದ ವಿಚಾರ. ಯಡಿಯೂರಪ್ಪನವರನ್ನು ಬಲವಂತದಿಂದ ಕೆಳಗಿಳಿಸಲಾಯಿತು ಎನ್ನುವುದು ಸಾರ್ವಜನಿಕ ವಲಯದಲ್ಲಿರುವ ಮಾತಾದರೂ, ಬಿಎಸ್ವೈ ರಾಜೀನಾಮೆ ವೇಳೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆಯನ್ನು ನೀಡಿರಲಿಲ್ಲ.

ಈಗ, ಗುಜರಾತ್ ಸರದಿ. ಯಾವ ಮುಖ್ಯವಾಹಿನಿಗಳಿಗೂ ಸೋರಿಕೆಯಾಗದಂತೆ, ಅಲ್ಲಿನ ಸಿಎಂ ವಿಜಯ್ ರೂಪಾನಿಯವರಿಂದ ರಾಜೀನಾಮೆಯನ್ನು ವರಿಷ್ಠರು ಪಡೆದುಕೊಂಡಿದ್ದಾರೆ. ಇಲ್ಲೂ ಕೂಡಾ, ಸಿಎಂ ಯಾರಾಗಬಹುದು ಎನ್ನುವುದು ಸ್ಥಳೀಯ ಮುಖಂಡರ ಲೆಕ್ಕಾಚಾರ ಬೇರೆಯದೇ ಇತ್ತು.

6 ತಿಂಗಳಲ್ಲಿ 4 ಸಿಎಂಗಳಿಂದ ರಾಜೀನಾಮೆ ಪಡೆದುಕೊಂಡ ಬಿಜೆಪಿ ಹೈಕಮಾಂಡ್6 ತಿಂಗಳಲ್ಲಿ 4 ಸಿಎಂಗಳಿಂದ ರಾಜೀನಾಮೆ ಪಡೆದುಕೊಂಡ ಬಿಜೆಪಿ ಹೈಕಮಾಂಡ್

 ಬಿಜೆಪಿ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕುತ್ತಾ ಯಡಿಯೂರಪ್ಪ ರಾಜೀನಾಮ

ಬಿಜೆಪಿ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕುತ್ತಾ ಯಡಿಯೂರಪ್ಪ ರಾಜೀನಾಮ

ಜುಲೈ 26ರಂದು ಬಿಜೆಪಿ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕುತ್ತಾ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಇದರಿಂದ ಹಲವು ತಿಂಗಳ ಬಿಎಸ್ವೈ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಗೆ ಕೊನೆಗೂ ತೆರೆಬಿದ್ದಿತ್ತು. ಅವಧಿ ಪೂರೈಸಲು ಬಿಎಸ್ವೈ ಉತ್ಸುಕರಾಗಿದ್ದರೂ, ದೊಡ್ಡವರು ಅದಕ್ಕೆ ಅವಕಾಶ ನೀಡಿರಲಿಲ್ಲ. ಆದರೂ, ಇನ್ನು ಮುಂದೆ, ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತೇನೆ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಯಡಿಯೂರಪ್ಪ ಹೇಳಿದ್ದರು.

 ಬೊಮ್ಮಾಯಿ ಹೆಸರು ಪ್ರಸ್ತಾವನೆಯಲ್ಲೇ ಇರಲಿಲ್ಲ, ಕೊನೆಗೆ ಬೊಮ್ಮಾಯಿ ಸಿಎಂ ಆದರು

ಬೊಮ್ಮಾಯಿ ಹೆಸರು ಪ್ರಸ್ತಾವನೆಯಲ್ಲೇ ಇರಲಿಲ್ಲ, ಕೊನೆಗೆ ಬೊಮ್ಮಾಯಿ ಸಿಎಂ ಆದರು

ಇದಾದ ನಂತರ ಜುಲೈ 27ರಂದು ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಯಿತು. ಬಿಎಸ್ವೈ ರಾಜೀನಾಮೆ ನೀಡಿದ ನಂತರದ ಈ ಎರಡು ದಿನಗಳಲ್ಲಿ ಮುಂದಿನ ಸಿಎಂ ಇವರೇ ಎನ್ನುವ ಅನಧಿಕೃತ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ, ಬಿ.ಎಲ್.ಸಂತೋಷ್ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿದ್ದವು. ಆದರೆ, ಎಲ್ಲೂ ಬಸವರಾಜ ಬೊಮ್ಮಾಯಿಯವರ ಹೆಸರು ಪ್ರಸ್ತಾವನೆಯಲ್ಲೇ ಇರಲಿಲ್ಲ. ಆದರೆ, ಕೊನೆಗೆ ಬೊಮ್ಮಾಯಿಯವರೇ ಸಿಎಂ ಆದರು.

 ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಕರ್ನಾಟಕದಂತೆ ಗುಜರಾತ್ ನಲ್ಲೂ ಆರಂಭ

ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಕರ್ನಾಟಕದಂತೆ ಗುಜರಾತ್ ನಲ್ಲೂ ಆರಂಭ

ಅನಿರೀಕ್ಷಿತ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದರು. ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಈ ವಿದ್ಯಮಾನದ ನಂತರ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಕರ್ನಾಟಕದಂತೆ ಅಲ್ಲೂ ಆರಂಭವಾಯಿತು. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮತ್ತು ಆರ್.ಸಿ.ಫಾಲ್ಡು.ಇದರ ಜೊತೆಗೆ, ಪುರುಷೋತ್ತಮ ರೂಪಾಲಿ, ನಿತಿನ್ ಪಟೇಲ್ ಮತ್ತು ಸಿ.ಆರ್. ಪಟೇಲ್ ಅವರ ಹೆಸರೂ ಚಾಲ್ತಿಯಲ್ಲಿದ್ದವು

 ಪಾಟೀದಾರ್ ಸಮುದಾಯದ ನಾಯಕರಾಗಿರುವ ಭೂಪೇಂದ್ರ ಪಟೇಲ್

ಪಾಟೀದಾರ್ ಸಮುದಾಯದ ನಾಯಕರಾಗಿರುವ ಭೂಪೇಂದ್ರ ಪಟೇಲ್

ಆದರೆ, ಇವ್ಯಾವ ಹೆಸರೂ ಬಿಜೆಪಿ ಹೈಕಮಾಂಡ್ ಪಟ್ಟಿಯಲ್ಲಿರಲಿಲ್ಲ. ಒಂದು ಬಾರಿ ಶಾಸಕರಾಗಿದ್ದ (ಘಾಟ್ ಲೊಡಿಯಾ ಕ್ಷೇತ್ರ) ಭೂಪೇಂದ್ರ ಪಟೇಲ್ ಅವರ ಹೆಸರನ್ನು ದೆಹಲಿಯಿಂದ ವರಿಷ್ಠರು ಕವರಿನಲ್ಲಿ ಹಾಕಿ ಕಳುಹಿಸಿದ್ದರು. ಗುಜರಾತಿನ ಪ್ರಬಲ ಪಾಟೀದಾರ್ ಸಮುದಾಯದ ನಾಯಕರಾಗಿರುವ ಭೂಪೇಂದ್ರ ಪಟೇಲ್, ಸೋಮವಾರ (ಸೆ 13) ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

English summary
Gujarat CM Change: 4 State BJP CMs resigned in 6 months, Here us the Mystery behind BJP Party's dynastic politics. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X