ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ವಿಧಾನಸಭೆ ಚುನಾವಣೆ: ಬಿಜೆಪಿ ವಿರುದ್ಧ ರಾಹುಲ್ ಟ್ವೀಟಾಸ್ತ್ರ

|
Google Oneindia Kannada News

ನವದೆಹಲಿ ಆಗಸ್ಟ್ 18: ದಿನ ಕಳೆದಂತೆ ಗುಜರಾತ್ ವಿಧಾನಸಭೆ ಚುನಾವಣಾ ತಯಾರಿಯನ್ನು ಪಕ್ಷಗಳು ಚುರುಕುಗೊಳಿಸುತ್ತಿವೆ. ಬಿಜೆಪಿ ಭದ್ರಕೋಟೆಯನ್ನು ಒಡೆಯಲು ಕಾಂಗ್ರೆಸ್ ಹಾಗೂ ಆಪ್ ತೊಡೆ ತಟ್ಟಿ ನಿಂತಿವೆ. ಈ ನಡುವೆ ಪಕ್ಷಗಳ ನಡುವೆ ಪರಸ್ಪರ ವಾಗ್ದಾಳಿ ಕೂಡ ತಾರಕಕ್ಕೇರುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನ ಭಾವಾರ್ಥ ಹೀಗಿದೆ-

ಉನ್ನಾವೋ- ಶಾಸಕನನ್ನು ಕಾಪಾಡುವ ಕೆಲಸ

ಕಥುವಾ- ಬಲಾತ್ಕಾರಿಗಳು ಸಮರ್ಥನೆಯಲ್ಲಿ ರ್‍ಯಾಲಿ

ಹಾಥರಸ್- ಬಲಾತ್ಕಾರಿಗಳ ಪಕ್ಷದಲ್ಲಿ ಸರ್ಕಾರ

ಗುಜರಾತ್- ಬಲಾತ್ಕಾರಿಗಳಿಗೆ ಸಮ್ಮಾನ!

ಅಪರಾಧಿಗಳ ಸಮರ್ಥನೆ ಮಹಿಳೆಯರ ಬಗ್ಗೆ ಬಿಜೆಪಿ ಹೊಂದಿರುವ ಕೀಳು ಮನೋಭಾವ ತೋರಿಸುತ್ತದೆ ।

Breaking: ಗುಜರಾತ್; 1,026 ಕೋಟಿ ಮೌಲ್ಯದ 513 ಕೆಜಿ ಡ್ರಗ್ಸ್ ವಶ Breaking: ಗುಜರಾತ್; 1,026 ಕೋಟಿ ಮೌಲ್ಯದ 513 ಕೆಜಿ ಡ್ರಗ್ಸ್ ವಶ

ಈ ರೀತಿ ರಾಜನೀತಿಯಿಂದ ನಿಮಗೆ ನಾಚಿಕೆಯಾಗುವುದಿಲ್ಲವೇ ಪ್ರಧಾನಮಂತ್ರಿ ಜೀ?

ನಿನ್ನೆ ಕೂಡ ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದ ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡುವ ಮಾತು ಮತ್ತು ನಡುವಳಿಕೆಯಲ್ಲಿನ ವ್ಯತ್ಯಾಸವನ್ನು ಇಡೀ ದೇಶವೇ ಗಮನಿಸುತ್ತಿದೆ ಎಂದು ಕುಟುಕಿದ್ದರು. ಬಿಲ್ಕಿಸ್ ಬಾನೋ ಪ್ರಕರಣವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ಆಜಾದಿ ಕೆ ಅಮೃತ್ ಮಹೋತ್ಸವ'ದ ವೇಳೆ 5 ತಿಂಗಳ ಗರ್ಭಿಣಿಯ ಮೇಲೆ ಅತ್ಯಾಚಾರವೆಸಗಿ 3 ವರ್ಷದ ಬಾಲಕಿಯನ್ನು ಕೊಂದವರಿಗೆ ಬಿಡುಗಡೆ ಭಾಗ್ಯವನ್ನು ನೀಡಲಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ. ಕೆಲವು ಅಪರಾಧಿಗಳ ಬಿಡುಗಡೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮಾತು ಮತ್ತು ಕಾರ್ಯಗಳ ನಡುವೆ ಇರುವ ವ್ಯತ್ಯಾಸವನ್ನು ಇಡೀ ದೇಶವೇ ನೋಡುತ್ತಿದೆ ಎಂದು ಬರೆದಿದ್ದರು.

Gujarat Assembly Elections: Rahul tweets against BJP

ಇತ್ತ ಆಮ್‌ ಆದ್ಮಿ ಪಕ್ಷ ಕೂಡ ಗುಜರಾತ್ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದು ಹಲವಾರು ಯೋಜನೆಗಳ ಭರವಸೆ ನೀಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ (ಎಎಪಿ) ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಹಲವಾರು ಯೋಜನೆಗಳನ್ನು ಘೋಷಿಸುವ ಮೂಲಕ ಮತದಾರರನ್ನು ಸೆಳೆಯುತ್ತಿದೆ. ಪ್ರಸ್ತುತ ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದರೆ ಮೂಲ ಸೌಕರ್ಯಗಳನ್ನು ಈಡೇರಿಸುವುದಾಗಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ (ಆಗಸ್ಟ್ 16) ಚುನಾವಣೆಗೆ ಒಳಪಡುವ ರಾಜ್ಯದ ಜನರಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಹಾಗೂ ಹೊಸ ಶಾಲೆಗಳನ್ನು ತೆರೆಯುವುದಾಗಿ ಘೋಷಿಸಿದ್ದಾರೆ. ವರ್ಷಾಂತ್ಯದ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಆಯ್ಕೆಯಾದರೆ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವುದಾಗಿ ಮತ್ತು ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಶಾಲೆಗಳನ್ನು ತೆರೆಯುವುದಾಗಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

English summary
Gujarat Assembly Election: Congress Leader Rahul Gandhi Tweets Against BJP Govt. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X