ವರನ ಅಪ್ಪನ ಜೊತೆ ವಧುವಿನ ತಾಯಿ ಪರಾರಿ, ಮಕ್ಕಳ ಮದುವೆ ಮೂರಾಬಟ್ಟೆ

ಸೂರತ್, ಜನವರಿ 21: ಗುಜರಾತ್‌ ನಲ್ಲಿ ಬಹು ಅಪರೂಪದ ಘಟನೆಯೊಂದು ನಡೆದಿದೆ. ಮದುವೆಯಾಗಬೇಕಿದ್ದ ವರನ ಅಪ್ಪ, ವಧುವಿನ ತಾಯಿ ಜಂಟಿಯಾಗಿ ಪರಾರಿ ಆಗಿದ್ದಾರೆ. ಮಕ್ಕಳ ಮದುವೆ ನಿಶ್ಚಯ ಮಾಡಿ ತಾವುಗಳು ಮದುವೆ ಆಗಲು ಓಡಿ ಹೋಗಿದ್ದಾರೆ!

ಹೌದು, ಸೂರತ್‌ ಬಳಿಯ ಅಮ್ರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಧು-ವರರ ಪೋಷಕರು ಫೆಬ್ರವರಿ ಎರಡನೇ ವಾರ ಮದುವೆ ನಿಶ್ಚಯಿಸಿದ್ದರು. ಮದುವೆಗೆ ಸಕಲ ಸಿದ್ಧತೆಗಳೂ ನಡೆದಿದ್ದವು. ಆದರೆ ಅಚಾನಕ್ಕಾಗಿ ವರನ 48 ವರ್ಷದ ತಂದೆ, ವಧುವಿನ 46 ವರ್ಷದ ತಾಯಿ ಜೊತೆಯಾಗಿ ಪರಾರಿ ಆಗಿದ್ದಾರೆ.

ಈ ಇಬ್ಬರು ನಡುವಯಸ್ಸಿನವರ ಪ್ರೇಮ ಪುರಾಣ ಹೊಸದಾಗಿ ಪ್ರಾರಂಭವಾದದ್ದಲ್ಲ. ಇಬ್ಬರೂ ಕಾಲೇಜು ಸಮಯದಲ್ಲಿಯೇ ಪ್ರೀತಿಸಿದ್ದರಂತೆ. ಆದರೆ ಮಕ್ಕಳ ಮದುವೆ ಸಮಯದಲ್ಲಿ ಮತ್ತೆ ಭೇಟಿ ಆದ ಕಾರಣ ಹಳೆ ಪ್ರೇಮ ಮತ್ತೆ ಚಿಗುರೊಡೆದಿದೆ.

Grooms Father, Brides Mother Ran Away Together

ಕಾಲೇಜು ದಿನಗಳಲ್ಲಿ ಇಬ್ಬರೂ ನೆರೆ-ಹೊರೆಯವರೇ ಆಗಿದ್ದರಂತೆ. ಆಗಲೇ ಇಬ್ಬರಿಗೂ ಪರಿಚಯವಿದ್ದು, ಪ್ರೇಮವೂ ಇತ್ತಂತೆ. ಆಗ ಒಂದಾಗಲಾಗದಿದ್ದ ಈ ಜೋಡಿ ಈಗ ಮಕ್ಕಳ ಮದುವೆ ಸಮಯದಲ್ಲಿ 'ಒಂದಾಗಿದೆ'.

ವರನ ತಂದೆ ಸ್ಥಳೀಯ ರಾಜಕಾರಣಿ ಆಗಿದ್ದು, ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿದ್ದರು. ವರನ ತಾಯಿಯೂ ಉದ್ಯೋಗದಲ್ಲಿದ್ದರು. ಈಗ ಈ ಇಬ್ಬರೂ ಓಡಿ ಹೋಗಿರುವುದರಿಂದ ಅವರ ಮಕ್ಕಳ ಮದುವೆ ಮುರಿದುಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+