ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಭಾರಿ ಮಳೆಯಿಂದ ಪ್ರವಾಹ: ಹಲವು ರೈಲುಗಳು ರದ್ದು

|
Google Oneindia Kannada News

ಅಹಮದಾಬಾದ್ ಜುಲೈ 12: ತೀವ್ರ ಮಳೆಯಿಂದಾಗಿ ಗುಜರಾತ್ ನ ರಂಗು ಹದಗೆಟ್ಟಿದ್ದು ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ರೈಲು ಹಳಿಗಳ ಮೇಲೆ ನೀರು ನಿಂತಿರುವುದರಿಂದ ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಪಶ್ಚಿಮ ರೈಲ್ವೆ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

'ವಡೋದರಾ ವಿಭಾಗದ ದಾಭೋಯ್ ಮತ್ತು ಏಕತಾ ನಗರ ನಿಲ್ದಾಣಗಳ ನಡುವಿನ ಹಳಿಗಳ ವೈಫಲ್ಯದಿಂದಾಗಿ, ಪಶ್ಚಿಮ ರೈಲ್ವೆಯ ಕೆಲವು ರೈಲುಗಳನ್ನು ಇಂದು ರದ್ದುಗೊಳಿಸಲಾಗಿದೆ' ಎಂದು ಪಶ್ಚಿಮ ರೈಲ್ವೆ ಹೇಳಿದೆ. ರದ್ದಾದ ರೈಲುಗಳ ಸಂಪೂರ್ಣ ವಿವರಗಳನ್ನು ನೀವು https://enquiry.indianrail.gov.in/mntes/ ನಲ್ಲಿ ಪಡೆಯಬಹುದು.

ಅಹಮದಾಬಾದ್ ನಗರದಲ್ಲಿ ಭಾನುವಾರ ರಾತ್ರಿ 219 ಮಿಮೀ ಮಳೆಯಾಗಿದೆ. ಇದರಿಂದಾಗಿ ಅನೇಕ ವಸತಿ ಪ್ರದೇಶಗಳಲ್ಲಿ ನೀರು ನಿಂತಿದೆ ಮತ್ತು ಅಂಡರ್‌ಪಾಸ್‌ಗಳು ಮತ್ತು ರಸ್ತೆಗಳಲ್ಲಿ ಪ್ರವಾಹ ಉಂಟಾಗಿದೆ. ಸೋಮವಾರ ನಗರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ವಲ್ಸಾದ್ ಜಿಲ್ಲೆಯ ಅಂಬಿಕಾ ನದಿಯ ಪ್ರವಾಹದ ದಡದಲ್ಲಿ ಸಿಲುಕಿದ್ದ 16 ಜನರನ್ನು ಸುರಕ್ಷಿತವಾಗಿ ಹೆಲಿಕಾಪ್ಟರ್ ಮೂಲಕ ಕರೆತಂದಿತು. ಗುಜರಾತ್‌ನ ವಿವಿಧ ಭಾಗಗಳಿಂದ 9,000 ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು 468 ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ.

ಹಲವಾರು ಪ್ರದೇಶಗಳು ಜಲಾವೃತ

ಹಲವಾರು ಪ್ರದೇಶಗಳು ಜಲಾವೃತ

ಇಂದು ಕೂಡ ಗುಜರಾತ್‌ನಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ. ಅಹಮದಾಬಾದ್‌ನಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಅಹಮದಾಬಾದ್‌ನಲ್ಲಿ 219 ಮಿಮೀ ಮಳೆಯಾಗಿದ್ದು, ಇಲ್ಲಿಂದ ಸುಮಾರು ಎರಡು ಸಾವಿರ ಜನರನ್ನು ರಕ್ಷಿಸಲಾಗಿದೆ. ಇಂದು ಸೂರತ್ ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ನವಸಾರಿ, ವಲ್ಸಾದ್, ಡೋಂಗ್ ಮತ್ತು ಛೋಟಾ ಉದಯ್‌ಪುರ ಕೂಡ ಜಲಾವೃತವಾಗಿದ್ದು, ಅಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಗುಜರಾತ್‌ನಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ಅಂಕಿ ಅಂಶದ ಪ್ರಕಾರ, ಭಾರೀ ಮಳೆಯಿಂದಾಗಿ ಜೂನ್ 1 ರಿಂದ 63 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಎಲ್ಲಿಂದ ಎಲ್ಲಿಗೆ? ಯಾವ ರೈಲು ರದ್ದು?

ಎಲ್ಲಿಂದ ಎಲ್ಲಿಗೆ? ಯಾವ ರೈಲು ರದ್ದು?

ರೈಲು ಸಂಖ್ಯೆ. 09107 ಪ್ರತಾಪ್ ನಗರ - ಏಕತಾ ನಗರ MEMU

ರೈಲು ಸಂಖ್ಯೆ. 09108 ಏಕತಾ ನಗರ ಪ್ರತಾಪ್ ನಗರ MEMU

ರೈಲು ಸಂಖ್ಯೆ. 09109 ಪ್ರತಾಪ್ ನಗರ ಏಕತಾ ನಗರ MEMU

ರೈಲು ಸಂಖ್ಯೆ. 09110 ಏಕತಾ ನಗರ - ಪ್ರತಾಪ್ ನಗರ MEMU

ರೈಲು ಸಂಖ್ಯೆ. 09113 ಪ್ರತಾಪ್ ನಗರ- ಏಕತಾ ನಗರ MEMU

ರೈಲು ಸಂಖ್ಯೆ. 09114 ಏಕತಾ ನಗರ - ಪ್ರತಾಪ್ ನಗರ MEMU

ರೈಲು ಸಂಖ್ಯೆ. 20947 ಅಹಮದಾಬಾದ್ - ಏಕತಾ ನಗರ ಜನ ಶತಾಬ್ದಿ

ರೈಲು ಸಂಖ್ಯೆ. 20950 ಏಕತಾ ನಗರ - ಅಹಮದಾಬಾದ್ ಜನ ಶತಾಬ್ದಿ

ಎಲ್ಲಿಂದ ಎಲ್ಲಿಗೆ? ಯಾವ ರೈಲು ರದ್ದು?

ಎಲ್ಲಿಂದ ಎಲ್ಲಿಗೆ? ಯಾವ ರೈಲು ರದ್ದು?

12927 ದಾದರ್ - ಏಕ್ತಾ ನಗರ ಎಕ್ಸ್‌ಪ್ರೆಸ್ ಅನ್ನು ವಡೋದರಾ ಮತ್ತು ಏಕ್ತಾ ನಗರ್ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

12928 ಏಕತಾ ನಗರ - ದಾದರ್ ಎಕ್ಸ್‌ಪ್ರೆಸ್ ಅನ್ನು ಏಕತಾ ನಗರ ಮತ್ತು ವಡೋದರಾ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ರೈಲು ಸಂಖ್ಯೆ 19489 ಅಹಮದಾಬಾದ್ - ಗೋರಖ್‌ಪುರ ಎಕ್ಸ್‌ಪ್ರೆಸ್ 12.07.2022 09.10 ಗಂಟೆಗೆ ಹೊರಡುವುದು ಈಗ ಅಹಮದಾಬಾದ್‌ನಿಂದ 15.30 ಗಂಟೆಗೆ ಹೊರಡಲಿದೆ.

12.07.2022 ರ ರೈಲು ಸಂಖ್ಯೆ 20903 ಏಕತಾ ನಗರ - ವಾರಣಾಸಿ ಮಹಾಮಾನ ಎಕ್ಸ್‌ಪ್ರೆಸ್ ವಡೋದರಾದಿಂದ ಏಕತಾ ನಗರ ಮತ್ತು ವಡೋದರಾ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.

ಎಲ್ಲೆಲ್ಲಿ ಮಳೆ

ಎಲ್ಲೆಲ್ಲಿ ಮಳೆ

ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮುಂದಿನ 24 ಗಂಟೆಗಳಲ್ಲಿ ದೆಹಲಿ, ಯುಪಿ, ಬಿಹಾರ, ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ, ಮರಾಠವಾಡ, ಮಹಾರಾಷ್ಟ್ರ, ರಾಜಸ್ಥಾನ, ಕೊಂಕಣ, ಗೋವಾ, ಕರಾವಳಿ ಕರ್ನಾಟಕ, ಅಂಡಮಾನ್, ಜಮ್ಮು-ಕಾಶ್ಮೀರದಲ್ಲಿ ಮಳೆ ಮುನ್ಸೂಚನೆ ನಿಡಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಒಡಿಶಾ, ತೆಲಂಗಾಣ, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಗುಜರಾತ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜನರು ಮನೆಯಿಂದ ಹೊರಗೆ ಕಾಲಿಡುವಾಗ ಎಚ್ಚರಿಕೆ ವಹಿಸಬೇಕು ಎಂದು ಮುನ್ಸೂಚನೆ ನೀಡಲಾಗಿದೆ.

English summary
Due to heavy rains low-lying areas of Gujarat were inundated and many trains were canceled due to standing water on railway tracks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X