'ಎರಡೇ ತಿಂಗಳು- ನಾವಿಲ್ಲಿ ಅಧಿಕಾರಕ್ಕೆ ಬರುತ್ತೇವೆ': ಗುಜರಾತ್‌ ಪೊಲೀಸರಿಗೆ ಕೇಜ್ರಿವಾಲ್‌ ಎಚ್ಚರಿಕೆ

ಅಹಮದಾಬಾದ್‌, ಸೆಪ್ಟೆಂಬರ್‌ 13: ತಮ್ಮ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದ ಆಟೋ ಚಾಲಕನ ಮನೆಗೆ ಊಟಕ್ಕೆ ಹೊರಟಿದ್ದ ವೇಳೆ ಅವರನ್ನು ತಡೆದ ಅಹಮದಾಬಾದ್‌ ಪೊಲೀಸರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಟೋ ಮೂಲಕ ಅಹಮದಾಬಾದ್‌ನಲ್ಲಿ ಚಾಲಕನ ಮನೆಗೆ ಊಟಕ್ಕೆ ಹೋಗುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ತಡೆದ ಗುಜರಾತ್ ಪೊಲೀಸರಿಗೆ ಕೇಜ್ರಿವಾಲ್‌ ತರಾಟೆಗೆ ತೆಗೆದುಕೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಲಾ ವಿಷಯಗಳಲ್ಲಿ ಬಿಜೆಪಿ ಆಡಳಿತವಿರುವ ಗುಜರಾತ್ ಪೊಲೀಸ್ ಸಿಬ್ಬಂದಿಯನ್ನು ಬೆಂಬಲಿಸುತ್ತದೆ. ಮುಂಬರುವ ಗುಜರಾತ್ ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬರಲಿದೆ. ಗುಜರಾತ್ ಪೊಲೀಸರಿಗೆ ನನ್ನ ಮನವಿಯೆಂದರೆ ಗ್ರೇಡ್ ಪೇ ಮತ್ತು ಇತರ ಎಲ್ಲ ವಿಷಯಗಳಲ್ಲಿ ನಾನು ನಿಮಗೆ ಬೆಂಬಲ ನೀಡಿದ್ದೇನೆ. ನಾವು ಸರ್ಕಾರ ರಚನೆಯ ನಂತರ ಜಾರಿಗೊಳಿಸುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ. ಕೇವಲ ಎರಡು ತಿಂಗಳುಗಳು ಉಳಿದಿವೆ. ಬಿಜೆಪಿಯಲ್ಲಿರುವವರು ತಪ್ಪು ಮಾಡುವಂತೆ ಹೇಳಿದರೆ ಅದನ್ನು ನಿರಾಕರಿಸಿ ಬಿಜೆಪಿ ರಾಜ್ಯದಿಂದ ಹೊರನಡೆಯುತ್ತದೆ, ಎಎಪಿ ಬರಲಿದೆ ಎಂದು ಅವರು ಹೇಳಿದ್ದಾರೆ.

Ahmedabad: Arvind Kejriwal warns to Gujarat police

ಪ್ರತಿಭಟನೆ ಮತ್ತು ಎಎಪಿ ಅಧಿಕಾರಕ್ಕೆ ಬಂದರೆ ಸಂಬಳ ಪರಿಷ್ಕರಣೆಗಾಗಿ ಕೇಜ್ರಿವಾಲ್ ಅವರ ಚುನಾವಣಾ ಪೂರ್ವ ಭರವಸೆಯ ನಂತರ ಗುಜರಾತ್ ಸರ್ಕಾರ ಕಳೆದ ತಿಂಗಳು ರಾಜ್ಯ ಪೊಲೀಸ್ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ತನ್ನ ಆಟೋ ರಿಕ್ಷಾ ಸವಾರಿಯ ವೇಳೆ ಅಹಮದಾಬಾದ್‌ನ ಬೀದಿಗಳಲ್ಲಿ ತಡೆದ ನಂತರ ಪೊಲೀಸರಿಗೆ ಅರವಿಂದ್‌ ಕೇಜ್ರಿವಾಲ್‌ ಅವರು ಭರವಸೆ ನೀಡಿದ್ದಾರೆ. ತಮ್ಮ ಪಕ್ಷದ ಪ್ರಚಾರಕ್ಕಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್ ಅವರು ಆಟೋ ಚಾಲಕನ ಮನೆಯಲ್ಲಿ ಊಟಕ್ಕೆ ಹೋಗಲು ಒಪ್ಪಿಕೊಂಡಿದ್ದರು.

ಅವರು ನಿನ್ನೆ ಸಂಜೆ ತಾವು ತಂಗಿದ್ದ ಹೋಟೆಲ್‌ನಿಂದ ಹೊರಟು ಆಟೋ ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದಾಗ ಪೊಲೀಸರು ಅವರನ್ನು ತಡೆದು ಭದ್ರತಾ ಸಮಸ್ಯೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಅಹಮದಾಬಾದ್‌ನಲ್ಲಿ ಅಮ್‌ ಆದ್ಮಿ ಪಕ್ಷದ ಪರ ಪ್ರಚಾರ ಮಾಡಲು ಹೋಗುತ್ತಿದ್ದ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಪೊಲೀಸರು ತಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+