• search
  • Live TV
ಆಗ್ರಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಟ್ಟ ಮಂಜಿನಿಂದ ಎಂಟು ವಾಹನಗಳ ಸರಣಿ ಅಪಘಾತ: ಮೂವರು ಸಾವು

|
Google Oneindia Kannada News

ಆಗ್ರಾ, ಜನವರಿ 1: ತೀವ್ರ ಮಂಜಿನ ವಾತಾವರಣದಿಂದ ಮಾರ್ಗ ಸರಿಯಾಗಿ ಗೋಚರಿಸದೆ ಸುಮಾರು ಎಂಟು ವಾಹನಗಳು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭವಿಸಿದೆ. ಶುಕ್ರವಾರ ಬೆಳಿಗ್ಗೆ ಈ ದುರ್ಘಟನೆ ಉಂಟಾಗಿದೆ.

ಘಟನೆಯಲ್ಲಿ ಮೂವರು ಮೃತಪಟ್ಟಿದ್ದರೆ, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಿಜಿಐ ಸೈಫೈಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ಮುಂಜಾನೆ ದಟ್ಟವಾದ ಮಂಜು ಆವರಿಸಿದ್ದ ಕಾರಣ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಮುಂದೆ ಸಾಗುತ್ತಿದ್ದ ವಾಹನದ ವೇಗ ತಿಳಿಯದೆ ಹಿಂದಿನ ವಾಹನ ಡಿಕ್ಕಿ ಹೊಡೆದಿದೆ. ಅದರ ಬೆನ್ನಲ್ಲೇ ಉಳಿದ ವಾಹನಗಳು ಕೂಡ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಅಧಿಕವಾಗಿದ್ದು, ಮಧ್ಯಾಹ್ನದ ವೇಲೆಯೂ ಮಂಜುಮುಸುಕಿದ ವಾತಾವರಣ ಉಂಟಾಗುತ್ತಿದೆ. ಇದರಿಂದ ಸೂರ್ಯನ ದರ್ಶನವಾಗುತ್ತಿಲ್ಲ. ಈ ವಾತಾವರಣ ರಸ್ತೆ ಅಪಘಾತದಂತಹ ಅಪಾಯಗಳಿಗೆ ಕಾರಣವಾಗುತ್ತಿದೆ. ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇ ನಲ್ಲಿ ಚಳಿಗಾಲದ ಅವಧಿಯಲ್ಲಿ ಸರಣಿ ಅಪಘಾತಗಳು ಸಾಮಾನ್ಯವಾಗಿದೆ.

English summary
Three killed and 5 were injured when 8 vehicles collided on the Agra-Lucknow Expressway dure to dense fog on Friday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion