• search
 • Live TV
ಆಗ್ರಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀಕೃಷ್ಣನ ಮೂರ್ತಿಯೊಂದಿಗೆ ಅಳುತ್ತಾ ಆಸ್ಪತ್ರೆಗೆ ಓಡಿ ಬಂದ ಪೂಜಾರಿ: ವೈದ್ಯರಿಂದ ಚಿಕಿತ್ಸೆ

|
Google Oneindia Kannada News

ಆಗ್ರಾ. ನವೆಂಬರ್ 19: ದೇವರ ಮೇಲಿನ ಅಪಾರವಾದ ಭಕ್ತಿ ಕೆಲವೊಂದು ಬಾರಿ ಮನುಷ್ಯನನ್ನು ಹೀಗೂ ಮಾಡಿಸಿಬಿಡುತ್ತದೆ. ಶ್ರೀಕೃಷ್ಣನ ಪರಮಭಕ್ತನೊಬ್ಬ ಮೂರ್ತಿಯನ್ನು ಹಿಡಿದು ಆಸ್ಪತ್ರೆಗೆ ಅಳುತ್ತಾ ಓಡೋಡಿ ಬಂದ ಘಟನೆ ಆಗ್ರಾದ ತಾಜ್ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಶ್ರೀಕೃಷ್ಣನ ಮೇಲಿನ ಅಚಲ ಭಕ್ತಿಯುಳ್ಳ ಭಕ್ತನ ಮನಕಲಕುವ ಘಟನೆಯೊಂದು ಶುಕ್ರವಾರ ನಡೆದಿದೆ. ಲಡ್ಡು ಗೋಪಾಲನಿಗೆ ಸ್ನಾನ ಮಾಡಿಸುವಾಗ ಕೃಷ್ಣನ ವಿಗ್ರಹ ಬಿದ್ದು ಮೂರ್ತಿಯ ಕೈ ಮುರಿದಿದೆ.

ಈ ವೇಳೆ ಪೂಜಾರಿ ತನ್ನವರ ಕೈ ಮುರಿದಂತೆ ಭಗ್ನಗೊಂಡ ದೇವರ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಆಸ್ಪತ್ರೆಗೆ ಹೋಗಿದ್ದಾನೆ. ಜಿಲ್ಲಾಸ್ಪತ್ರೆಗೆ ಬಂದು ಸಾಲಿನಲ್ಲಿ ನಿಂತು ಸ್ಲಿಪ್ ಮಾಡಿಸಿಕೊಂಡಿದ್ದಾನೆ. ವೈದ್ಯರ ಬಳಿ ತನ್ನ ಅಳಲು ತೋಡಿಕೊಂಡಿದ್ದಾನೆ. ಅಳುತ್ತಾ ವಿಗ್ರಹಕ್ಕೆ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಮಾತ್ರವಲ್ಲದೇ ಲಡ್ಡು ಗೋಪಾಲ್ ವಿಗ್ರವನ್ನು ಅಲ್ಲೇ ಆಸ್ಪತ್ರೆಗೆ ದಾಖಲಿಸುವಂತೆ ಒತ್ತಾಯಿಸಿದ್ದಾನೆ. ಪೂಜಾರಿಯ ವರ್ತನೆ ಕಂಡು ಆಸ್ಪತ್ರೆಯಲ್ಲಿರುವ ವೈದ್ಯರು, ಜನ ಆಶ್ಚರ್ಯಗೊಂಡಿದ್ದಾರೆ. ಪೂಜಾರಿಯ ಅಚಲ ಭಕ್ತಿ, ಮುಗ್ಧತೆ ಕಂಡು ವೈದ್ಯರು ಮೂರ್ತಿಗೆ ಚಿಕಿತ್ಸೆ ಕೂಡ ನೀಡಿದ್ದಾರೆ.

ಲಡ್ಡು ಗೋಪಾಲ್ ಕೈ ಮುರಿದಿದ್ದು ಹೇಗೆ?

ಶಹಗಂಜ್‌ನ ಖಾಸ್ಪುರ ಪ್ರದೇಶದ ಪಥ್ವಾರಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಅರ್ಚಕ ಲೇಖ್ ಸಿಂಗ್ ಸುಮಾರು 25-30 ವರ್ಷಗಳಿಂದ ದೇವಸ್ಥಾನದಲ್ಲಿ ಕುಳಿತಿರುವ ಲಡ್ಡು ಗೋಪಾಲ್‌ಗೆ ಸೇವೆ ಸಲ್ಲಿಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ 5 ಗಂಟೆಗೆ ಸ್ನಾನ ಮಾಡುತ್ತಿದ್ದಾಗ ಲೇಖ್ ಸಿಂಗ್ ಕೈಯಿಂದ ಲಡ್ಡು ಗೋಪಾಲ್ ಬಿದ್ದು ಕೈ ಮುರಿದಿದೆ. ಬಳಿಕ ಗಾಬರಿಗೊಂಡ ಸಿಂಗ್ ತನ್ನ ಮಗುವಿಗೆ ಗಾಯವಾದಂತೆ ಶ್ರೀಕೃಷ್ಣನ ಕೈಗೆ ಮುಲಾಮು ಹಚ್ಚಿದ್ದಾರೆ. ಬಳಿಕ ಮುರಿದ ಕೈಯೊಂದಿಗೆ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಮಡಿಲಲ್ಲಿಟ್ಟುಕೊಂಡು 8 ಗಂಟೆವರೆಗೂ ಕಾದಿದ್ದಾರೆ.

ಲಡ್ಡು ಗೋಪಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಪೂಜಾರಿ ಒತ್ತಾಯ

ಆಸ್ಪತ್ರೆಯಲ್ಲಿ ಲಡ್ಡು ಗೋಪಾಲ್ ಅವರನ್ನು ಚಿಕಿತ್ಸೆ ನೀಡಲು ಒತ್ತಾಯಿಸಿದ್ದಾರೆ. ಆದರೆ, ಲಡ್ಡು ಗೋಪಾಲ್‌ಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಯಾರೂ ಸಿದ್ಧರಿರಲಿಲ್ಲ. ಜೊತೆಗೆ ಅದು ವಿಗ್ರಹ ಜೀವವಿರುವ ಮನುಷ್ಯನಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಇದರಿಂದ ಆತನಿಗೆ ತುಂಬಾ ಬೇಸರವಾಯಿತು. ನಂತರ ಲಡ್ಡು ಗೋಪಾಲ್‌ಗೆ ಚಿಕಿತ್ಸೆ ಸಿಗದಿದ್ದಾಗ ಪೂಜಾರಿ ಕಂಬಿಬೇಲಿಯಲ್ಲಿ ತಲೆಗೆ ಹೊಡೆದು ಅಳಲು ತೋಡಿಕೊಂಡರು. ನಂತರ ಅಳುತ್ತಾ ಮೂರ್ಛೆ ಹೋದರು. ಇದನ್ನು ಕಂಡು ಅಲ್ಲಿ ಜನಸಾಗರವೇ ನೆರೆದಿತ್ತು. ದೇವರಿಗೆ ನೋವಾಗುವುದಿಲ್ಲ ಎಂದು ಭದ್ರತಾ ಸಿಬ್ಬಂದಿ ಅವರಿಗೆ ವಿವರಿಸಿದರು. ಆದರೆ ಲಡ್ಡು ಗೋಪಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕೆಂಬ ಒತ್ತಾಯದ ಮೇರೆಗೆ ಪೂಜಾರಿ ಹಠ ಹಿಡಿದರು.

Poojary ran to hospital crying with idol of Sri Krishna: treatment by a doctor

ವೈದ್ಯರು ಲಡ್ಡು ಗೋಪಾಲ್‌ಗೆ ಪ್ಲಾಸ್ಟರ್ ಮಾಡಿದರು

ಪೇಪರ್ ಪ್ಲಾಸ್ಟರ್ ಮಾಡಲು ಹೋಗಿದ್ದ ಅರ್ಚಕನನ್ನೂ ಕಾವಲುಗಾರರು ಓಡಿಸಿದ್ದಾರೆ. ಅಳುತ್ತಿದ್ದ ಪೂಜಾರಿಯನ್ನು ನೋಡಿದ ಸಿಬ್ಬಂದಿ ಮುಖ್ಯ ಅಧೀಕ್ಷಕರಿಗೆ ತಿಳಿಸಿದ್ದಾರೆ. ಆಗ ಅವರು ವಿಗ್ರಹದ ಕೈಯನ್ನು ಬ್ಯಾಂಡೇಜ್ ಮಾಡಿದ್ದಾರೆ. ಮುಖ್ಯ ಅಧೀಕ್ಷಕ ಡಾ.ಎ.ಕೆ. ಅಗರ್ವಾಲ್ ಶ್ರೀಕೃಷ್ಣನ ಮುರಿದ ಕೈಯನ್ನು ಜೋಡಿಸಲು ಮುಂದಾಗಿದ್ದಾರೆ. ಇದಾದ ಬಳಿಕ ಸಿಎಸ್‌ಎಂ ಅಶೋಕ್‌ ಕುಮಾರ್‌ ತಮ್ಮ ಕ್ಯಾಬಿನ್‌ ಅನ್ನು ಆಪರೇಷನ್‌ ಥಿಯೇಟರ್‌ ಮಾಡಿಕೊಂಡರು. ವೈದ್ಯರು ಲಡ್ಡು ಗೋಪಾಲ್‌ಗೆ ಪ್ಲಾಸ್ಟರ್ ಮಾಡಿ ಕೈಜೋಡಿಸಿ ಅರ್ಚಕನಿಗೆ ಒಪ್ಪಿಸಿದರು.

ಭಾವನಾತ್ಮಕ ವಿಡಿಯೋವನ್ನು ವೀಕ್ಷಿಸಿ

   ರೈತರ ಕಾಯ್ದೆಗಳನ್ನು ಹಿಂಪಡೆದ ನರೇಂದ್ರ ಮೋದಿ | Oneindia Kannada

   ಸಿಎಂಎಸ್ ಡಾ.ಎ.ಕೆ.ಅಗರ್ವಾಲ್ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ನನ್ನ ಮುಂದೆ ಬಂದಿದೆ ಎಂದು ತಿಳಿಸಿದರು. ಲಡ್ಡು ಗೋಪಾಲ್ ಚಿಕಿತ್ಸೆ ಬಳಿಕವೂ ಅರ್ಚಕ ಲೇಖ್ ಸಿಂಗ್ ಕಣ್ಣೀರು ನಿಂತಿರಲಿಲ್ಲ. ಅರ್ಚಕರ ಭಕ್ತಿಯನ್ನು ಕಂಡು ಲಡ್ಡು ಗೋಪಾಲನ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಪೂಜಾರಿಯವರ ಈ ಅಚಲ ಭಕ್ತಿಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

   English summary
   A very touching incident of unwavering devotion to Lord Krishna has come to the fore in the Taj city of Agra.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X