ಜ್ಞಾನಭಾರತಿ ರೇಪ್: ಪರಾರಿಯಾಗಿದ್ದ ರಾಜಾ ಸಿಕ್ಕಿಬಿದ್ದ

ಬೆಂಗಳೂರು, ಸೆ. 10: ಜ್ಞಾನಭಾರತಿ ಕ್ಯಾಂಪಸ್‌ ಆವರಣದಲ್ಲಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಎಂಟು ಆರೋಪಿಗಳ ಪೈಕಿ 3ನೇ ಆರೋಪಿ ರಾಜ ಅಲಿಯಾಸ್‌ ಮುತ್ತುರಾಜ ಅಪರಾಧ ನಡೆದ 11 ತಿಂಗಳ ಬಳಿಕ ಸೆರೆ ಸಿಕ್ಕಿಬಿದ್ದಿದ್ದಾನೆ.

ಗಮನಾರ್ಹವೆಂದರೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿಗೆ ಸಿಟಿ ಸಿವಿಲ್‌ ಕೋರ್ಟ್‌ ಕಳೆದ ಶುಕ್ರವಾರವಷ್ಟೇ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಒಟ್ಟು 8 ಆರೋಪಿಗಳು ಭಾಗಿಯಾಗಿದ್ದು, ಒಬ್ಬ ಬಾಲ ಅತ್ಯಾಚಾರಿಯ ವಿರುದ್ಧ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ಇನ್ನೂ ನಡೆಯುತ್ತಿದೆ.

Bangalore National Law School Nepali student gangrape 8th accused Raja surrender

ರಾಮನಗರದ ಕೈಲಾಂಚದ ಮೆಟಾರಿದೊಡ್ಡಿ ಗ್ರಾಮದ ರಾಜ ಅಲಿಯಾಸ್‌ ಮುತ್ತುರಾಜ (24) ನನ್ನು ಮಂಗಳವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ಜ್ಞಾನಭಾರತಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಬಾಲರಾಜ್‌ ನೇತೃತ್ವದ ತಂಡ ಆನೇಕಲ್‌ ತಾಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ ಮುತ್ತುರಾಜ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದೆ ಎಂದು ನಗರ ಪೊಲೀಸ್‌ ಆಯುಕ್ತ ರಾಘವೇಂದ್ರ ಔರಾದಕರ್‌ ತಿಳಿಸಿದರು.

ಸಿಕ್ಕಿ ಬಿದ್ದಿದ್ದು ಹೇಗೆ:
ಅತ್ಯಾಚಾರ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಮುತ್ತುರಾಜ ಗೋವಾಕ್ಕೆ ಪರಾರಿಯಾಗಿದ್ದ. ಆದರೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿ ಪಡೆಯುತ್ತಿದ್ದ. ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿರುವ ಬಗ್ಗೆಯೂ ತಿಳಿದುಕೊಂಡಿದ್ದ. ರಾಜನ ಪತ್ನಿ ತವರೂರು ಆನೇಕಲ್‌ ತಾಲೂಕಿನ ಕೆಬ್ಬೆದೊಡ್ಡಿ ಗ್ರಾಮವಾಗಿದ್ದು, ಆಕೆ ಆಗಾಗ್ಗೆ ತವರು ಮನೆಗೆ ಹೋಗಿ ಬರುತ್ತಿದ್ದಳು. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.

ರಾಮನಗರದ ಕೈಲಾಂಚದ ಮೆಟಾರಿದೊಡ್ಡಿ ಗ್ರಾಮ ಮತ್ತು ಆನೇಕಲ್‌ ತಾಲೂಕಿನ ಕೆಬ್ಬೆದೊಡ್ಡಿ ಗ್ರಾಮದ ಮೇಲೆ ತೀವ್ರ ನಿಗಾವಹಿಸಿದ್ದರು. ಪತ್ನಿಯೊಂದಿಗೆ ತಲೆಮರೆಸಿಕೊಂಡು ಬೇರೆಡೆ ಸಂಸಾರ ಮಾಡುವ ಯೋಚನೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆರೋಪಿ ರಾಜ ಗಣೇಶ ಹಬ್ಬಕ್ಕೆ ಮರಳುವನೆಂಬ ವಿಷಯ ಕಲೆಹಾಕಿದ್ದರು. ಪತ್ನಿ ತವರು ಮನೆಗೆ ಹೋಗಿರುವ ಬಗ್ಗೆ ತಿಳಿದ ಪೊಲೀಸರು ಅಲ್ಲಿಗೆ ರಾಜ ಹೋಗುವ ಸಾಧ್ಯತೆ ಇದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.

ಮಂಗಳವಾರ ಬೆಳಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪತ್ನಿಯ ತವರು ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ವೇಳೆ ರಾಜ ಮನೆಯಲ್ಲಿ ಅವಿತುಕುಳಿತಿದ್ದ.

ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಲಯ ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ 3ನೇ ಆರೋಪಿಯಾದ ರಾಜನನ್ನು ಸಹ ಸಿಟಿ ಸಿವಿಲ್‌ ಕೋರ್ಟ್‌ ಅಪರಾಧಿ ಎಂದು ಪರಿಗಣಿಸಿದೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ: ಜ್ಞಾನಭಾರತಿ ಕ್ಯಾಂಪಸ್‌ ಆವರಣದ ಹಳೇ ಪರೀಕ್ಷಾ ಭವನದ ಬಳಿ 2012ರ ಅಕ್ಟೋಬರ್ 13 ರ ರಾತ್ರಿ 9.30 ರ ಸುಮಾರಿನಲ್ಲಿ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿನಿ (NLSIU) ತನ್ನ ಪ್ರಿಯಕರನೊಂದಿಗೆ ಕಾರಿನಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ ಈ ಏಳು ಆರೋಪಿಗಳು ಗಂಧದ ಮರ ಕದಿಯಲು ವಿದ್ಯಾರ್ಥಿನಿ ಇದ್ದ ಪ್ರದೇಶಕ್ಕೆ ಆಗಮಿಸಿದ್ದರು. ಗಂಧದ ಮರಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಹಳೇ ಪರೀಕ್ಷಾ ಭವನದ ಬಳಿ ಪ್ರಿಯಕರನ ಜತೆ ಕಾರಿನಲ್ಲಿದ್ದ ನೇಪಾಳ ಮೂಲದ ಯುವತಿಯನ್ನು ನೋಡಿ ಅವರ ಮೇಲೆ ದಾಳಿಗೆ ಸಂಚು ರೂಪಿಸಿದ್ದಾರೆ.

ಕಾರಿನ ಗಾಜು ಒಡೆದು ಅವರಿಬ್ಬರನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಪ್ರಿಯಕರ ನಿರ್ಮಲ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಬಿಟ್ಟು ಯುವತಿಯನ್ನು ಮತ್ತೆ 2 ರಿಂದ 3 ಕಿಮೀ ದೂರದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.

ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ನಾಲ್ವರನ್ನು ರಾಮನಗರದ ಕಂದಾಯ ಭವನದ ಬಳಿ ಹಾಗೂ ಇಬ್ಬರನ್ನು ಮೆಟ್ಟಾರದೊಡ್ಡಿ ಗುಡ್ಡದಲ್ಲಿ ಸೆರೆ ಹಿಡಿದಿದ್ದರು. ಕೆಲವು ದಿನಗಳ ಬಳಿಕ ಮತ್ತೂಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+