ಗ್ಯಾಂಗ್‌ರೇಪ್: ಶಿಕ್ಷೆ ಪ್ರಕಟ, ಬಾಧಿತಳಿಗೆ ಥ್ಯಾಂಕ್ಸ್ ಹೇಳೋಣ

ಗಮನಾರ್ಹ ಅಂಶವೆಂದರೆ ಅತ್ಯಾಚಾರಕ್ಕೊಳಗಾದ ಕಾನೂನು ವಿದ್ಯಾರ್ಥಿನಿ ಘಟನೆಯ ನಂತರ ತನ್ನ ಶಿಕ್ಷಣವನ್ನು ಮುಂದುವರಿಸದೆ ನೇಪಾಳಕ್ಕೆ ವಾಪಸಾಗಿದ್ದಾರೆ. ಆದರೂ ಸ್ವತಃ ಕಾನೂನು ವಿದ್ಯಾರ್ಥಿನಿಯಾಗಿದ್ದ ಕಾರಣ ಕಾನೂನಿನ ಅಷ್ಟೂ ಪ್ರಕ್ರಿಯೆಗಳಿಗೆ ತನ್ನ ಸಾಕ್ಷ್ಯ ಪ್ರಧಾನವಾಗುತ್ತದೆ ಎಂಬುದನ್ನು ಅರಿತುಕೊಂಡು ಕಾನೂನಿನ ಕರೆಗೆ ಓಗೊಟ್ಟು, ಪ್ರತಿಯೊಂದು ಪ್ರಕ್ರಿಯೆಗೂ ಬೆಂಗಳೂರಿಗೆ ಬಂದು ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿದ್ದಾರೆ.
ಆದರೆ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ರೇಪ್ ಕೇಸಿನಲ್ಲಿ ಬಾಧಿತ ವಿದ್ಯಾರ್ಥಿನಿ ಪ್ರಕರಣದಿಂದ ಹಿಂದೆ ಸರಿದರು. ಆದರೆ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯಿರುತ್ತದೆ. ಅದನ್ನು ನಾವು ಗೌರವಿಸಬೇಕಾಗುತ್ತದೆ. ಏನೇ ಆಗಲಿ ಎರಡೂ ಪ್ರಕರಣದಲ್ಲಿ ಆರೋಪಿಗಳು ಕಾನೂನು ವ್ಯಾಪ್ತಿಯಿಂದ ಬಚಾವಾಗಲಿಲ್ಲ ಎಂಬುದೇ ಸಮಾಧಾನ.
ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಜೀವಾವಧಿ ಶಿಕ್ಷೆ ಕಡಿಮೆಯಾಯ್ತು. ಇನ್ನೂ ಕಠಿಣ ಶಿಕ್ಷೆ ವೀಧಿಸಬೇಕಿತ್ತು ವೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಮುಂದಿನ ವಾರ ದೆಹಲಿ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ವಿಶೇಷ ತೀರ್ಪು ನೀಡಲಿದೆ. ಅದು ಮುಂದೆ ಎಲ್ಲ ತೀರ್ಪುಗಳಿಗೂ ಮಾದರಿಯಾಗಲಿದೆ. ಆ ತೀರ್ಪನ್ನು ಆಧರಿಸಿ, ಜ್ಞಾನಭಾರತಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಹಾಗಾಗಿ ದೆಹಲಿ ಕೋರ್ಟ್ ತೀರ್ಪಿಗೆ ಕಾಯೋಣ.
ಜ್ಞಾನಭಾರತಿ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳು ಭಾಗಿಯಾಗಿದ್ದು, ಒಬ್ಬ ಬಾಲ ಅತ್ಯಾಚಾರಿಯೂ ಇದ್ದಾನೆ. ಅವನ ವಿರುದ್ಧ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ಇನ್ನೂ ನಡೆಯುತ್ತಿದೆ. ಮತ್ತೊಬ್ಬ ರಾಜಾ ಎಂಬುವವನು ಇನ್ನೂ ಪತ್ತೆಯಾಗಿಲ್ಲ. ಹಾಗಾಗಿ 6 ಮಂದಿಗೆ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿ, ನ್ಯಾಯಾಧೀಶ ಸಂಗಣ್ಣನವರ್ ಅವರು ಇದೀಗತಾನೆ ಆದೇಶ ಹೊರಡಿಸಿದ್ದಾರೆ.
ರಾಮನಗರ ಕೈಲಾಂಚ ಹೋಬಳಿಯ ಮೆಟ್ಟಾರೆದೊಡ್ಡಿ ಗ್ರಾಮದ ರಾಮ, ಮದ್ದೂರು ಮರಿಯಯ್ಯ, ಶಿವಣ್ಣ , ಈರಯ್ಯ, ಯಲಿಯಯ್ಯ ಅಲಿಯಾಸ್ ಕುಮಾರ ಹಾಗೂ ಮೈಸೂರು ಜಿಲ್ಲೆ ಮಾಸ್ತಿಗುಡಿಯ ದೊಡ್ಡ ಈರಯ್ಯ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.
ಪ್ರಕರಣದ ಹಿನ್ನೆಲೆ
ಜ್ಞಾನಭಾರತಿ ಕ್ಯಾಂಪಸ್ ಆವರಣದ ಹಳೇ ಪರೀಕ್ಷಾ ಭವನದ ಬಳಿ 2012ರ ಅಕ್ಟೋಬರ್ 13 ರ ರಾತ್ರಿ 9.30 ರ ಸುಮಾರಿನಲ್ಲಿ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿನಿ (NLSIU) ತನ್ನ ಪ್ರಿಯಕರನೊಂದಿಗೆ (ಕೇರಳದ ಕೊಲ್ಲಂ ಮೂಲದ, ಬೆಂಗಳೂರು IBM ಕಂಪನಿಯ ಟೆಕ್ಕಿ) ಕಾರಿನಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ ಎಂಟೂ ಆರೋಪಿಗಳು ಶ್ರೀಗಂಧದ ಮರ ಕದಿಯಲು ವಿದ್ಯಾರ್ಥಿನಿ ಇದ್ದ ಪ್ರದೇಶಕ್ಕೆ ಆಗಮಿಸಿದ್ದರು.
ಶ್ರೀಗಂಧದ ಮರಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಹಳೇ ಪರೀಕ್ಷಾ ಭವನದ ಬಳಿ ಪ್ರಿಯಕರನ ಜತೆ ಕಾರಿನಲ್ಲಿದ್ದ ನೇಪಾಳ ಮೂಲದ ಯುವತಿಯನ್ನು ನೋಡಿ ಅವರ ಮೇಲೆ ದಾಳಿಗೆ ಸಂಚು ರೂಪಿಸಿದ್ದಾರೆ. ಕಾರಿನ ಗಾಜು ಒಡೆದು ಅವರಿಬ್ಬರನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಬಿಟ್ಟು ಯುವತಿಯನ್ನು ಮತ್ತೆ 2 ಕಿಮೀ ದೂರದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.
ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ನಾಲ್ವರನ್ನು ರಾಮನಗರದ ಕಂದಾಯ ಭವನದ ಬಳಿ ಹಾಗೂ ಇಬ್ಬರನ್ನು ಮೆಟ್ಟಾರದೊಡ್ಡಿ ಗುಡ್ಡದಲ್ಲಿ ಸೆರೆ ಹಿಡಿದಿದ್ದರು. ಕೆಲವು ದಿನಗಳ ಬಳಿಕ ಮತ್ತೂಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications