ದಿಣ್ಣೂರು ಮುಖ್ಯರಸ್ತೆ: ಬಿಎಂಟಿಸಿಗೆ ಬೈಕ್ ಸವಾರ ಬಲಿ

ಇಂದು ಬೆಳಗ್ಗೆ ಹೆಬ್ಬಾಳದ ದಿಣ್ಣೂರು ಮುಖ್ಯ ರಸ್ತೆಯಲ್ಲಿ BMTC ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದಾಗ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತರನ್ನು ಕಾವಲ್ ಭೈರಸಂದ್ರ ನಿವಾಸಿ ಪ್ರಭು (23) ಎಂದು ಗುರುತಿಸಲಾಗಿದೆ.
ಪ್ರಭು ಬೈಕಿನಲ್ಲಿ ದಿನ್ನೂರು ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪ್ರಭು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಚುಂಚನ ಕಟ್ಟೆ ಬಳಿಯಿರುವ ಗ್ರೀನ್ ವ್ಯಾಲಿ ಸ್ಕೂಲಿನಲ್ಲಿ ranging ಭೂತ ನರ್ತನ ನಡೆದಿದೆ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ರೇವತಿ ಎಂಬ ಹೆಣ್ಣು ಮಗಳು ರ್ಯಾಗಿಂಗ್ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸುಬ್ರಹ್ಮಣ್ಯ ಪುರ ಪೊಲೀಸ್ ಸ್ಟೇಷನಿನಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications