ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿಗಳ ಬೆಂಗಾವಲು ಪಡೆಗೆ ನಿಯಂತ್ರಣ ಬೇಕೆ?

|
Google Oneindia Kannada News

ನವದೆಹಲಿ, ಸೆ.5 : ಕಚ್ಚಾ ತೈಲದ ಆಮದು ವೆಚ್ಚ ಹೆಚ್ಚಾಗುತ್ತಿದೆ ಇಂಧನ ಮಿತವ್ಯಯ ಆಂದೋಲನ ಪ್ರಾರಂಭಿಸಬೇಕು ಎಂದು ಕೇಂದ್ರ ಯುಪಿಎ ಸರ್ಕಾರ ಚಿಂತನೆ ನಡೆಸಿದೆ. ಆದರೆ, ತಮ್ಮ ಬೆಂಗಾವಲು ವಾಹನಗಳಿಗಾಗಿ ದಿನನಿತ್ಯ ಸಾವಿರಾರು ಲೀಟರ್ ಪೆಟ್ರೋಲ್ ಅನ್ನು ಜನಪ್ರತಿನಿಧಿಗಳು ಖರ್ಚು ಮಾಡುತ್ತಿದ್ದಾರೆ.

ಸೆ.16ರಿಂದ ದೇಶದಲ್ಲಿ ಇಂಧನ ಮಿತವ್ಯಯ ಸಪ್ತಾಹ ಆಚರಿಸಲು ಕೇಂದ್ರ ಯುಪಿಎ ಸರ್ಕಾರ ನಿರ್ಧರಿಸಿದೆ. ಮಿತವ್ಯಯ ಪಾಠ ಹೇಳುವ ಮಂತ್ರಿ ಮಹೋದಯರು, ತಮ್ಮ ಬೆಂಗಾವಲು ಪಡೆ ವಾಹನಗಳಿಗಾಗಿ ಸಾವಿರಾರು ಲೀಟರ್ ಪೆಟ್ರೋಲ್ ತುಂಬಿಸುತ್ತಾರೆ.

ಒಬ್ಬರು ಸಚಿವರ ಬೆಂಗಾವಲಿಗೆ ಕನಿಷ್ಠ 4-5 ವಾಹನಗಳು ಇರುತ್ತವೆ. ಈ ವಾಹನಗಳ ಮೈಲೇಜ್ ಲೀಟರ್ ಗೆ ಕೇವಲ 5 ಅಥವ 6 ಕಿ.ಮೀ. ಜನಪ್ರತಿನಿಧಿಗಳು ತಮ್ಮ ಬೆಂಗಾವಲು ವಾಹನಗಳಿಗಾಗಿ ಎಷ್ಟು ಪೆಟ್ರೋಲ್ ಖರ್ಚಾಗುತ್ತದೆ? ಎಂದು ಒಮ್ಮೆ ಆಲೋಚಿಸುವುದು ಒಳಿತು.

ಇಂಧನ ವ್ಯಯ ತಪ್ಪಿಸಲು ರಾತ್ರಿ ಪೆಟ್ರೋಲ್ ಬಂಕ್ ಮುಚ್ಚುವ ಸಾಹಸಕ್ಕೆ ಕೈ ಹಾಕಿದ್ದ ಕೇಂದ್ರ ಅದರಿಂದ ಹಿಂದೆ ಸರಿದಿದೆ. ಈಗ ಇಂಧನ ಮಿತವ್ಯಯ ಆಂದೋಲನದ ಬಗ್ಗೆ ಮಾತನಾಡುತ್ತಿದೆ. ಹಾಗಾದರೆ ದೇಶದ ಕೆಲವು ರಾಜಕಾರಣಿಗಳ ಬೆಂಗಾವಲು ವಾಹನಗಳು ಎಷ್ಟು? ಎಂದು ಒಮ್ಮೆ ತಿಳಿಯೋಣ ಬನ್ನಿ...

ಪ್ರಧಾನಿ ಯಾವ ಕಾರಿನಲ್ಲಿದ್ದಾರೆ ಸ್ವಾಮಿ

ಪ್ರಧಾನಿ ಯಾವ ಕಾರಿನಲ್ಲಿದ್ದಾರೆ ಸ್ವಾಮಿ

ದೇಶದ ಪ್ರಧಾನಿ ಮನಮೋಹನ್ ಸಿಂಗ್ ಸುತ್ತ 10 ಬೆಂಗಾವಲು ವಾಹನಗಳು ಇರುತ್ತವೆ. 7 ಬಿಎಂಡಬ್ಲ್ಯೂ ಸೀರಿಸ್ ಕಾರು, ಸೆಡಾನ್ಸ್ 2, ಟಾಟಾ ಸಫಾರಿ ಜ್ಯಾಮರ್ 1, 1 ಮರ್ಸಿಡಸ್ ಬೆಂಜ್ ಮತ್ತು ಒಂದು ಆಂಬ್ಯುಲೆನ್ಸ್ ಪ್ರಧಾನಿ ಕಾರಿನ ಸುತ್ತ ಇರುತ್ತದೆ. ನಮ್ಮ ಪ್ರಧಾನಿ ಕಚೇರಿ ಇಷ್ಟು ವಾಹನಗಳ ಪೆಟ್ರೋಲ್ ಖರ್ಚಿಗಾಗಿ ಎಷ್ಟು ಹಣ ವ್ಯಯಿಸಬಹುದು.

ಸೋನಿಯಾ ಗಾಂಧಿಯೂ ಕಡಿಮೆ ಇಲ್ಲ

ಸೋನಿಯಾ ಗಾಂಧಿಯೂ ಕಡಿಮೆ ಇಲ್ಲ

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಸಹ ಬಿಗಿಭದ್ರತೆ ವ್ಯವಸ್ಥೆ ಇದೆ. ಅವರ ಕಾರಿನ ಸುತ್ತಾ 5 ಬೆಂಗಾವಲು ಪಡೆ ಕಾರುಗಳು ಇರುತ್ತವೆ. 4 ಟಾಟಾ ಸಫಾರಿ ಮತ್ತು 1 ರೇಂಜ್ ರೋವರ್ ಕಾರಿನ ಭದ್ರತೆಯಲ್ಲಿ ಸೋನಿಯಾ ಪ್ರಯಾಣಿಸುತ್ತಾರೆ. ಇದಕ್ಕೆ ಎಷ್ಟು ಪೆಟ್ರೋಲ್ ಖರ್ಚಾಗುತ್ತದೆ.

ಅಡ್ವಾಣಿಗೆ ಹಿಂದೆ ಎಷ್ಟು ಕಾರು?

ಅಡ್ವಾಣಿಗೆ ಹಿಂದೆ ಎಷ್ಟು ಕಾರು?

ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಹಿಂದೆ ಸಲ 5 ಕಾರುಗಳಿರುತ್ತವೆ. ಅಡ್ವಾಣಿ ಅಂಬಾಸಿಡರ್ ಕಾರಿನಲ್ಲಿ ಸಂಚರಿಸುತ್ತಾರೆ. ಅವರ ಸುತ್ತಾ 4 ಜ್ಯಾಮರ್ ಅಳವಡಿತ ಅಂಬಾಸಿಡರ್ ಕಾರುಗಳು ಸಂಚರಿಸುತ್ತವೆ.

ನರೇಂದ್ರ ಮೋದಿ ಹಿಂದೆ 9 ಕಾರು

ನರೇಂದ್ರ ಮೋದಿ ಹಿಂದೆ 9 ಕಾರು

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಅವರ ಹಿಂದೆ 8 ಸ್ಕಾರ್ಪಿಯೋ ಕಾರುಗಳು ಬೆಂಗಾವಲಿಗಾಗಿ ಇರುತ್ತವೆ. ಜೊತೆಗೆ ಆಂಬ್ಯುಲೆನ್ಸ್, ಸ್ಫೋಟ ಶೋಧಕ ಮತ್ತು ಫೈರ್ ಫೈಟರ್ ಸಹ ಇರುತ್ತದೆ.

ಒಮರ್ ಅಬ್ದುಲ್ಲಾ ಪ್ರಧಾನಿಗೂ ಕಡಿಮೆ ಇಲ್ಲ

ಒಮರ್ ಅಬ್ದುಲ್ಲಾ ಪ್ರಧಾನಿಗೂ ಕಡಿಮೆ ಇಲ್ಲ

ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ದೇಶದ ಪ್ರಧಾನಿಯಂತೆ ಬಿಗಿ ಭದ್ರತೆಯಲ್ಲಿ ಸಂಚರಿಸುತ್ತಾರೆ. ಅವರು ಹಿಂದೆ 20 ರಿಂದ 25 ವಾಹನಗಳಿರುತ್ತವೆ. ಮಹೀಂದ್ರಾ ಸ್ಕಾರ್ಪಿಯೋ 4, ಟಾಟಾ ಸಫಾರಿ ನಾಲ್ಕು ವಾಹನಗಳು ಅವರಿಗೆ ರಕ್ಷಣೆ ನೀಡುತ್ತವೆ. ಇವರು ಎಷ್ಟು ಪೆಟ್ರೋಲ್ ಉಪಯೋಗಿಸಬಹುದು.

ಮುಖ್ಯಮಂತ್ರಿ ಬೆನ್ನಿಗೆ 20 ಕಾರು

ಮುಖ್ಯಮಂತ್ರಿ ಬೆನ್ನಿಗೆ 20 ಕಾರು

ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಸಹ ತಮ್ಮ ಬೆಂಗಾವಲಿಗೆ 20 ವಾಹನಗಳನ್ನು ಹೊಂದಿದ್ದಾರೆ. ಅಂಬಾಸಿಡರ್ ಕಾರಿನಲ್ಲಿ ಸಂಚರಿಸುವ ಅವರು, ಅದಕ್ಕೆ ವಿಶೇಷ ವಿನ್ಯಾಸ ಮಾಡಿಸಿಕೊಂಡಿದ್ದಾರೆ.

ಜಯಲಲಿತಾ ಹಿಂದೆ 20 ಕಾರುಗಳು

ಜಯಲಲಿತಾ ಹಿಂದೆ 20 ಕಾರುಗಳು

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಮ್ಮ ಬೆಂಗಾವಲಿಗಾಗಿ 20 ಕಾರುಗಳನ್ನು ಹೊಂದಿದ್ದಾರೆ. ಸದಾ ಬುಲೆಟ್ ಪ್ರೂಫ್ ಟೊಯೋಟಾ ಕಾರಿನಲ್ಲಿ ಸಂಚರಿಸುವ ಅವರ ಸುತ್ತ-ಮುತ್ತ 20 ಕಾರುಗಳ ಕಲರವವಿರುತ್ತದೆ.

ಪಶ್ಚಿಮ ಬಂಗಾಳ ಸಿಎಂ ಓಕೆ

ಪಶ್ಚಿಮ ಬಂಗಾಳ ಸಿಎಂ ಓಕೆ

ಸದಾ ಸರಳವಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆಂಗಾವಲು ಪಡೆಗಳ ವಾಹಗಳು ಕಡಿಮೆ. ಕೇವಲ 5 ಕಾರುಗಳು ಅವರ ಬೆಂಗಾವಲಿಗೆ ಇರುತ್ತವೆ. ಹುಂಡೈ ಕಾರಿನಲ್ಲಿ ಯಾವುದೇ ಕೆಂಪು ದೀಪದ ಕೀರಿಟವಿಲ್ಲದೆ ಬ್ಯಾನರ್ಜಿ ಸಂಚರಿಸುತ್ತಾರೆ.

ಇವರು ಸ್ವಲ್ಪ ಸರಳ

ಇವರು ಸ್ವಲ್ಪ ಸರಳ

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಸಹ ತುಂಬ ಸರಳ ಜೀವಿ. ಅವರು ಅಂಬಾಸಿಡರ್ ಕಾರಿನಲ್ಲಿ ಸಂಚರಿಸುತ್ತಾರೆ ಇವರ ಸುತ್ತಾ ಕೇವಲ 5 ಕಾರುಗಳು ಬೆಂಗಾವಲಿಗೆ ಇರುತ್ತವೆ.

ಕಾರಿನಲ್ಲಿ ಪ್ರಕಾಶಮಾನ

ಕಾರಿನಲ್ಲಿ ಪ್ರಕಾಶಮಾನ

ಪಂಜಾಬ್ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಬೆಂಗಾವಲು ವಾಹನಗಳ ಸಂಖ್ಯೆ ಕೇವಲ 51. ಸಿಎಂ ಟೊಯೋಟಾ ಲ್ಯಾಂಡ್ ಕ್ರೂಸರ್ ಬುಲೆಟ್ ಪ್ರೂಪ್ ಕಾರಿನಲ್ಲಿ ಸಂಚರಿಸುತ್ತಾರೆ. ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಸಹ 20 ಬೆಂಗಾವಲು ಪಡೆವಾಹನಗಳನ್ನು ಹೊಂದಿದ್ದಾರೆ.

English summary
Wouldn't cutting the number of cars used by political class save significant amount of petrol? the government is seeking to impose fuel consumption curb on the people of India, the political class is exempt from the austerity drive. Neither the PM nor any of the other political leaders have volunteered to shorten the length of their cavalcades of fuel-guzzling SUVs and bulletproof Ambassadors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X