ದಂಡ ಕಟ್ಟಿ ಅಕ್ರಮ ಕಟ್ಟಡ ಸಕ್ರಮ ಮಾಡ್ಕೊಳ್ಳಿ

siddaramaiah
ಬೆಂಗಳೂರು, ಸೆ.4 : ಬಿಬಿಎಂಪಿ ಸೇರಿದಂತೆ ರಾಜ್ಯ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಕ್ಷೆ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮಂಗಳವಾರ ಅಧಿಸೂಚನೆ ಹೊರಡಿಸಿರುವ ಸರ್ಕಾರ, ವಸತಿ ಕಟ್ಟಡಗಳಿಗೆ ಶೇ.50, ವಸತಿಯೇತರ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.25 ರವರೆಗೆ ಮಾತ್ರ ಸಕ್ರಮಕ್ಕೆ ಅವಕಾಶ ಕಲ್ಪಿಸಿದ್ದು, 2014 ಆಗಸ್ಟ್‌ 27ರವರೆಗೂ ದಂಡ ಪಾವತಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದೆ.

ದಂಡ ಪಾವತಿಸಿ ಕಟ್ಟಡ ಸಕ್ರಮಗೊಳಿಸುವ ನಿಯಮ 2009 ಡಿಸೆಂಬರ್, 3ರ ಮೊದಲು ಕಟ್ಟಿರುವ ಕಟ್ಟಡಗಳಿಗೆ ಮಾತ್ರ ಅನ್ವಯಿಸಲಿದೆ. ವಸತಿ ಕಟ್ಟಡಗಳು ಶೇ.50ಕ್ಕಿಂತ ಹೆಚ್ಚು ಹಾಗೂ ವಾಣಿಜ್ಯ ಕಟ್ಟಡಗಳು ಶೇ.25ಕ್ಕಿಂತ ಹೆಚ್ಚು ನಿಯಮ ಉಲ್ಲಂಘಿಸಿದ್ದರೆ, ಯಾವ ಕ್ರಮ ಅನುಸರಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿಲ್ಲ.

ಯಾವುದು ಸಕ್ರಮ : ನಿರ್ಮಿತ ಪ್ರದೇಶದ ಉಲ್ಲಂಘನೆ (ನೆಲ ಮತ್ತು ಮೂರು ಅಂತಸ್ತಿಗೆ ಅನುಮತಿ ಪಡೆದು ಹೆಚ್ಚು ಅಂತಸ್ತು ನಿರ್ಮಾಣ) ಮತ್ತು ಸೆಟ್‌ಬ್ಯಾಕ್‌ ಬಿಡುವ ನಿಯಮ ಉಲ್ಲಂಘನೆ (ಕಟ್ಟಡದ ಸುತ್ತ ಇಂತಿಷ್ಟು ಅಡಿ ಜಾಗ ಬಿಡಬೇಕು ಎಂಬ ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡಗಳನ್ನು ಸಕ್ರಮಗೊಳಿಸಿಕೊಳ್ಳಬಹುದಾಗಿದೆ.

ದಂಡದ ಮೊತ್ತ : ವಸತಿ ಕಟ್ಟಡಗಳು ಶೇ.25ರಷ್ಟು ನಿಯಮ ಉಲ್ಲಂಘಿಸಿದ್ದರೆ ಆಯಾ ಪ್ರದೇಶದ ಮಾರುಕಟ್ಟೆ ದರದ ಅನ್ವಯ ಶೇ.6ರಷ್ಟು ಮತ್ತು ಶೇ.25ಕ್ಕಿಂತ ಹೆಚ್ಚು ಅಂದರೆ ಶೇ.50ರ ವರೆಗೆ ನಿಯಮ ಉಲ್ಲಂಘಿಸಿದ್ದರೆ ಶೇ.8ರಷ್ಟು ದಂಡ ಪಾವತಿಸಬೇಕಾಗುತ್ತದೆ.

ವಾಣಿಜ್ಯ ಕಟ್ಟಡಗಳು ಶೇ.12.5ರಷ್ಟು ನಿಯಮ ಉಲ್ಲಂಘಿಸಿದ್ದರೆ, ಮಾರುಕಟ್ಟೆ ದರದ ಶೇ.20ರಷ್ಟು ದಂಡ, ಶೇ.12.5ಕ್ಕಿಂತ ಹೆಚ್ಚು ಶೇ.25ರವರೆಗೆ ನಿಯಮ ಉಲ್ಲಂಘನೆಯಾಗಿದ್ದರೆ ಶೇ.30ರಷ್ಟು ದಂಡ ಪಾವತಿಸಿ ಸಕ್ರಮಗೊಳಿಸಿಕೊಳ್ಳಬೇಕಾಗಿದೆ.

ಸಂಪೂರ್ಣ ನಿಯಮ ಉಲ್ಲಂಘನೆ : ಕಟ್ಟಡದ ಮಾಲೀಕರು ಶೇ.100ರಷ್ಟು ನಿಯಮ ಉಲ್ಲಂಘಿಸಿದ್ದರೆ, ಸಕ್ರಮದ ವ್ಯಾಪ್ತಿಗೆ ಒಳಪಡುತ್ತಾರೆಯೇ? ಎಂಬ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿಲ್ಲ. ಬಿಬಿಎಂಪಿ ಹಾಗೂ ಇತರೆ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಶೇ.100ಕ್ಕೆ 100ರಷ್ಟು ನಿಯಮ ಉಲ್ಲಂಘನೆಯಾದ ಪ್ರಕರಣಗಳೇ ಹೆಚ್ಚಾಗಿದ್ದು, ಸರ್ಕಾರ ಈ ಬಗ್ಗೆ ಯಾವುದೇ ಆದೇಶ ನೀಡಿಲ್ಲ.

ನಕ್ಷೆ ಮಂಜೂರಾತಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ಕುರಿತು ವಿಧಾನಮಂಡಲದಲ್ಲಿ ವಿಧೇಯಕ ಅಂಗೀಕಾರಗೊಂಡು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಆಗಸ್ಟ್‌ 27ಕ್ಕೆ ರಾಜ್ಯಪಾಲರು ಇದಕ್ಕೆ ಸಹಿ ಹಾಕಿದ್ದರು. ಸದ್ಯ ಇದು ಜಾರಿಗೆ ಬಂದಿದ್ದು, ದಂಡ ಪಾವತಿಸಿ ಕಟ್ಟಡಗಳನ್ನು ಸಕ್ರಮಗೊಳಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+