ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಬೆತ್ತಲೆಗೊಳಿಸಿದರಂತೆ ಶಾಸಕರ ಬೆಂಬಲಿಗರು

|
Google Oneindia Kannada News

ಬೆಂಗಳೂರು, ಸೆ.4 : ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ತನ್ನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆಗೆ ಸಿಎಂ ಆದೇಶ ನೀಡಿದ್ದಾರೆ.

ಮಂಗಳವಾರ ಜನತಾದರ್ಶನ ಕಾರ್ಯಕ್ರಮದಲ್ಲಿ, ಗೋಕಾಕ್‌ ತಾಲೂಕಿನ ತಪಸಿ ಗ್ರಾಮದ ರೇಣುಕಾ ಎಂಬುವರು ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು, ತಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

janata darshan

ವಿಧಾನಸಭೆ ಚುನಾವಣೆ ವೇಳೆ ಅಕ್ರಮ ಮದ್ಯ ಸಾಗಾಟದ ಬಗ್ಗೆ ನನ್ನ ಪತಿ ಬಾಳಪ್ಪ ನಾಯಕ್‌ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ ಕಾರಣ, ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ನಮ್ಮ ದೂರು ದಾಖಲಿಸಿಕೊಳ್ಳದ ಪೊಲೀಸರು, ತಪ್ಪು ಮಾಹಿತಿ ನೀಡಿದರು ಎಂದು ಪತಿ ಬಾಳಪ್ಪ ನಾಯಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಘಟನೆ ಏನು : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅರಭಾವಿ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆಮ್ಮನಕೊಲು ಮತ್ತು ತಪಸಿ ಗ್ರಾಮದಲ್ಲಿ ಮಾರುತಿ ಎಂಬುವರು ಅಕ್ರಮ ಮದ್ಯ ಸಂಗ್ರಹಿಸಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರಿಗೆ ನೀಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು.

ಈ ದೂರನ್ನು ಬಾಳಪ್ಪ ನಾಯಕ್‌ ನೀಡಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಬೆಂಗಲಿಗರು, ಬಾಳಪ್ಪ ನಾಯಕ್ ಮತ್ತು ರೇಣುಕಾ ಅವರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಈ ವಿಚಾರದ ಕುರಿತು ರಾಜಿ ಸಂಧಾನಕ್ಕೆಂದು ಶಾಸಕರಿಗೆ ಸೇರಿದ ಎನ್‌.ಎಸ್‌.ಎಫ್ ಕಚೇರಿಗೆ ಕರೆದು ಅಲ್ಲಿಯೂ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು.

ಬಾಳಪ್ಪ ನಾಯಕ್ ಬಾಲಚಂದ್ರ ಜಾರಕಿಹೊಳಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ, ಬೆಂಬಲಿಗರು ಹಲ್ಲೆ ಮಾಡುವುದು ಬಿಡಲಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ರೇಣುಕಾ ವಿವರಿಸಿದ್ದಾರೆ.

ತನಿಖೆಗೆ ಆದೇಶ : ರೇಣುಕಾ ಅವರ ದೂರನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

English summary
Balappa Nayak of Gokak taluk in Belgaum district complained to Siddaramaiah that, supporters of former minister Balachandra Jarkiholi had assaulted him and his wife in retaliation that he had informed election officials about the sale of spurious liquor in the taluk during the recent assembly polls. On Tuesday, September 3, in janata darshan Balappa Nayak meets Siddaramaiah. CM direct the police to take note of the complaint and investigate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X