ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ತಪ್ಪು ಒಪ್ಪಿಕೊಂಡ 'ಕಿಂಗ್' ಮಲ್ಯ

By Mahesh
|
Google Oneindia Kannada News

ಬೆಂಗಳೂರು, ಸೆ.3: ಅರ್ಥಿಕ ಪರಿಸ್ಥಿತಿ ಹದಗೆಟ್ಟು ಸಾಲದ ಹೊರೆ ತಾಳಲಾರದೆ ಸಂಸ್ಥೆಯ ಸಿಬ್ಬಂದಿ,ಬ್ಯಾಂಕ್ ಹಾಗೂ ತೆರಿಗೆ ಇಲಾಖೆಯನ್ನು ದೂಷಿಸುತ್ತಿದ್ದ ಕಿಂಗ್ ಈಗ ಕೊನೆಗೂ ತಪ್ಪೊಪ್ಪಿಕೊಂಡಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಿನಿಂದ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿರುವ ಕಿಂಗ್ ಫಿಷರ್ ವಿಮಾನಗಳ ದುಃಸ್ಥಿತಿಗೆ ನಾನೇ ಕಾರಣ ಎಂದು ಮಲ್ಯ ತಲೆ ತಗ್ಗಿಸಿದ್ದಾರೆ. ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೆಲಕಚ್ಚಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ವಿಮಾನ ಕಂಪೆನಿ ಬ್ಯಾಂಕ್ ಸಾಲವನ್ನು ಮರುಪಾವತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಕಿಂಗ್ ಫಿಷರ್ ಕೇಂದ್ರ ಕಚೇರಿಯನ್ನು ಬ್ಯಾಂಕ್ ಗಳು ವಶಪಡಿಸಿಕೊಂಡಿದೆ. ಉದ್ಯಮಿ ವಿಜಯ್ ಮಲ್ಯ ಒಡೆತನದ (ಮುಂಬೈ ನಲ್ಲಿರುವ ) ಕಿಂಗ್ ಫಿಷರ್ಸ್ ಏರ್ ಲೈನ್ಸ್ ನ ಕೇಂದ್ರ ಕಚೇರಿಯನ್ನು ಹರಾಜು ಹಾಕಲು ಬ್ಯಾಂಕ್ ಗಳು ಸಜ್ಜಾಗಿದೆ. ವಿಮಾನ ಸಂಸ್ಥೆ 2012-123ರ ವಾರ್ಷಿಕ ವರದಿಯಲ್ಲಿ ಕೂಡಾ ಬೃಹತ್ ಹೂಡಿಕೆದಾರರ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರಕಟಿಸಿದೆ.

ಈ ವರದಿಗೆ ಸಹಿ ಹಾಕಿರುವ ಮಲ್ಯ, ಪ್ರತಿಯನ್ನು ಷೇರುದಾರರಿಗೆ ಕಳಿಸಲಾಗಿದ್ದು, ಸೆಪ್ಟೆಂಬರ್ 24 ರಂದು ಸರ್ವ ಸದಸ್ಯರ ಸಭೆ ನಿಗದಿಯಾಗಿದ್ದು ಕುತೂಹಲ ಕೆರಳಿಸಿದೆ. ವಿಮಾನಗಳ ಹಾರಾಟಕ್ಕೆ ಕಿಂಗ್ ಫಿಷರ್ ಸಂಸ್ಥೆ ನಿರ್ವಹಣೆಗೆ ಮುಳುವಾಗಿದ್ದು ಇಂಜಿನ್ ಗಳು, ಇದೇ ನಮಗೆ ದೊಡ್ಡ ಹೊಡೆತ ನೀಡಿದೆ, ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಮಲ್ಯ ಅವರು ವರದಿಗೆ ಸಹಿ ಹಾಕಿ ಹೇಳಿದ್ದೇನು?, ಇಂಜಿನ್ ದೋಷವೇ ಕಾರಣ ಎನ್ನುವುದು ಹೊಸ ತಂತ್ರವೇ? ಯುಬಿ ಸಮೂಹ ದಾವೆ ಹೂಡಿರುವುದು ಯಾರ ಮೇಲೆ? ಮುಂದೆ ಓದಿ...

ಇಂಜಿನ್ ದೋಷ ಕಾರಣ

ಇಂಜಿನ್ ದೋಷ ಕಾರಣ

ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಅಂಗವಾದ ಯುನೈಟೆಡ್ ಬ್ರೂವರೀಸ್ (ಹೋಲ್ಡಿಂಗ್ಸ್) ಲಿ. ಸಂಸ್ಥೆ ಈಗ ವಿಮಾನಗಳಿಗೆ ದೋಷ ಪೂರಿತ ಇಂಜಿನ್ ಒದಗಿಸಿದ ಇಂಟರ್ ನ್ಯಾಷನಲ್ ಏರೋ ಇಂಜಿನ್ಸ್ ಎಜಿ ವಿರುದ್ಧ ಹೈಕೋರ್ಟಿನಲ್ಲಿ ದೂರು ಸಲ್ಲಿಸಲಾಗಿತ್ತು. ಒಟ್ಟಾರೆ 1477 ಕೋಟಿ ರು ಪರಿಹಾರ ಧನ ಕೋರಲಾಗಿದೆ.

ನಿರಶನವೇ ಕಾರಣ

ನಿರಶನವೇ ಕಾರಣ

ವಾರ್ಷಿಕ ವರದಿಯಲ್ಲಿ ಹೇಳಿರುವಂತೆ ನಿರಂತರವಾಗಿ ಕೆಲಸ ನಿಂತಿದ್ದು ಸಂಸ್ಥೆಯ ನಿರ್ವಹಣೆ ವೆಚ್ಚ ಏರಲು ಕಾರಣವಾಯಿತು. ಅನಗತ್ಯವಾಗಿ ಸಿಬ್ಬಂದಿಗಳು ಮುಷ್ಕರ ಹೂಡಿದ್ದು ಕಾರಣೆ ಎಂದು ಹೇಳಲಾಗಿದೆ.

ಸುಮಾರು 17ಕ್ಕೂ ಅಧಿಕ ಬ್ಯಾಂಕುಗಳಿಂದ 8,000 ಕೋಟಿ ರು ಗೂ ಅಧಿಕ ಸಾಲದ ಹೊರೆಯನ್ನು ಮಲ್ಯ ಹೊತ್ತಿದ್ದು ಈ ಪೈಕಿ 1000 ಕೋಟಿ ರು ಮಾತ್ರ ಚುಕ್ತಾ ಮಾಡಿದ್ದರು. ಆದರೆ, ತಿಂಗಳುಗಳಿಂದ ಸಂಬಳ ಸಿಗದೆ ಒದ್ದಾಡುತ್ತಿದ್ದ ಸಿಬ್ಬಂದಿಗೆ ಬರಿ ಗೈ ತೋರಿಸಿದ್ದರು. ಸಂಬಳ ಸಿಗದೆ ಸಿಬ್ಬಂದಿಗಳು ನಿರಶನ ಮುಂದುವರೆಸಿದ್ದರು.

ರಿಕೆವರಿ ಯೋಜನೆ ಟುಸ್

ರಿಕೆವರಿ ಯೋಜನೆ ಟುಸ್

ಪುನಶ್ಚೇತನ ಯೋಜನೆಯ ಮೊದಲ ಹಂತದಲ್ಲಿ 7 ಏರ್ ಕ್ರಾಫ್ಟ್ (ಐದು ಏರ್ ಬಸ್ ಹಾಗೂ ಎರಡು ಎಟಿಆರ್ ವಿಮಾನ) ಚಾಲನೆಗೆ ಬಿಡುವ ಯೋಜನೆಯಿತ್ತು. ನಂತರ 21 ಏರ್ ಕ್ರಾಫ್ಟ್ (10 ಏರ್ ಬಸ್ ಹಾಗೂ 11 ಎಟಿಆರ್ )ಗಳನ್ನು 3-4 ತಿಂಗಳಲ್ಲಿ ಹಾರಾಟಕ್ಕೆ ಬಿಡುವ ಯೋಜನೆ ಇತ್ತು ಅದರೆ, ಎಲ್ಲವೂ ಟುಸ್ ಆಯಿತು.

ಯುಬಿ ಸಮೂಹದ ನೆರವು

ಯುಬಿ ಸಮೂಹದ ನೆರವು

ಮೊದಲ ಹಂತದ ಪುನಶ್ಚೇತನಕ್ಕೆ ಯುಬಿ ಸಮೂಹ ಸುಮಾರು 650 ಕೋಟಿ ರು ನೀಡುವ ಭರವಸೆ ಕೊಟ್ಟಿತ್ತು. ಎರಡನೇ ಹಂತದಲ್ಲಿ ಹೊಸ ಹೂಡಿಕೆದಾರರನ್ನು ಹುಡುಕುವುದು, ಸಾಲ ಪಾವತಿ, ಸೇವೆ ಹಾಗೂ ರೀ ಪೆಮೆಂಟ್ ಬಗ್ಗೆ ಯೋಜನೆ ಇತ್ತು. ಎಲ್ಲವೂ ಮಲ್ಯ ಅವರ ಆತುರದಿಂದ ವಿಫಲವಾಯಿತು.

ಮುಂದೇನು?

ಮುಂದೇನು?

ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.

ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿರುವುದರಿಂದ ಆಸ್ತಿ ಮಾರಾಟ ಹಾಗೂ ಹೊಸ ಹೂಡಿಕೆದಾರರನ್ನು ಸೆಳೆಯಬೇಕು. ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ ಷೇರುದಾರರು ಸುಮ್ಮನೆ ಕೂರುವುದು ಕಷ್ಟ

English summary
Kingfisher Airlines Chairman Vijay Mallya has blamed almost everyone, including engine suppliers, employees, banks and tax authorities, for grounding of the carrier since October last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X