ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೊದಲ ಟಾರ್ಗೆಟ್ ನರೇಂದ್ರ ಮೋದಿ: ಐಎಂ

By Mahesh
|
Google Oneindia Kannada News

ಪಟ್ನಾ, ಸೆ.3: ಇತೀಚಿಗಷ್ಟೇ ಭಾರತ-ನೇಪಾಳ ಗಡಿಭಾಗದಲ್ಲಿ ಸಿಕ್ಕಿಬಿದ್ದ ಇಂಡಿಯನ್ ಮುಜಾಹಿದ್ದೀನ್ ನ ಸ್ಥಾಪಕ ಸದಸ್ಯ ಯಾಸಿನ್ ಭಟ್ಕಳ ಮತ್ತೊಮ್ಮೆ ಸ್ಫೋಟಕ ಮಾಹಿತಿ ಹೊರ ಹಾಕಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯಗಳ ಸಂಚು ರೂಪಿಸುವುದಕ್ಕಿಂತ ಇಂಡಿಯನ್ ಮುಜಾಹಿದ್ದೀನ್ ಗೆ ನರೇಂದ್ರ ಮೋದಿ ಅವರ ತಲೆ ತೆಗೆಯುವುದೇ ಪ್ರಮುಖ ಟಾರ್ಗೆಟ್ ಆಗಿದೆ ಎಂದು ಯಾಸಿನ್ ಭಟ್ಕಳ ಹೇಳಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸ್ವತಃ ಯಾಸಿನ್ ಭಟ್ಕಳ ಈ ವಿಷಯವನ್ನು ಹೇಳಿದ್ದಾನೆ. ಮೋದಿ ಅವರನ್ನು ತೆಗೆಯಲು ಅಂತಾರಾಷ್ಟ್ರೀಯ ನಿಧಿಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿತ್ತು. ನಮ್ಮ ಮೊದಲ ಟಾರ್ಗೆಟ್ ನರೇಂದ್ರ ಮೋದಿ ನಂತರದ ಸ್ಥಾನದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಇದ್ದಾರೆ ಎಂದಿದ್ದಾನೆ.

Narendra Modi IM's prime target, says Bhatkal: Report

2008ರ ನವೆಂಬರ್ ನಲ್ಲಿ ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದ ಮೇಲೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಬೃಹತ್ ಪ್ರಮಾಣದಲ್ಲಿ ನಿಧಿ ಸಿಕ್ಕಿದೆ. ಐಎಂ ಸಂಘಟನೆಯ ಪ್ರಮುಖ ಸದಸ್ಯ ಬಿಹಾರ ಮೂಲದ ಮೊನುಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದ್ದು ಭಾರತದಲ್ಲಿ ಬಂದು ಸ್ಫೋಟ ನಡೆಸುವ ತಾಣಗಳ ಪರಿಶೀಲನೆಯಲ್ಲಿ ತೊಡಗಿದ್ದಾನೆ. ಅತನ ಅಡಗುತಾಣಗಳ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಯಾಸಿನ್ ಭಟ್ಕಳ ಹೇಳಿದ್ದಾರೆ.

2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸ್ಫೋಟವಾದ ನಂತರ ಮೋನು ತನ್ನದೇ ಆದ ಗುಂಪು ನಡೆಸುತ್ತಿದ್ದು, ಸಮರ್ಥವಾಗಿ ಮುನ್ನಡೆಸುತ್ತಿದ್ದಾನೆ ಎಂದು ಭಟ್ಕಳ ಹೇಳಿದ್ದಾನೆ.

ರಾಷ್ಟ್ರೀಯ ತನಿಖಾ ದಳ(NIA) ತಂಡ ಮೋನುವಿನ ಸ್ವಂತ ಊರಿಗೆ ಕಾಲಿಟ್ಟಿದೆ. ಬಿಹಾರದ ಸಮಸ್ಟಿಪುರದ ಜಿಲ್ಲೆಯ ಗ್ರಾಮದಲ್ಲಿರುವ ಆತನ ಸಂಬಂಧಿಕರು, ತಂದೆ ತನಕ ತನಿಖಾ ದಳದ ವಿಚಾರಣೆ ತಲುಪಿದೆ. ಮೋನುವಿನ ಹಳೆ ಚಿತ್ರಗಳು, ಪೋಷಕರ ರಕ್ತದ ಸ್ಯಾಂಪಲ್ ಗಳು(ಡಿಎನ್ ಎ ಪ್ರೊಫೈಲ್ ಹೊಂದಾಣಿಕೆಗಾಗಿ) ಕಲೆ ಹಾಕಲಾಗಿದೆ.

ಭಟ್ಕಳನ ಸಂಬಂಧಿಕರು ಹಾಗೂ ಜಾಲದ ಬಗ್ಗೆ ಗುಜರಾತ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ದೊಡ್ಡ ಪ್ರಮಾಣದ ತಲೆ ತೆಗೆಯದಿದ್ದರೆ, ಅಥವಾ ಸ್ಫೋಟ ಕೃತ್ಯ ಎಸಗದಿದ್ದರೆ ಅಂತಾರಾಷ್ಟ್ರೀಯ ದಾನಿಗಳಿಂದ ಸಿಗುವ ಅನುದಾನ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ. ಹೊಸ ಉಗ್ರ ಸಂಘಟನೆಗೆ ಆರ್ಥಿಕ ಸಹಾಯ ಹಸ್ತ ಸಿಗಲಿದೆ ಎಂದು ಭಟ್ಕಳ ಹೇಳಿಕೆ ನೀಡಿದ್ದಾನೆ ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.

English summary
Indian Mujahideen (IM) founding member Yasin Bhatkal, who was recently arrested near India-Nepal border along with a close aide, has revealed that Gujarat Chief Minister Narendra Modi is the IM's prime target, an Indian Today report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X