ಮಾಧ್ಯಮಗಳ ಪ್ರಶ್ನೆಗಳ ಬಾಣಕ್ಕೆ ಬಿಲುಗಾರ್ತಿ ತತ್ತರ
ನವದೆಹಲಿ, ಆ.27: ತ್ವರಿತಗತಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡುವ ಭರದಲ್ಲಿ ಟಿವಿ ಮಾಧ್ಯಮಗಳು ವಿಶ್ವಮಾನ್ಯ ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿದ ಘಟನೆ ನಡೆದಿದೆ. ಮಾಧ್ಯಮಗಳ ನಡುವಿನ ಪೈಪೋಟಿಗೆ ಸಿಲುಕಿ ಕಿರುಕುಳ ಅನುಭವಿಸಿದ ದೀಪಿಕಾ ಕುಮಾರಿ ಕಣ್ಣೀರಿಟ್ಟಿದ್ದಾರೆ.
ಪೋಲ್ಯಾಂಡ್ ನಲ್ಲಿ ನಡೆದ ವಿಶ್ವಕಪ್ ಬಿಲ್ಲುಗಾರಿಕೆಯ ನಾಲ್ಕನೇ ಹಂತದಲ್ಲಿ ವಿಜಯ ಪತಾಕೆ ಹಾರಿಸಿದ ದೀಪಿಕಾ ಕುಮಾರಿ ಅವರಿದ್ದ ತಂಡ ಮಂಗಳವಾರ ಭಾರತಕ್ಕೆ ಆಗಮಿಸಿದೆ. 19 ವರ್ಷದ ದೀಪಿಕಾ, ಬೊಂಬಯಲಾ ದೇವಿ, ರಿಮಿ ಬುರಿಯುಲಿ ಅವರು ದಕ್ಷಿಣ ಕೊರಿಯಾ ತಂಡವನ್ನು ಭಾನುವಾರ(ಆ.25) ಸೋಲಿಸಿ ವಿಶ್ವಕಪ್ ಎತ್ತಿದೆ.
ಕಳೆದ ವರ್ಷ ಕೊಲಂಬಿಯಾದ ಮೆಡೆಲ್ಲಿನ್ ನಲ್ಲಿ ವಿಶ್ವ ಮಟ್ಟದ ಚಾಂಪಿಯನ್ ಗೆದ್ದಿದ್ದ ಮಹಿಳಾ ತಂಡ ಮತ್ತೊಮ್ಮೆ ಈ ರೀತಿ ಅದ್ಭುತ ಸಾಧನೆ ಮಾಡಿ ಭಾರತಕ್ಕೆ ಮರಳಿದಾಗ ಸ್ವಾಗತಿಸಲು ಯಾರೂ ಇರಲಿಲ್ಲ.
ಚಾಂಪಿಯನ್ಸ್ ಗಳನ್ನು ಸ್ವಾಗತಿಸಲು ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ(AAI) ಸದಸ್ಯರು ಇಲ್ಲದ್ದನ್ನು ಕಂಡ ಮಾಧ್ಯಮದವರು ಚಾಂಪಿಯನ್ಸ್ ಗಳತ್ತ ತೆರಳಿ ಪ್ರಶ್ನೆಗಳ ಬಾಣಾ ಎಸೆದಿದ್ದಾರೆ. ಪ್ರಯಾಣದ ಬಳಲಿಕೆ ಜತೆಗೆ ಆಗಿರುವ ಅಪಮಾನ ನುಂಗಿಕೊಂಡು ಮೌನವಾಗಿದ್ದ ದೀಪಿಕಾ ಕುಮಾರಿ ತಂಡ ಮಾಧ್ಯಮದವರ ಪ್ರಶ್ನೆಗಳಿಗೆ ತತ್ತರಿಸಿದೆ. ಈ ಸಮಯದಲ್ಲಿ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲು ಆಗದ ದೀಪಿಕಾ ಕಣ್ಣೀರಿಟ್ಟ ಘಟನೆ ನಡೆದಿದೆ. ಮುಂದೇನಾಯ್ತು?ದೀಪಿಕಾ ತಂಡದಲ್ಲಿ ನಗು ಮತ್ತೆ ಮರುಕಳಿಸಿತೆ? ಮುಂದೆ ಓದಿ...

ಕೆಲವು ಗಂಟೆಗಳ ನಂತರ
ಆರ್ಚರಿ ಅಸೋಸಿಯೇಷನ್ ನ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಅವರು ಕೊಂಚ ತಡವಾಗಿ ಆಗಮಿಸಿ ಆರ್ಚರಿ ತಂಡದ ನಾಯಕಿ ದೀಪಿಕಾ ಅವರಿಗೆ ಸಾಂತ್ವನ ಹೇಳಿದರು.

ಸಿಎನ್ ಎನ್ ಐಬಿಎನ್ ವರದಿ
ದೇಶದ ಪ್ರಮುಖ ಮಾಧ್ಯಮಗಳ ವರದಿಗಾರರು ಬಿಲ್ಲುಗಾರ್ತಿಯರ ತಂಡದ ಪರವಾಗಿ ನಾಯಕಿಯ ಒಂದು ನ್ಯೂಸ್ ಬೈಟ್ ಪಡೆಯದೆ ಪ್ರತಿಯೊಬ್ಬರು ವೈಯಕ್ತಿಕವಾಗಿ ದೀಪಿಕಾರನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಆಗ ನಡೆದ ಸಣ್ಣ ಕಿತ್ತಾಟ ಗಲಾಟೆ ದೀಪಿಕಾ ಕಣ್ಣಲ್ಲಿ ನೀರು ತರಿಸಿದೆ.

ಗೆಲುವಿನ ಬಗ್ಗೆ
ಕೊರಿಯಾ ತಂಡ ತುಂಬಾ ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದರು. ಅವರನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಕೊನೆ ತನಕ ಅಲ್ಲಿನ ಹವಾಮಾನ ಕೈ ಕೊಟ್ಟಿತು. ಗಾಳಿ ಜೋರಾಗಿ ಬೀಸುತ್ತಿತ್ತು. ಮೂರು ಪಂದ್ಯಗಳು ಟೈ ಆಗಿತ್ತು. ಅಂತಿಮವಾಗಿ ಅವರನ್ನು ಸೋಲಿಸಿದ ತೃಪ್ತಿ ಇದೆ ಎಂದು ದೀಪಿಕಾ ಹೇಳಿದ್ದಾರೆ.

ದೀಪಿಕಾ ತಂಡ
ದೀಪಿಕಾ, ಬೊಂಬಯಲಾ ದೇವಿ, ರಿಮಿ ಬುರಿಯುಲಿ ಗ್ರೂಪ್ ಫೋಟೋ












Click it and Unblock the Notifications