ಬೆಂಗಳೂರು : ಮಕ್ಕಳ ಪುಂಡಾಟ ಮೇಷ್ಟ್ರು ನಾಪತ್ತೆ

students
ಬೆಂಗಳೂರು, ಆ.27 : ಶಾಲೆಗೆ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಕ್ಕಳ ಪುಂಡಾಟದಿಂದ ಬೇಸತ್ತ ಬಿಬಿಎಂಪಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ.

ಕಬ್ಬನ್ ಪೇಟೆ ಬಿಬಿಎಂಪಿ ಪ್ರೌಢ ಶಾಲೆಯಲ್ಲಿ ಹಂಗಾಮಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ವೇದಾಂತ ಪಾಟೀಲ್ (52) ಕಣ್ಮರೆ ಆದ ಮುಖ್ಯ ಶಿಕ್ಷಕರು. ಆರ್.ಟಿ.ನಗರದ ನಿವಾಸಿಯಾಗಿದ್ದ ಇವರು, ಶನಿವಾರ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಬಂದವರು ಕಾಣೆಯಾಗಿದ್ದಾರೆ.

ಭಾನುವಾರ ಬೆಳಗ್ಗೆಯೂ ವೇದಾಂತ ಪಾಟೀಲ್ ಮನೆಗೆ ಆಗಮಿಸದಿದ್ದರಿಂದ ಗಾಬರಿಗೊಂಡ, ಕುಟುಂಬದವರು ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ಪೊಲೀಸರು ಕಬ್ಬನ್ ಪೇಟೆ ಶಾಲೆಗೆ ಬಂದು ವಿಚಾರಿಸಿದಾಗ ಪತ್ರವೊಂದು ಸಿಕ್ಕಿದೆ.

ಪತ್ರದಲ್ಲಿ ವೇದಾಂತ ಪಾಟೀಲ್ ಅಧಿಕಾರಿಗಳು ಶಾಲೆಗೆ ಸರಿಯಾದ ಸೌಲಭ್ಯ ಕಲ್ಪಿಸಲು ಸಹಕಾರ ನೀಡುತ್ತಿಲ್ಲ. 10 ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುತ್ತಿಲ್ಲ. ಇದರಿಂದ ನನಗೆ ಜಿಗುಪ್ಸೆ ಉಂಟಾಗಿದೆ.

ಶ್ರೀರಂಗ ಪಟ್ಟಣ ಸಮೀಪ ಕಾವೇರಿ ನದಿಗೆ ಹಾರಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪಾಟೀಲ್ ಬರರೆದಿಟ್ಟ ಪತ್ರ ಅವರೆ ಟೇಬಲ್ ನಲ್ಲಿ ದೊರಕಿದೆ. ಪ್ರಕರಣ ಹಲಸೂರು ಗೇಟ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು, ಶಿಕ್ಷಕರಿಗಾಗಿ ಹುಡುಕಾಟ ಪ್ರಾರಂಭವಾಗಿದೆ.

ಎಂಎ ಪದವೀಧರ : ಮೂಲತಃ ದೊಡ್ಡ ಬಳ್ಳಾಪುರದ ಕಾನಸವಾಡಿಯವರಾದ ವೇದಾಂತ ಪಾಟೀಲ್ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೆ, ಕಾಲೇಜು ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

2013ರಲ್ಲಿ ಬಿಬಿಎಂಪಿ ಮುಖ್ಯ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಇವರು ಅರ್ಜಿ ಸಲ್ಲಿಸಿದ್ದರು. ಅವರ ಆಯ್ಕೆಯಾಗಿ ಕಬ್ಬನ್ ಪೇಟೆ ಶಾಲೆಗೆ ನಿಯೋಜಿಸಲಾಗಿತ್ತು. ಅವರು ಇನ್ನೂ ಹಂಗಾಮಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಸೇವೆಯನ್ನು ಖಾಯಂಗೊಳಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+