ಚಿತ್ರಗಳಲ್ಲಿ: 'ಮದ್ರಾಸ್' ಗೆ ಹ್ಯಾಪಿ ಬರ್ಥ್ ಡೇ
ಬೆಂಗಳೂರು, ಆ.22: ತಮಿಳುನಾಡಿನ ರಾಜಧಾನಿ ಮದ್ರಾಸ್ (ಇಂದಿನ ಚೆನ್ನೈ)ಗೆ ಗುರುವಾರ 374ನೇ ಹುಟ್ಟುಹಬ್ಬದ ಸಂಭ್ರಮ. 17ನೇ ಶತಮಾನದಲ್ಲಿ ಬ್ರಿಟಿಷರು ಭಾರತದಲ್ಲಿ ಸ್ಥಾಪಿಸಿದ ಪ್ರಮುಖ ಬಂದರು ನಗರಗಳಲ್ಲಿ ಈಗಿನ ಚೆನ್ನೈ ಆಗಿನ ಮದ್ರಾಸ್ ಕೂಡಾ ಒಂದು.
ಆ.22, 1639ರಂದು ಸ್ಥಳೀಯ ನಾಯಕ ಜನಾಂಗಕ್ಕೆ ಸೇರಿದ್ದ ಭೂಮಿಯನ್ನು ಖರೀದಿಸಿದ ಅಂದಿನ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಡೆ, ಸೇಂಟ್ ಜಾರ್ಜ್ ಕೋಟೆ ಕಟ್ಟಿದ. ಮದ್ರಾಸ್ ಎಂದು ಪುನರ್ ನಾಮಕರಣ ಮಾಡಿದ. ಇಂದಿಗೂ ಈ ಕಟ್ಟಡ ತಮಿಳುನಾಡು ಸರ್ಕಾರದ ಆಡಳಿತ ಕಚೇರಿಯಾಗೇ ಉಳಿದಿದೆ.
ಚೆನ್ನಪ್ಪನಾಯಕನ್ ಎಂದು ನಾಯಕ ಜನಾಂಗದ ಮುಖಂಡನ ಹೆಸರು ಪಡೆದಿದ್ದ ನಗರ ನಂತರ ಚೆನ್ನಪ್ಪಪಟ್ಟಿನಂ ಆಗಿ ಮದ್ರಾಸ್, ಚೆನ್ನೈ ಆಗಿ ಮಾರ್ಪಟ್ಟಿದೆ. ಬ್ರಿಟಿಷ್ ಸಾಮ್ರಾಜ್ಯ ಸ್ಥಾಪಿಸಿದ ರಾಬರ್ಟ್ ಕ್ಲೈವ್ ಮದುವೆ ಕೂಡಾ ಫೋರ್ಟ್ ಸೆಂಟ್ ಜಾರ್ಜ್ ನಲ್ಲಿ ಆಗಿದ್ದು ವಿಶೇಷ. 1997ರಲ್ಲಿ ಕರುಣಾನಿಧಿ ಸರ್ಕಾರ ಚೆನ್ನೈ ಎಂದು ನಾಮಕರಣ ಮಾಡಿತ್ತು. ಚೆನ್ನೆಗೆ ಹುಟ್ಟು ಹಬ್ಬದ ದಿನದಂದು ಶುಭ ಹಾರೈಕೆ ಜತೆ ಒಂದೆರಡು ಚಿತ್ರಗಳಿವೆ ನೋಡಿ...

'ಮದ್ರಾಸ್' ಗೆ ಹ್ಯಾಪಿ ಬರ್ಥ್ ಡೇ
374ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಮದ್ರಾಸ್ ಸಿಟಿಯ ವೈಮಾನಿಕ ದೃಶ್ಯ.
ಸಂಗೀತ, ಸಾಹಿತ್ಯ, ಸಿನಿಮಾ, ಲಲಿತಕಲೆ, ಜವಳಿ, ಆರೋಗ್ಯ, ಆಟೋಮೊಬೈಲ್ ಅಲ್ಲದೆ, ಐಟಿ ಉದ್ಯಮಕ್ಕೂ ಚೆನ್ನೈ ಪ್ರಮುಖ ಕೇಂದ್ರವಾಗಿದೆ.

ಮದ್ರಾಸ್-ಚೆನ್ನೈ
ಶತಮಾನಗಳು ಕಳೆದರೂ ಸಾರಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ಈ ಪ್ರಾಚೀನ ನಗರವನ್ನು ಕಾಡುತ್ತಲೇ ಇದೆ. ಆದರೂ ಎರಡನೇ ಸ್ವಚ್ಛನಗರ ಎಂಬ ಹೆಗ್ಗಳಿಕೆ ಗಳಿಸಿದೆ.

ಪಶ್ಚಿಮ ಮಿಡ್ನಾಪುರ
ಕನ್ಸಾಬಾತಿ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಪ್ರವಾಹ ಉಂಟಾಗಿದೆ. ಈ ನಡುವೆ ಪ್ರಯಾಣಿಕರನ್ನು ಕೂಡಿಸಿ ಸೈಕಲ್ ದೂಡುತ್ತಿರುವ ಬಾಲಕ. PTI Photo by Swapan Mahapatra

ಶಿಮ್ಲಾದಲ್ಲಿ
ಶಿಮ್ಲಾ: ಕುಫ್ರಿ ಬಳಿ 150 ಮೀ ಆಳದ ಕದಂಕಕ್ಕೆ ಉರುಳಿದ ಪ್ರವಾಸಿ ಬಸ್

ಪುರಿಯಲ್ಲಿ
ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ರುಪಾಯಿ ಉಳಿಸಿ ಎಂದು ಒಡಿಶಾದ ಕಡಲಲ್ಲಿ ಶಿಲ್ಪ ರಚಿಸಿದ್ದಾರೆ.

ಇಂಡಿಯನ್ ಬಾಡ್ಮಿಂಟನ್ ಲೀಗ್
ಪುಣೆ: ಹೈದರಾಬಾದ್ ಸ್ಮಾಷರ್ ಸೈನಾ ನೆಹ್ವಾಲ್ ಅವರು ಮುಂಬೈ ಮಾಸ್ಟರ್ಸ್ ನ ಪಿಸಿ ತುಳಸಿ ವಿರುದ್ಧ ಪಂದ್ಯದಲ್ಲಿ

ಅಯೋಧ್ಯೆಯಲ್ಲಿ
ವಿಶ್ವಹಿಂದೂಪರಿಷತ್ ನ ಪರಿಕ್ರಮ ಮೆರವಣಿಗೆ ಅಂಗವಾಗಿ ಸೇನೆಯ ತುಕಡಿ ಭಾರಿ ಭದ್ರತೆ ಒದಗಿಸಿದೆ.

ಸ್ಮೃತಿ ಗರ್ಜನೆ
ಬಿಜೆಪಿ ಸಂಸದೆ ಸ್ಮೃತಿ ಅವರು ಕಲಾಪದಲ್ಲಿ ಮುಂಬೈ ಅತ್ಯಾಚಾರದ ವಿರುದ್ಧ ಕಿಡಿಕಾರಿದ್ದು ಹೀಗೆ

ಅತ್ಯಾಚಾರಕ್ಕೆ ಖಂಡನೆ
ಮುಂಬೈನಲ್ಲಿ ನಡೆದ ಛಾಯಾಗ್ರಾಹಕಿ ಅತ್ಯಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಮುಂಬೈನಲ್ಲಿ
ಮುಂಬೈನಲ್ಲಿ ನಡೆದ ಛಾಯಾಗ್ರಾಹಕಿ ಮೇಲಿನ ಅತ್ಯಾಚಾರ ಖಂಡಿಸಿ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಸಲಾಗಿದೆ.

ಫ್ಯಾಷನ್ ಲೋಕ
ರೂಪದರ್ಶಿಯ ಭಂಗಿ

ಹುಟ್ಟುಹಬ್ಬದ ಸಂಭ್ರಮ
ತಮಿಳುನಾಡಿನ ರಾಜಧಾನಿ ಮದ್ರಾಸ್ (ಇಂದಿನ ಚೆನ್ನೈ)ಗೆ ಗುರುವಾರ 374ನೇ ಹುಟ್ಟುಹಬ್ಬದ ಸಂಭ್ರಮ

ಅಯೋಧ್ಯೆಯಲ್ಲಿ
ಅಯೋಧ್ಯೆಯಲ್ಲಿ ವಿಎಚ್ ಪಿ ಹಮ್ಮಿಕೊಂಡಿರುವ ಮೆರವಣಿಗೆಗೆ ಬಿಗಿ ಭದ್ರತೆ

ಮುಂಬೈನಲ್ಲಿ
ಮುಂಬೈನ ಈ ಜಾಗದಲ್ಲೇ ಫೋಟೋ ಜರ್ನಲಿಸ್ಟ್ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದು

ಅಮೆರಿಕದಲ್ಲಿ
ಅಮೆರಿಕ ಪ್ರವಾಸದಲ್ಲಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಶ್ವೇತ ಭವನದ ಬಳಿ ನಡಿಗೆ












Click it and Unblock the Notifications