ಗುಜರಾತಿಗೆ ಮೋಡಿ ಮಾಡಿರುವ ಜ್ಯೂ. ಮೋದಿ
ಅಹಮದಾಬಾದ್, ಆ.23: ಆತನಿಗಿನ್ನೂ ನಾಲ್ಕು ವರ್ಷ ವಯಸ್ಸು. ಹೆಸರು ಆರವ್ ಪಂಕಜ್ ನಾಯಕ್ ಗೆ ದೇಶದ ನಂ.1 ಮುಖ್ಯಮಂತ್ರಿ ನರೇಂದ್ರ ಮೋದಿಯಂತೆ ಆಗುವ ಕನಸು.ಅಹಮದಾಬಾದಿನ ಮಣಿನಗರ ಈ ಪೋರನ ಭಾಷಣದ ಮೋಡಿಗೆ ಇಡೀ ಗುಜರಾತ್ ಸಿಲುಕಿದೆ. ಗುಜರಾತಿಗಳು ತುಂಬು ಹೃದಯದಿಂದ ಈ ಉದಯೋನ್ಮುಖ ಭಾಷಣಗಾರನನ್ನು ಹರಿಸಿದ್ದಾರೆ.
ಆರವ್ ಭಾಷಣ ಕೇವಲ ಗುಜರಾತಿಗೆ ಸೀಮಿತವಾಗಿಲ್ಲ ಬದಲಿಗೆ ಇಡೀ ಭಾರತ ಹಾಗೂ ವಿಶ್ವದ ಸೌಹಾರ್ದತೆ, ಶಾಂತಿ, ಅಭಿವೃದ್ಧಿಯನ್ನು ಎತ್ತಿ ಹಿಡಿಯುತ್ತದೆ. ಆಗಸ್ಟ್ 12ಕ್ಕೆ ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಬಾಲಕ ಎಷ್ಟೆಲ್ಲ ಮಾತನಾಡಲು ಹೇಗೆ ಸಾಧ್ಯ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಗುಜರಾತಿ ಅಲ್ಲದೆ, ಹಿಂದಿ, ಇಂಗ್ಲೀಷಿನಲ್ಲೂ ನಿರರ್ಗಳವಾಗಿ ಭಾಷಣ ಮಾಡುವ ಆರವ್ ಮುಂದೆ ದಾಖಲೆ ಪುಸ್ತಕ ಸೇರುವ ಎಲ್ಲಾ ಸಾಧ್ಯತೆಯೂ ಇದೆ. ಆರವ್ ಗೆ ಭಾಷಣ ಕೇಳಿದ ಜನ ಮತ್ತೆ ಮತ್ತೆ ಕೇಳುವ ಆಸೆ ವ್ಯಕ್ತಪಡಿಸುತ್ತಾರೆ. ಹಲವೆಡೆ ಸಮಾರಂಭದಲ್ಲಿ ಆರವ್ ಭಾಷಣವೇ ಪ್ರಮುಖ ಆಕರ್ಷಣೆ ಎನಿಸಿದೆ. ಐದಾರು ಪ್ರಶಸ್ತಿಗಳನ್ನು ಪಡೆದಿರುವ ಆರವ್ ಗೆ ತಾನು ಮೋದಿಯಂತೆ ಆಗುವ ಬಯಕೆ ಇದೆ ಎನ್ನುತ್ತಾನೆ.
ದೇಶಭಕ್ತಿ ಬಗ್ಗೆ ಮೋದಿ ಅವರು ಮಾಡಿದ ಭಾಷಣದ ಯಥಾವತ್ತು ಪುನಾರವರ್ತನೆ ಮಾಡಿದ ಆರವ್ ಗೆ ಜನಜಾಗೃತಿ ಟ್ರಸ್ಟ್ ನಿಂದ ಪ್ರಮಾಣ ಪತ್ರ ಸಿಕ್ಕಿದೆ. ಭಾಷಣ ಮಾಡುವಾಗ ಮೋದಿ ಅವರಂತೆ ಧ್ವನಿಯಲ್ಲಿ ಏರಿಳಿತ ಮಾಡುತ್ತಾನೆ. ಮೋದಿಯಂತೆ ವೇಷ ಭೂಷಣಗಳನ್ನು ಆರವ್ ತೊಡುತ್ತಾನೆ. ಗುಜರಾತ್ ವಿಭಾಗದ ರಿಲಯನ್ ಕಮ್ಯೂನಿಕೇಷನ್ (WLN) ನ ಮುಖ್ಯಸ್ಥರು ಕಳೆದ ಗಣತಂತ್ರ ದಿನಾಚರಣೆ ದಿನ ಆರವ್ ಗೆ ಸನ್ಮಾನ ಮಾಡಿ ಹರಸಿದ್ದಾರೆ.

ಛೋಟಾ ಮೋದಿ ಮಣಿನಗರದ ನೆಲ್ಸನ್ಸ್ ಹೈಸ್ಕೂಲಿನಲ್ಲಿ ಜ್ಯೂನಿಯರ್ ಎಲ್ ಕೆಜಿಯ ವಿದ್ಯಾರ್ಥಿಯಾಗಿದ್ದಾನೆ. ಆರವ್ ಭಾಷಣ ವಿಡಿಯೋ ತುಣುಕು ನೋಡಿ...












Click it and Unblock the Notifications