ಕೈಕೊಟ್ಟ ಬೆಂ. ಗ್ರಾಮಾಂತರ, ಮಂಡ್ಯ ಮತದಾರ

ಬೆಂಗಳೂರು, ಆ.21 : ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬುಧವಾರ ಮತದಾರ ಕೈಕೊಟ್ಟಿದ್ದಾನೆ. ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದರೂ, ಮತದಾನ ಮಾಡುವಲ್ಲಿ ಮತದಾರ ಅಂತಹ ಉತ್ಸಾಹವನ್ನು ತೋರಿಸಿಲ್ಲ.

ಬುಧವಾರ ಸಂಜೆ 4 ಗಂಟೆ ವೇಳಗೆ ಎರಡೂ ಕ್ಷೇತ್ರಗಳಲ್ಲಿ ನೀರಸ ಮತದಾನವಾಗಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ 39ರಷ್ಟು ಮತ್ತು ಮಂಡ್ಯ ಕ್ಷೇತ್ರದಲ್ಲಿ ಶೇ 42ರಷ್ಟು ಮತದಾನ ನಡೆದಿದೆ. ಎರಡು ಗ್ರಾಮಗಳಲ್ಲಿ ಮತದಾನವನ್ನು ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದಾರೆ. ಮಳ್ಳವಳ್ಳಿ ತಾಲೂಕಿನ ಪೊನ್ನಹಳ್ಳಿಯಲ್ಲಿ ಬೆಳಗ್ಗೆ 11 ಗಂಟೆಗೆ ಮತದಾನ ಪ್ರಾರಂಭವಾಯಿತು.

ಲೋಕಸಭೆ ಚುನಾವಣೆ ಇನ್ನು ಹತ್ತಿರದಲ್ಲೇ ಇದ್ದಿದ್ದರಿಂದಲೋ ಏನೋ ಶೇ.50ಕ್ಕಿಂತಲೂ ಹೆಚ್ಚು ಮತದಾರರು ಮನೆಬಿಟ್ಟು ಹೊರಗೆ ಬರಲಿಲ್ಲ. ನೀರಸ ಮತದಾನದಿಂದ ಎಲ್ಲ ಪಕ್ಷಗಳ ಲೆಕ್ಕಾಚಾರಗಳು ತಲೆಕೆಳಗಾದರೂ ಅಚ್ಚರಿಯಿಲ್ಲ. ಶನಿವಾರ, ಆ. 24ರಂದು ಫಲಿತಾಂಶ ಹೊರಬೀಳಲಿದ್ದು, ಯಾವ ಪಕ್ಷಕ್ಕೆ ಯಾವ ಕ್ಷೇತ್ರ ಒಲಿಯಲಿದೆ ಎಂಬುದು ತಿಳಿದುಬರಲಿದೆ.

ಜೆಡಿಎಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಚೆಲುವರಾಯಸ್ವಾಮಿ ಅವರು ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ಉದ್ಭವಿಸಿತ್ತು. ಇಬ್ಬರೂ ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ರಾಜೀನಾಮೆ ನೀಡಿದ್ದರು.

ವಿವಿಧ ಪಕ್ಷಗಳ ನಾಯಕರು ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರುಳಿ ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಮೊದಲ ಮತ ಚಲಾಯಿಸಿದರು. ಡಿ.ಕೆ.ಶಿವಕುಮಾರ್, ಅಂಬರೀಶ್, ಎಚ್.ಡಿ.ಕುಮಾರಸ್ವಾಮಿ ದಂಪತಿ 10 ಗಂಟೆ ನಂತರ ಮತದಾನ ಮಾಡಿದರು. ಮತದಾನದ ನಂತರ ನಾಯಕರ ಪ್ರತಿಕ್ರಿಯೆ ಹೀಗಿದೆ.

ಪಕ್ಷದ ಪ್ರತಿಷ್ಠೆ ಕುಟುಂಬದ್ದಲ್ಲ

ಪಕ್ಷದ ಪ್ರತಿಷ್ಠೆ ಕುಟುಂಬದ್ದಲ್ಲ

ಕನಕಪುರದ ದೊಡ್ಡಹಾಲಹಳ್ಳಿ ಮತಗಟ್ಟೆಯಲ್ಲಿ ಡಿ.ಕೆ.ಶಿವಕುಮಾರ್ ದಂಪತಿ ಮತದಾನ ಮಾಡಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸಹ ಶಿವಕುಮಾರ್ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಮತದಾನದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ್ ಇದು ಪಕ್ಷದ ಪ್ರತಿಷ್ಠೆಯ ಪ್ರಶ್ನೆ ಕುಟುಂಬದ ಪ್ರಶ್ನೆಯಲ್ಲ ಎಂದು ಹೇಳಿದರು.

ಜನರ ಮೇಲೆ ನಂಬಿಕೆ ಇದೆ

ಜನರ ಮೇಲೆ ನಂಬಿಕೆ ಇದೆ

ರಾಮನಗರದ ಕೇತಗಾನಹಳ್ಳಿಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಜೊತೆ ಪ್ರತಿಪ್ಷಕದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತದಾನ ಮಾಡಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ನಮಗೆ ಪೂರ್ಣ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜನರು ಬದಲಾವಣೆ ಬಯಸಿದ್ದಾರೆ

ಜನರು ಬದಲಾವಣೆ ಬಯಸಿದ್ದಾರೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ನೀಡಿ ತಕ್ಕ ಪಾಠ ಕಲಿತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು. ಕನಕಪುರದ ದೊಡ್ಡಹಾಲಹಳ್ಳಿ ಮತಗಟ್ಟೆಯಲ್ಲಿ ಅವರು ಮತದಾನ ಮಾಡಿದರು.

ಮೋದಿ ಹೋಲಿಕೆ ಸರಿಯಲ್ಲ

ಮೋದಿ ಹೋಲಿಕೆ ಸರಿಯಲ್ಲ

ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ಪತ್ನಿ ಜೊತೆ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತದಾನ ಮಾಡಿದರು. ನಂತರ ಮಾತನಾಡಿದ ಅವರು ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದರು. ವಸತಿ ಸಚಿವ ಅಂಬರೀಶ್ ಸಿದ್ದರಾಮಯ್ಯ ಅವರನ್ನು ನರೇಂದ್ರ ಮೋದಿ ಅವರಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

 ಉತ್ತಮ ಬೆಂಬಲ ಸಿಕ್ಕಿದೆ

ಉತ್ತಮ ಬೆಂಬಲ ಸಿಕ್ಕಿದೆ

ಪ್ರಚಾರದ ವೇಳೆ ಜನರು ಉತ್ತಮವಾಗಿ ಬೆಂಬಲ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು. ರಾಮನಗರದ ಕೇತಗಾನಹಳ್ಳಿಯಲ್ಲಿ ಅನಿತಾ ಕುಮಾರಸ್ವಾಮಿ ಮತದಾನ ಮಾಡಿದರು.

ಮೋದಿ ಹೋಲಿಕೆ ವಿವಾದಕ್ಕೆ ತೆರೆ

ಮೋದಿ ಹೋಲಿಕೆ ವಿವಾದಕ್ಕೆ ತೆರೆ

ಸಿದ್ದರಾಮಯ್ಯ ಅವರನ್ನು ನರೇಂದ್ರ ಮೋದಿ ಅವರಿಗೆ ಹೋಲಿಸುವ ಪ್ರಶ್ನೆಯೇ ಇಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಸತಿ ಸಚಿವ ಅಂಬರೀಶ್ ಹೇಳಿದ್ದಾರೆ. ದೊಡ್ಡ ಅರಸಿಕೆರೆಯಲ್ಲಿ ಪತ್ನಿ ಸುಮಲತಾರೊಂದಿಗೆ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಗುಜರಾತ್ ನಲ್ಲಿ ಮೋದಿ ಇದ್ದಂತೆ, ಕರ್ನಾಟದಲ್ಲಿ ಸಿದ್ದರಾಮಯ್ಯ ನಮಗೆ ನಾಯಕರು ಎಂದು ನಾನು ಹೇಳಿದ್ದು, ಅಷ್ಟು ಜನಪ್ರಿಯರಾಗಿ ಅವರು ಬೆಳೆಯುತ್ತಾರೆ ಎಂದು ನಾನು ಹೇಳಿದ್ದು ಎಂದು ಅಂಬರೀಶ್ ಸ್ಟಷ್ಟಪಡಿಸಿದರು.

ನೀರಸ ಮತದಾನ

ನೀರಸ ಮತದಾನ

ಸಂಜೆ 4 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಶೇ.39ರಷ್ಟು ಹಾಗೂ ಮಂಡ್ಯದಲ್ಲಿ ಶೇ.42.47ರಷ್ಟು ಮತದಾನವಾಗಿದೆ. ಮತದಾನ ಮುಕ್ತಾಯವಾಗಲು ಕೇವಲ ಒಂದು ಗಂಟೆ ಬಾಕಿ ಇದ್ದರೂ ಉಭಯ ಕ್ಷೇತ್ರಗಳಲ್ಲಿ ಶೇ 50ರಷ್ಟು ಮತದಾನವಾಗಿರಲಿಲ್ಲ. ಆಗಸ್ಟ್ 24ರ ಶನಿವಾರದಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+