ರಕ್ಷಾ ಬಂಧನಕ್ಕೆ ICICIನಿಂದ ವಿಶೇಷ ಕೊಡುಗೆ

ಈ ಹಬ್ಬದಂದು ಬೆಳಗಿನ ಜಾವ ಸ್ನಾನ ಮಾಡಿ ಶುಚಿರ್ಭೂತರಾಗಿ ಬಂದ ನಂತರ, ಹೊಸ ಬಟ್ಟೆ ತೊಟ್ಟು, ಸಹೋದರನನ್ನು ಕೂಡಿಸಿ ಆತನ ಹಣೆಗೆ ತಿಲಕವನ್ನಿಟ್ಟು, ರಾಖಿ ಕಟ್ಟಿ ಆರತಿ ಮಾಡಿ ಆಶೀರ್ವಾದ ಮಾಡುವ ಅಥವಾ ಆಶೀರ್ವಾದ ಪಡೆಯುವ ಬಾಂಧವ್ಯ ಬೆಸುಗೆಯ ಹಬ್ಬ. ರಾಖಿ ಕಟ್ಟಿದ ಸಹೋದರಿಗೆ ಇಷ್ಟವಾದ ಉಡುಗೊರೆ ಕೊಟ್ಟು ಸಹೋದರರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಆದರೆ, ಕೆಲಸದ ಕಾರಣಗಳಿಂದ ಅಣ್ಣ ತಂಗಿ ದೂರವಿರುವುದು ಸರ್ವೇಸಾಮಾನ್ಯ. ಪ್ರೀತಿಯ ಸಹೋದರಿಗೆ ರಾಖಿ ಹಬ್ಬದಂದು ಉಡುಗೊರೆ ಖುದ್ದಾಗಿ ನೀಡಲಾಗಲಿಲ್ಲವಲ್ಲ ಎಂದು ಕೊರಗುವ ಅಗತ್ಯವೇ ಇಲ್ಲ. ಇದಕ್ಕಾಗಿ ICICIನ Money2India ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ನಿಮ್ಮ ಸಹೋದರಿಗೆ ಬ್ಯಾಂಕ್ ಮುಖಾಂತರ ಗಿಫ್ಟ್ ಕಳಿಸಿ ಮತ್ತು ಶೇ.22ರಷ್ಟು ರಿಯಾಯಿತಿ ಪಡೆಯಿರಿ.
Money2India ಮೂಲಕ ಹಣವನ್ನು ಭಾರತದಲ್ಲಿರುವ ಸಹೋದರಿಗೆ ಕಳುಹಿಸಿದರೆ, ಬ್ಯಾಂಕ್ ನಿಮಗೆ ಗಿಫ್ಟ್ ಕೋಡ್ ಕಳುಹಿಸುತ್ತದೆ. ಈ ಸೌಲಭ್ಯ ಅಮೆರಿಕ, ಯುನೈಟೆಡ್ ಕಿಂಗ್ಡಂ, ಕೆನಡಾ, ಸಿಂಗಪುರ, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಹಾಂಗ್ ಕಾಂಗ್ ನಲ್ಲಿರುವ ಭಾರತೀಯರಿಗೆ ಮಾತ್ರ ಲಭ್ಯವಿದೆ.
ಹಲವಾರು ರೀತಿಯಲ್ಲಿ ಹಣವನ್ನು ಕಳುಹಿಸಬಹುದು. ಭಾರತದಲ್ಲಿನ 100ಕ್ಕೂ ಹೆಚ್ಚು ಬ್ಯಾಂಕ್‌ಗಳಿಗೆ ಎಲೆಕ್ಟ್ರಾನಿಕ್ ವರ್ಗಾವಣೆ, ICICI ರೆಮಿಟನ್ಸ್ ಕಾರ್ಡ್‌ಗೆ ಕ್ರೆಡಿಟ್, ವೀಸಾ ಡೆಬಿಟ್ ಕಾರ್ಡ್‌ಗೆ ಕ್ರೆಡಿಟ್ ಮತ್ತು ಭಾರತದಲ್ಲಿನ 700 ಬ್ಯಾಂಕ್‌ಗಳಲ್ಲಿ ಡಿಮಾಂಡ್ ಡ್ರಾಫ್ಟ್ ಮೂಲಕ ಹಣವನ್ನು ಸರಳವಾಗಿ ವರ್ಗಾವಣೆ ಮಾಡಬಹುದು.
ಸರಳ ಮತ್ತು ಸುರಕ್ಷಿತವಾಗಿ ಹಣ ವರ್ಗಾವಣೆ ಮಾಡುವ ಈ ವಿಧಾನಗಳಿಂದ ಅನೇಕ ಲಾಭಗಳು ಕೂಡ ಇವೆ. ಇಂಟರ್ನೆಟ್ ಮತ್ತು ಮೊಬೈಲ್ ಆಪ್ಸ್ ಮುಖಾಂತರ ಹಣ ವರ್ಗಾವಣೆ ಪ್ರಕ್ರಿಯೆ ಗಮನಿಸಲು, ನಿಗದಿತ ಹಣ ಠೇವಣಿಗೆ ಖಚಿತ ವರ್ಗಾವಣೆ ದರ, ಈಮೇಲ್ ಅಥವಾ ಫೋನ್ ಮುಖಾಂತರ ದಿನದ 24 ಗಂಟೆಗಳ ಕಾಲ ಸೇವಾ ತಜ್ಞರನ್ನು ಸಂಪರ್ಕಿಸಲು ಕೂಡ ಸಾಧ್ಯವಿದೆ.
ಅಮೆರಿಕ ಡಾಲರ್, ಬ್ರಿಟಿಷ್ ಪೌಂಡ್ಸ್, ಕೆನಡಾ ಡಾಲರ್, ಯೂರೋಸ್ ಮತ್ತು ಸಿಂಗಪುರ ಡಾಲರುಗಳಲ್ಲಿ ಹಣವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ವರ್ಗಾವಣೆ ಮಾಡಬಹುದು. ನಿಮ್ಮ ಪ್ರೀತಿಯ ಸಹೋದರಿಗಾಗಿ ಇಷ್ಟನ್ನು ಮಾಡಲು ಸಾಧ್ಯವಿಲ್ಲವೆ?
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications