ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಖಾಸಗಿ ಕಂಪೆನಿಗಳಲ್ಲೂ ರಿಸರ್ವೇಷನ್ ಕೋಟಾ?

|
Google Oneindia Kannada News

ಖಾಸಗಿ ವಲಯದ ವ್ಯಾಪ್ತಿಯಲ್ಲಿ ಬರುವ ಕಂಪೆನಿಗಳಲ್ಲೂ ಮೀಸಲಾತಿ ತಂದರೆ ಹೇಗೆ ಎನ್ನುವ ಬಗ್ಗೆ ಕೇಂದ್ರದ ಯುಪಿಎ ಸರಕಾರ ಚಿಂತನೆ ನಡೆಸುತ್ತಿದೆ. ಇದೊಂದು ಮುಂಬರುವ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರದ ದೂರಾಲೋಚನೆಯ ನಿರ್ಧಾರವಾಗಿದ್ದರೆ ಅಚ್ಚರಿ ಪಡಬೇಕಾಗಿಲ್ಲ.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರಲ್ಲಿ ಸಾಕ್ಷಾತ್ ದೇವರನ್ನೇ ಕಾಣುವ ಪರಿಪಾಠ ಹೊಸದೇನಲ್ಲ, ಮತದಾರ ಇನ್ನೂ ಪ್ರಜ್ಞಾವಂತನಾಗ ಬೇಕಷ್ಟೆ. ಕೈಲಾಗದ ಭರವಸೆಯ ಮಹಾಪೂರಗಳೇ ಈ ಸಂದರ್ಭದಲ್ಲಿ ಹರಿದು ಬರುತ್ತದೆ.

ಹಿಂದುಳಿದ ವರ್ಗಗಳ ಮತಬ್ಯಾಂಕಿನ ಮೇಲೆ ಈಗ ಯುಪಿಎಗೆ ಕಣ್ಣು ಬಿದ್ದಂತೆ ಕಾಣುತ್ತಿದೆ. ಪ್ರೈವೇಟ್ ಸೆಕ್ಟರ್ ಕಂಪೆನಿಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಿಡುವ ಸಂಬಂಧ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ ಈ ವರ್ಗದಲ್ಲಿ ಬರುವ ಉದ್ಯೋಗ ಪ್ರಮಾಣದ ಅಧ್ಯಯನ ನಡೆಸಲು ಮುಂದಾಗಿದೆ.

ಸೂಕ್ತವಾಗಿ ಮತ್ತು ಶೀಘ್ರವಾಗಿ ಇದರ ಅಧ್ಯಯನ ನಡೆಸಲು ಸಂಸ್ಥೆಯ ಹುಡುಕಾಟದಲ್ಲಿರುವ ಕೇಂದ್ರ, ಸರಕಾರಿ ವಲಯದಂತೆ ಖಾಸಾಗಿ ವಲಯದಲ್ಲಿ ರಿಸರ್ವೇಷನ್ ಪ್ರಮಾಣವನ್ನು ಏರಿಸಲು ತುದಿಗಾಲಲ್ಲಿ ನಿಂತಿದೆ. ಇದರ ಅಧ್ಯಯನ ನಡೆಸುವ ಸಂಸ್ಥೆ ಖಾಸಗಿ ವಲಯದಲ್ಲಿ ಎಷ್ಟು ಪ್ರಮಾಣದಲ್ಲಿ ರಿಸರ್ವೇಷನ್ ಕೋಟಾ ಜಾರಿಗೆ ತರಬಹುದು ಎನ್ನುವುದರ ಬಗ್ಗೆ ಶಿಫಾರಸನ್ನು ಮಾಡುವ ಜವಾಬ್ದಾರಿಯನ್ನೂ ಹೊರ ಬೇಕಾಗುತ್ತದೆ.

ಭಾರತದಲ್ಲಿ ಮೀಸಲಾತಿ .. ಮುಂದೆ ಓದಿ..

ಸ್ವಾತಂತ್ರ್ಯ ಪೂರ್ವದಲ್ಲೂ ಮೀಸಲಾತಿ

ಸ್ವಾತಂತ್ರ್ಯ ಪೂರ್ವದಲ್ಲೂ ಮೀಸಲಾತಿ

ಸ್ವಾತಂತ್ರ್ಯಕ್ಕೆ ಮುನ್ನವೇ ಮೀಸಲಾತಿ ಸೌಲಭ್ಯವನ್ನು ಒದಗಿಸಲಾಗಿತ್ತು. ವಿಂಧ್ಯ ಪ್ರದೇಶದ ರಾಜರು ಅವರ ಆಳ್ವಿಕೆಯ ಸಮಯದಲ್ಲೇ ಮೀಸಲಾತಿ ಜಾರಿಗೆ ತಂದಿದ್ದರು ಎನ್ನುವುದು ಇತಿಹಾಸದ ಪುಟ ತಿರುವಿದಾಗ ನಮಗೆ ಸಿಗುವ ಮಾಹಿತಿ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜ್ ತನ್ನ ಆಡಳಿತದ ಅವಧಿಯಲ್ಲಿ ಮೀಸಲಾತಿ ನೀತಿ ರೂಪಿಸಿದ್ದರು. 1902ರಲ್ಲಿ ಕೊಲ್ಹಾಪುರದ ಆಡಳಿತದಲ್ಲಿ ಹಿಂದುಳಿದ ವರ್ಗ/ಸಮುದಾಯದವರಿಗೆ ನೀಡಿದ್ದರು. ಇದು ಭಾರತದಲ್ಲಿ ಶೋಷಿತ ವರ್ಗಕ್ಕೆ ಮಾಡಿದ ಮೊದಲ ಮೀಸಲಾತಿ ಎನ್ನಲಾಗುತ್ತದೆ.

ಜಾತಿವಾರು ಪಟ್ಟಿ

ಜಾತಿವಾರು ಪಟ್ಟಿ

ಜಾತಿವಾರು ಪಟ್ಟಿ ಮಾಡುವ ಕಾರ್ಯ 1931ರ ವರೆಗೆ ನಡೆದ ಜನಗಣತಿಯಲ್ಲಿ ಹೆಚ್ಚು ಪ್ರಚಲಿತವಾಗಲಾರಂಭಿಸಿತು. ತಮಿಳುನಾಡಿನಲ್ಲಿ ಮೇಲ್ವರ್ಗ ಮತ್ತು ಹಿಂದುಳಿದ ವರ್ಗದ ನಡುವಣ ಅಂತರವನ್ನು ಕಮ್ಮಿ ಮಾಡಲು ನಿರಂತರ ಹೋರಾಟಗಳು ಶುರುವಾಗಿತ್ತು. 1908ರ ಸುಮಾರಿಗೆ ಬ್ರಿಟಿಷರ ಆಡಳಿತದಲ್ಲಿ ಭಾರತೀಯ ಸರಕಾರದ ಕಾನೂನಿನಲ್ಲಿ ವಿಶೇಷ ಸೌಲತ್ತುಗಳನ್ನು ಕಲ್ಪಿಸಲಾಯಿತು.

ಡಾ.ಅಂಬೇಡ್ಕರ್

ಡಾ.ಅಂಬೇಡ್ಕರ್

ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ 1942ರ ಸುಮಾರಿನಲ್ಲಿ ದೇಶೀಯ ಮಟ್ಟದಲ್ಲಿ ತುಳಿತಕ್ಕೊಳಗಾದ ವರ್ಗಗಳ ಒಕ್ಕೂಟವನ್ನು ರಚಿಸಿದರು. ಸರಕಾರೀ ಕೆಲಸಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.
1946ರಲ್ಲಿ ಜನಸಂಖ್ಯೆ ಆಧರಿಸಿ ಪ್ರಾತಿನಿಧ್ಯ ನೀಡಲು ಕ್ಯಾಬಿನೆಟ್ ಮಿಶನ್ ಶಿಫಾರಸು ಮಾಡಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂಬೇಡ್ಕರ್ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು.

ಭಾರತದ ಸಂವಿಧಾನದ ರಚನೆ

ಭಾರತದ ಸಂವಿಧಾನದ ರಚನೆ

ಜನವರಿ 26, 1950ರಲ್ಲಿ ಭಾರತದ ಸಂವಿಧಾನದ ರಚನೆಯಾದ ನಂತರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಉದ್ದಾರಕ್ಕೆ ವಾಲೇಕರ್ ಆಯೋಗ ನೇಮಕ ಮಾಡಲಾಯಿತು. ಆಯೋಗದ ಕೆಲವೊಂದು ಶಿಫಾರಸಿಗೆ ಮಾನ್ಯತೆ ನೀಡಿ OBC ವರ್ಗಕ್ಕೆ ಆಯೋಗ ಮಾಡಿದ್ದ ಶಿಫಾರಸನ್ನು ಸರಕಾರ ತಿರಸ್ಕರಿಸಿತ್ತು. ಆದರೆ ಸರಕಾರ ಮಂಡಲ್ ಆಯೋಗವನ್ನು ನೇಮಕ ಮಾಡಿ, ಆಯೋಗದ ಶಿಫಾರಸಿನಂತೆ 1990ರಲ್ಲಿ ವಿ ಪಿ ಸಿಂಗ್ ಸರಕಾರ OBC ವರ್ಗಕ್ಕೆ ಮಾಡಿದ್ದ ಶಿಫಾರಸಿಗೆ ಹಸಿರು ನಿಶಾನೆ ತೋರಿತು. ಈ ನಿರ್ಧಾರದ ವಿರುದ್ದ ರಾಷ್ಟ್ರಾದ್ಯಂತ ವಿದ್ಯಾರ್ಥಿಗಳು ಚಳುವಳಿಗೆ ಧುಮುಕಿದ್ದರು.

ಪಿ ವಿ ನರಸಿಂಹರಾವ್

ಪಿ ವಿ ನರಸಿಂಹರಾವ್

1991ರಲ್ಲಿ ಕೇಂದ್ರದಲ್ಲಿ ಪಿವಿಎನ್ ಸರಕಾರ ಮುಂದುವರಿದ ಜಾತಿಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಪ್ರಕಟಿಸಿತು. 1995ರಲ್ಲಿ ಸಂಸತ್ತು ಸಾಂವಿಧಾನಿಕ ತಿದ್ದುಪಡಿಯನ್ನು ಆಂಗೀಕರಿಸಿ ಎಸ್ಸಿ/ಎಸ್ಟಿ ಪಂಗಡಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಿತು.

ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯ

2007ರಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರಕಾರದ OBC ಕ್ಯಾಟಗರಿಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿನ ಮೀಸಲಾತಿಗೆ ತಡೆ ನೀಡಿತ್ತು. ಆದರೆ 10.04.2008ರಂದು ಐತಿಹಾಸಿಕ ತೀರ್ಪು ನೀಡಿ ಸರಕಾರದ ಸಂಸ್ಥೆಗಳಲ್ಲಿ OBC ಕ್ಯಾಟಗರಿಗೆ ಶೇ. 27 ಮೀಸಲಾತಿ ಪ್ರಮಾಣ ನೀಡಲು ಒಪ್ಪಿಕೊಂಡಿತು.

English summary
Union Government planning to bring reservation quota in private sector companies. UPA government decided to farm a team to study the increase in reservation quota percentage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X