'ಕಣ್ಣೀರಧಾರೆ' ಹರಿಸಿದ 'ಅಮೃತಧಾರೆ' ರಮ್ಯಾ
ಮಂಡ್ಯ, ಆ.12 : ಚಿತ್ರನಟಿ, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ತಮ್ಮ ಸಾಕು ತಂದೆಯ ಅಕಾಲಿಕ ನಿಧನದ ದುಃಖದಿಂದ ಹೊರಬಂದು ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರಚಾರವನ್ನು ಆರಂಭಿಸಿದರು. ಆದರೆ, ಪ್ರಚಾರ ಆರಂಭಿಸುತ್ತಿದ್ದಂತೆ ದುಃಖ ತಡೆದುಕೊಳ್ಳಲಾಗದೆ ಕಣ್ಣೀರಧಾರೆ ಹರಿಸಿದರು.
ಚಿತ್ರನಟ ಅಂಬರೀಶ್, ನಟಿ ರಮ್ಯ, ಚುನಾವಣಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಸುರೇಶ್ ಗೌಡ, ಮುಖಂಡರಾದ ಮಧು ಮಾಧೇಗೌಡ, ಎಲ್.ಡಿ.ರವಿ, ಸಿದ್ದರಾಜು ಮುಂತಾದವರು ರಮ್ಯಾ ಅವರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು. [ನೋಡಿ: ಸಮಗ್ರ ಚುನಾವಣೆ ಪ್ರಚಾರ ಚಿತ್ರಗಳು]
ಮಧ್ಯಾಹ್ನ 12 ಗಂಟೆಗೆ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು ನಂತರ ಬಹಿರಂಗ ಸಭೆಯನ್ನದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ಪೇಟೆ ಬೀದಿ, ಶಂಕರಮಠ, ಕಲ್ಲಳ್ಳಿ, ಮಡಿವಾಳ, ಚಾಮುಂಡೇಶ್ವರಿನಗರ ಮುಂತಾದೆಡೆ ರೋಡ್ ಶೋ ನಡೆಸಿ ಮತ ಯಾಚಿಸಿದರು. ರೋಡ್ ಶೋ ಉದ್ದಕ್ಕೂ ರಮ್ಯಾ ಅವರ ಮುಖ ಬಾಡಿತ್ತು. ದುಃಖದಿಂದಲೇ ಪ್ರಚಾರ ಕಾರ್ಯದ ಕರ್ತವ್ಯ ಪೂರೈಸಲು ರಮ್ಯಾ ಹಾಜರಾಗಿದ್ದರು.
ಪ್ರಚಾರ ಕಾರ್ಯದಲ್ಲಿ ರಮ್ಯಾ ಅವರ ಜತೆಯಲ್ಲೇ ಇದ್ದ ಅಂಬರೀಷ್ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ನಾಯ್ಡು ಅವರು ರಮ್ಯಾ ಅವರನ್ನು ಸಮಾಧಾನ ಪಡಿಸಲು ಯತ್ನಿಸಿ ಸೋತರು. ಕಣ್ಣೀರು ಒರೆಸಿಕೊಳ್ಳುತ್ತಾ ಮತದಾರರನ್ನು ಕಂಡಾಗ ಕೈ ಮುಗಿದು ರಮ್ಯಾ ಮತಯಾಚಿಸುತ್ತಿದ್ದ ದೃಶ್ಯ ಕಂಡು ಬಂದಿತು. ರಮ್ಯಾ ಚುನಾವಣಾ ಪ್ರಚಾರ ರೋಡ್ ಶೋ ಚಿತ್ರಗಳು ಇಲ್ಲಿವೆ ನೋಡಿ...

ರಮ್ಯಾ ಚುನಾವಣಾ ಪ್ರಚಾರ
ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರಚಾರವನ್ನು ಆರಂಭಿಸಿದರು. ಆದರೆ, ಪ್ರಚಾರ ಆರಂಭಿಸುತ್ತಿದ್ದಂತೆ ದುಃಖ ತಡೆದುಕೊಳ್ಳಲಾಗದೆ ಕಣ್ಣೀರಧಾರೆ ಹರಿಸಿದರು.

ಚುನಾವಣಾ ಪ್ರಚಾರ ರೋಡ್ ಶೋ
ಮಧ್ಯಾಹ್ನ 12 ಗಂಟೆಗೆ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು ನಂತರ ಬಹಿರಂಗ ಸಭೆಯನ್ನದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು

ರಮ್ಯಾ ರೋಡ್ ಶೋ
ಕಾಳಿಕಾಂಬ ದೇಗುಲದಿಂದ ಪೇಟೆ ಬೀದಿ, ಶಂಕರಮಠ, ಕಲ್ಲಳ್ಳಿ, ಮಡಿವಾಳ, ಚಾಮುಂಡೇಶ್ವರಿನಗರ ಮುಂತಾದೆಡೆ ಸಾಗಿತು

ಚುನಾವಣಾ ಪ್ರಚಾರ
ಚುನಾವಣಾ ಪ್ರಚಾರ ಕಾರ್ಯಕ್ಕೆ ಸಚಿವ ಅಂಬರೀಷ್ ಸಿದ್ದತೆ ನಡೆಸಿದ್ದು ಹೀಗೆ

ಮಂಡ್ಯ ಅಭ್ಯರ್ಥಿ ರಮ್ಯಾ
ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ

ಕಾಳಿಕಾಂಬ ದೇಗುಲ
ಮಂಡ್ಯದ ಕಾಳಿಕಾಂಬ ದೇಗುಲಕ್ಕೆ ಮಧ್ಯಾಹ್ನ 12 ಗಂಟೆಗೆ ಕಾಳಿಕಾಂಬ ದೇವಾಲಯದಲ್ಲಿ ರಮ್ಯಾ ಪೂಜೆ ಸಲ್ಲಿಸಿ ಹೊರ ಬರುವ ತನಕ ಬಿಗಿ ಭದ್ರತೆ ಒದಗಿಸಲಾಗಿತ್ತು.

ಚುನಾವಣಾ ಪ್ರಚಾರ ಕಾರ್ಯ
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ರೋಡ್ ಶೋ ನಡೆಸಿ ಮತ ಯಾಚಿಸಿದರು












Click it and Unblock the Notifications