In pics : ಬರ್ಥಡೇ ಬಾಯ್ ಸಿದ್ದು ,ರಮ್ಯಾ ಪ್ರಚಾರ
ಚನ್ನಪಟ್ಟಣ,ಆ.12: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಚುನಾವಣ ಪ್ರಚಾರ ನಡೆಸಲು ಆ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿನಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಸಮಿತಿ ಹೇಳಿದೆ.
ಕಾಂಗ್ರೆಸ್ಸಿನವರಿಗೆ ತಿಥಿಯೂಟ ಇಷ್ಟ ಎಂದು ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೀಡಿದ ಹೇಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದಾರೆ. ದೇವೇಗೌಡರಿಗೆ ಮದುವೆ ಊಟಕ್ಕಿಂತ ತಿಥಿ ಊಟ ಇಷ್ಟ ಎಂದು ಕೋಡಂಬಹಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
"ಅಂದು ಬಿಜೆಪಿ ಕೋಮುವಾದಿ ಪಕ್ಷ ಅದರ ಜತೆ ಮೈತ್ರಿ ಮಾಡಿಕೊಂಡು ನನ್ನ ಮಗ ಸಿಎಂ ಆಗಬೇಕಾದರೆ ನನ್ನ ಹೆಣ ದಾಟಬೇಕು ಎಂದು ದೇವೇಗೌಡ ಹೇಳಿದ್ದರು. ಆದರೆ, ನಂತರ ಅಪವಿತ್ರ ಮೈತ್ರಿಯನ್ನೇ ಹಾಡಿಹೊಗಳಿದರು ನನ್ನ ಮಗನಂಥ ಸಿಎಂ ಯಾರು ಎಂದರು. ಚುನಾವಣೆಯಿಂದ ಚುನಾವಣೆಗೆ ಬಣ್ಣ ಬದಲಾಯಿಸುವುದು ಜೆಡಿಎಸ್ ನಾಯಕರಿಗೆ ಕರಗತವಾಗಿದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ವಿಸ್ತೃತ ವರದಿ
ಸಿದ್ದರಾಮಯ್ಯ ಅವರು ಬೆಳಿಗ್ಗೆ 10 ಗಂಟೆಗೆ ಕೋಡಂಬಹಳ್ಳಿಯಲ್ಲಿ, 11 ಗಂಟೆಗೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ, 12.30ಕ್ಕೆ ಮದೀನ ಚೌಕ್ ನಲ್ಲಿ, 2 ಗಂಟೆಗೆ ಬೇವೂರಿನಲ್ಲಿ ಬಹಿರಂಗಸಭೆ ಎಂದು ಕಾರ್ಯಕ್ರಮ ನಿಗದಿಯಾಗಿದೆ.
ರಮ್ಯಾ ಪ್ರಚಾರ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಅವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ರಮ್ಯಾ ಅವರ ಪರ ಸಚಿವ ಅಂಬರೀಷ್ ಸೇರಿದಂತೆ ಹಲವಾರು ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡರು. [ರಮ್ಯಾ ಪ್ರಚಾರ ಹೇಗಿತ್ತು ಇಲ್ಲಿದೆ ವರದಿ]
ಸಭೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ವಿಭಾಗಗಳ ಪದಾಧಿಕಾರಿಗಳು, ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರುಗಳು, ನಗರಸಭೆ ಸದಸ್ಯರು, ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಮಾದು, ಪಟ್ಟಣದ ಅಧ್ಯಕ್ಷ ಎ.ಸಿ.ವೀರೇಗೌಡ, ಮಹಿಳಾ ಘಟಕದ ಬಿ.ಎಸ್ ರೀನಾ ಅವರು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ. ಚುನಾವಣಾ ಕೆಲವು ಚಿತ್ರಗಳು ಇಲ್ಲಿವೆ ನೋಡಿ...

ರಮ್ಯಾ ಪರ ಪ್ರಚಾರ
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಅವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ರಮ್ಯಾ ಅವರ ಪರ ಸಚಿವ ಅಂಬರೀಷ್ ಸೇರಿದಂತೆ ಹಲವಾರು ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಡಿಕೆ ಸುರೇಶ್ ಪ್ರಚಾರ
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪ್ರಚಾರ ಕಾರ್ಯ

ಡಿಕೆ ಸುರೇಶ್ ಪ್ರಚಾರ
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರ ಪ್ರಚಾರ ಕಾರ್ಯ

ಡಿಕೆ ಸುರೇಶ್ ಪರ ಪ್ರಚಾರ
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರ ಪ್ರಚಾರ ಕಾರ್ಯ

ರಮ್ಯಾ ಪರ ಪ್ರಚಾರ
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಪರ ಚುನಾವಣಾ ಪ್ರಚಾರದಲ್ಲಿ ಸಚಿವ ಅಂಬರೀಷ್. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ರಮ್ಯಾ ಪರ ಪ್ರಚಾರ
ಮಂಡ್ಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಪರ ಬಿರುಸಿನ ಪ್ರಚಾರ ಕಾರ್ಯ ನಡೆದಿದೆ

ರಮ್ಯಾ ಪರ ಪ್ರಚಾರ
ಮಂಡ್ಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಪರ ಬಿರುಸಿನ ಪ್ರಚಾರ ಕಾರ್ಯ

ರಮ್ಯಾ ಪರ ಪ್ರಚಾರ
ಚುನಾವಣಾ ಪ್ರಚಾರ ಚಿತ್ರಗಳು

ರಮ್ಯಾ ಪರ ಪ್ರಚಾರ
ಚುನಾವಣಾ ಪ್ರಚಾರ ಚಿತ್ರಗಳು

ರಮ್ಯಾ ಪರ ಪ್ರಚಾರ
ಚುನಾವಣಾ ಪ್ರಚಾರ ಚಿತ್ರಗಳು












Click it and Unblock the Notifications