13 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

siddaramaiah
ಬೆಂಗಳೂರು, ಆ.11 : ರಾಜ್ಯ ಸರ್ಕಾರ ಮತ್ತೊಮ್ಮೆ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ ಮಾಡಿದೆ. ಬಿಎಂಆರ್ ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎನ್‌.ಶಿವಶೈಲಂ ಸೇರಿದಂತೆ 13 ಮಂದಿ ಐಎಎಸ್ ಅಧಿಕಾರಿಗಳನ್ನು ಶನಿವಾರ ವರ್ಗಾವಣೆ ಮಾಡಿದೆ.

ರಜಾದಿನವಾದ ಶನಿವಾರ ಆದೇಶ ಹೊರಡಿಸಿರುವ ಸರ್ಕಾರ, 13 ಮಂದಿಯನ್ನು ವರ್ಗಾವಣೆ ಮಾಡಿದ್ದು, ಕಳೆದ ತಿಂಗಳು ವರ್ಗಾಯಿಸಿದ್ದ ನಾಲ್ವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಹಿಂದಿನ ಹುದ್ದೆಗಳಲ್ಲಿಯೇ ಮುಂದುವರೆಯುವಂತೆ ನಿರ್ದೇಶನ ನೀಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್‌ ) ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರದೀಪ್‌ ಸಿಂಗ್‌ ಖರೋಲ ಅವರನ್ನು ನೇಮಿಸಲಾಗಿದೆ. ಆ ಸ್ಥಾನದಲ್ಲಿದ್ದ ಶಿವಶೈಲಂ ಅವರಿಗೆ ಇನ್ನೂ ಯಾವುದೇ ಹುದ್ದೆಯನ್ನು ನೀಡಿಲ್ಲ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದ ಗೌರವ್‌ ಗುಪ್ತ ಅವರನ್ನು ಬೆಂಗಳೂರು ಪ್ರಾದೇಶಿಕ ಆಯುಕ್ತರನ್ನಾಗಿ ವರ್ಗಾಯಿಸಲಾಗಿದ್ದು, ತೆರವಾದ ಜಾಗಕ್ಕೆ ಎಂ.ಎಸ್‌.ರವಿಶಂಕರ್ ಅವರನ್ನು ನೇಮಿಸಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಾಗಿ ಎಸ್‌.ಶಂಕರನಾರಾಯಣ ಅವರನ್ನು ನೇಮಿಸಲಾಗಿದ್ದು, ಈ ಹುದ್ದೆಯಲ್ಲಿದ್ದ ಎಸ್‌.ಎನ್‌.ಜಯರಾಂ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ನೇಮಿಸಲಾಗಿದೆ.

ನವೀನ್‌ರಾಜ್‌ ಸಿಂಗ್‌ ಅವರನ್ನು ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಏಜೆನ್ಸಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
ಅಧಿಕಾರಿಗಳು ನೇಮಕ
ಎಂ.ಎಂ.ಕುಂಜಪ್ಪ - ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ
ಡಾ. ಡಿ.ಎಸ್‌.ವಿಶ್ವನಾಥ್‌ - ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ
ಅನುರಾಗ್‌ ತಿವಾರಿ - ಕೊಡಗು ಜಿಲ್ಲಾಧಿಕಾರಿ
ರೋಹಿಣಿ ಸಿಂಧೂರಿ ದಾಸರಿ - ಗ್ರಾಮೀಣಾಭಿವೃದ್ಧಿ ಇಲಾಖೆಯ ಸ್ವ ಉದ್ಯೋಗ ಕಾರ್ಯಕ್ರಮದ ನಿರ್ದೇಶಕರು
ಡಾ. ರಾಮೇಗೌಡ - ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಡಿ.ಕೆ.ರವಿ - ಕೋಲಾರ ಜಿಲ್ಲಾಧಿಕಾರಿ
ಬಿ.ಎಸ್.ಶೇಖರಪ್ಪ - ಚಿಕ್ಕಮಗಳೂರು ಜಿಲ್ಲಾಧಿಕಾರಿ

ವರ್ಗಾವಣೆ ರದ್ದು
ಜುಲೈ 17ರಂದು ವರ್ಗಾವಣೆಗೊಂಡಿದ್ದ ಜಿ.ಎಸ್‌.ಶಿವಸ್ವಾಮಿ, ಎನ್‌.ಎಂ.ಪನಾಲಿ, ಉಮೇಶ್‌ ಕುಸುಗಲ್‌, ವಿ.ಜಿ.ತುರುಮರಿ ಅಧಿಕಾರಿಗಳ ವರ್ಗಾವಣೆಯನ್ನು ರದ್ದುಗೊಳಿಸಿದ್ದು, ಅವರು ತಮ್ಮ ಇಲಾಖೆಯಲ್ಲಿಯೇ ಮುಂದುವರೆಯಲಿದ್ದಾರೆ.

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+