Ragging- ಆತ್ಯಾಚಾರ ಬೆದರಿಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಇದರಿಂದ ಬೇಸತ್ತು ಇಲ್ಲಿನ RKDF ಕಾಲೇಜಿನಲ್ಲಿ ದ್ವಿತಿಯ ವರ್ಷದ B. Pharma ವ್ಯಾಸಂಗ ಮಾಡುತ್ತಿದ್ದ ಅನಿತಾ ಪ್ರಸಾದ್ ಶರ್ಮಾ (18) ತನ್ನ ನಿವಾಸದಲ್ಲಿ ನೇಣಿಗೆ ಗೋಣೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ವಿದ್ಯಾರ್ಥಿನಿಯರು ಮತ್ತು ಒಬ್ಬ ಬೋಧಕ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ತನ್ನ ಹಿರಿಯ ವಿದ್ಯಾರ್ಥಿನಿಯರು 2012ರಲ್ಲಿ ಕಾಲೇಜಿಗೆ ಸೇರಿಗಾನಿಂದಲೂ Ragging ಮಾಡುತ್ತಿದ್ದರು. ಒಬ್ಬ ಹುಡುಗನ ಜತೆ ಸಂಬಂಧವಿಟ್ಟುಕೊ ಎಂದು ಇವರೆಲ್ಲ ನನ್ನನ್ನು ಪೀಡಿಸುತ್ತಿದ್ದರು. ವಿಷಯವನ್ನು ಬಹಿರಂಗಪಡಿಸಿದರೆ ಆತ್ಯಾಚಾರವೆಸಗಿ, ಆ್ಯಸಿಡ್ ದಾಳಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಅನಿತಾ ಪತ್ರವೊಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ
ಜತೆಗೆ ಮಿಡ್ ಸೆಮಿಸ್ಟರ್ ಕಾಪಿಗಳನ್ನು ಸಿದ್ದಪಡಿಸುವಂತೆ ಸೀನಿಯರ್ಸ್ ಬಲವಂತಪಡಿಸುತ್ತಿದ್ದರು. ಇದನ್ನು ಮನಿಶಾ ಎಂಬ ಶಿಕ್ಷಕಿಯ ಗಮನಕ್ಕೆ ತಂದಾಗ 'ಅಡ್ಜಸ್ಟ್ ಮಾಡಿಕೊಂಡು ಹೋಗು' ಎಂದು ಬುದ್ಧಿವಾದ ಹೇಳಿದರು. ಇಲ್ಲವಾದಲ್ಲಿ ನೀನೇ ಕಾಲೇಜು ಬಿಟ್ಟು ಹೋಗಬೇಕಾಗುತ್ತದೆ ಎಂದೂ ಆಯಮ್ಮ ಎಚ್ಚರಿಸಿದ್ದಳು. ಇದು ನನ್ನನ್ನು rag ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿನಿಯರ ಗಮನಕ್ಕೂ ಬಂದಾಗ ಅವರು ಹೆಚ್ಚು ಕಾಟ ಕೊಡತೊಡಗಿದರು.
Ragging ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಮನಿಶಾ ಅಲ್ಲದೆ ನಿಧಿ, ದೀಪ್ತಿ, ದಿವ್ಯಾಂಶಿ ಮತ್ತು ಪ್ರೀತಿ ಅವರನ್ನು ಗುರುವಾರ ಬಂಧಿಸಲಾಗಿದೆ. ಘಟನೆಯನ್ನು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಗಮನಕ್ಕೂ ತರಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರು ಆದೇಶಿಸಿದ್ದಾರೆ.












Click it and Unblock the Notifications