ರಮ್ಯಾ ಪ್ರನಾಳಶಿಶು ಹೇಳಿಕೆಗೆ ಮಂಗಳ ಹಾಡಿದ ಶ್ರೀನಿವಾಸ್

ಮಂಡ್ಯ, ಆಗಸ್ಟ್ 10: ಜೆಡಿಎಸ್ ಮಾಜಿ ಶಾಸಕ ಎಂ ಶ್ರೀನಿವಾಸ್ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮ್ಯಾ ಅವರ ಬಗ್ಗೆ ನುಡಿದಿದ್ದ ಕೀಳುಮಟ್ಟದ ಅವಹೇಳನಕಾರಿ ಮಾತುಗಳಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್ ಅವರು 'ಕುಮಾರಿ ರಮ್ಯಾ ಅವರಿಗೆ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿಗಳನ್ನೇ ಉಲ್ಲೇಖಿಸಿ, ರಮ್ಯಾ ಅವರ ಪೂರ್ವಾಪರ ಪ್ರಶ್ನಿಸಿದ್ದೆ ಅಷ್ಟೇ' ಎಂದು ಹೇಳಿದ್ದಾರೆ.

Ramya test-tube baby ramarks JDS Srinivas apologises

'ನನಗೆ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಗೌರವವಿದೆ. ಮಾಧ್ಯಮಗಳ ಮೂಲಕ ವಿಷಾದ ಸೂಚಿಸುತ್ತೇನೆ. ಕಾಂಗ್ರೆಸ್ ಮುಖಂಡರಲ್ಲೂ ಕ್ಷಮೆಯಾಚಿಸುವೆ' ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಇದರೊಂದಿಗೆ ರಾಜ್ಯಾದ್ಯಂತ ಶ್ರೀನಿವಾಸ್ ಹೇಳಿಕೆಯ ವಿರುದ್ಧ ಎದ್ದಿದ್ದ ಆಕ್ರೋಶ ತಣ್ಣಗಾದಂತಿದೆ. ಈ ಮಧ್ಯೆ, ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಶ್ರೀನಿವಾಸ್ ಗೆ Show Cause ನೋಟಿಸ್ ಜಾರಿಗೊಳಿಸಿದ್ದಾರೆ.

ಆದರೆ ಇಂತಹ ಪ್ರಕರಣಗಳು ಈ ಹಿಂದೆಯೂ ನಡೆದಿದ್ದು, ಯಾವುದೇ ಪ್ರಕರಣ ಸ್ಟಾಂಡ್ ಆಗಿಲ್ಲ. ಚುನಾವಣೆ ಪ್ರಚಾರದ ವೇಳೆ ರಾಜಕಾರಣಿಗಳಿಗೆ ಇದು ಕಾಲಕ್ಷೇಪವಾಗಿ ಕಂಡುಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+