ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೀಣ್ಯ ಪಾರ್ಲೆ ಜಿ ಬಿಸ್ಕತ್ ಫ್ಯಾಕ್ಟರಿಗೆ ಬೀಗ

By Srinath
|
Google Oneindia Kannada News

ಬೆಂಗಳೂರಿನ ಪೀಣ್ಯದಲ್ಲಿರುವ ಪಾರ್ಲೆ ಬಿಸ್ಕತ್ ಉತ್ಪಾದನಾ ಕಂಪನಿ ಸದ್ಯದಲ್ಲೇ ಬಂದ್ ಆಗಲಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬಿಸ್ಕತ್ ವ್ಯಾಪಾರ ಕುಸಿಯುತ್ತಾ ಬಂದಿದ್ದು ಕಂಪನಿ ಇನ್ನು ಮುಂದುವರಿಯುವ ಸ್ಥಿತಿಯಲ್ಲಿಲ್ಲ ಎಂಬ ಹಂತಕ್ಕೆ ಬಂದಿದೆ.

ಇದಕ್ಕೆ ಮಾರಕವಾಗಿ ಕಂಪನಿ ಉದ್ಯೋಗಿಗಳೂ ಸಹ ದೀರ್ಘ ಕಾಲದಿಂದ ಮುಷ್ಕರದಲ್ಲಿ ತೊಡಗಿದ್ದಾರೆ. ಜತೆಗೆ ಬಿಸ್ಕತ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೆ ತಲುಪಿದೆ. ಹಾಗಾಗಿ Parle Products Pvt Ltd ಬಿಸ್ಕತ್ ಮತ್ತಿತರ ಸಿಹಿ ತಿನಿಸುಗಳ ಉತ್ಪಾದನಾ ಕಂಪನಿ ಇದೇ ಸೆಪ್ಟೆಂಬರಿನಿಂದ ಫ್ಯಾಕ್ಟರಿಗೆ ಬೀಗ ಹಾಕಲು ನಿರ್ಧರಿಸಿದೆ. ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯೂ ಇದಕ್ಕೆ ಅಸ್ತು ಅಂದಿದೆ.

Parle Products plant at Peenya Bangalore to close down in September 2013

ಅಕ್ರಮ ಕಾರ್ಮಿಕ ಸಂಘಟನೆಯು ಕಂಪನಿಯ ಹಿತಾಸಕ್ತಿಗೆ ಮಾರಕವಾಗಿದೆ. ಕಾರ್ಮಿಕರ ಕಾನೂನುಬಾಹಿರ ಮುಷ್ಕರದಿಂದಾಗಿ ಕಂಪನಿಗೆ 1 ಕೋಟಿ ರೂ. ನಷ್ಟವುಂಟಾಗಿದೆ. ಕಂಪನಿಯ ಆಸ್ತಿಪಾಸ್ತಿಗೂ ನಷ್ಟವುಂಟು ಮಾಡಿದ್ದಾರೆ. ಶಾಂತಿಯುತ ಮಾತುಕತೆಗೆ ಕಾರ್ಮಿಕರು ಎಂದೂ ಮುಂದಾಗಲಿಲ್ಲ. ಹಾಗಾಗಿ ಕಾರ್ಮಿಕ ಇಲಾಖೆಯ ಅನುಮೋದನೆ ಪಡೆದು ಫ್ಯಾಕ್ಟರಿ ಮುಚ್ಚುತ್ತಿದ್ದೇವೆ ಎಂದು ಕಂಪನಿಯ ವಕೀಲರು ತಿಳಿಸಿದ್ದಾರೆ.

ಆದರೆ ಕಾರ್ಮಿಕರ ಒಕ್ಕೂಟವು ಕಂಪನಿಯ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸತ್ಯಕ್ಕೆ ದೂರವಾದ ಆಪಾದನೆಗಳನ್ನು ಮಾಡಿದೆ ಎಂದು ಕಿಡಿಕಾರಿದೆ.

ಆದರೆ ಈ ಎರಡೂ ವರ್ಗಗಳ ಪೈಕಿ ಯಾರದು ಸರಿಯೋ ತಪ್ಪೋ/ ಯಾವುದು ನಿಜವೋ ಗೊತ್ತಿಲ್ಲ. ಆದರೆ ಜನ ಮಾತ್ರ ಸ್ವಾದಿಷ್ಟಭರಿತ ಪಾರ್ಲೆ ಉತ್ಪನ್ನಗಳ ಸವಿರುಚಿಯನ್ನಂತೂ ಕಳೆದುಕೊಳ್ಳಲಿದ್ದಾರೆ.

ಬೆಂಗಳೂರು ಪೀಣ್ಯ ಘಟಕ ಬಿಟ್ಟರೆ ಪಾರ್ಲೆ ಜಿ ಫ್ಯಾಕ್ಟರಿಗಳು ಮುಂಬೈ, ಹರ್ಯಾಣಾ ಮತ್ತು ರಾಜಸ್ಥಾನದಲ್ಲಿ ಚಾಲ್ತಿಯಲ್ಲಿವೆ. ಇದಲ್ಲದೆ ಗುತ್ತಿಗೆ ಒಪ್ಪಂದದ ಮೇಲೆ ಇನ್ನೂ ಅನೇಕ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಖ್ಯಾತ ಪಾರ್ಲೆ ಜಿ ಬಿಸ್ಕತ್ ಅಲ್ಲದೆ ಕಂಪನಿಯು ಇನ್ನೂ 20 ನಾನಾ ನಮೂನೆಯ ಬಿಸ್ಕತ್ ಮತ್ತು ಸಿಹಿ ತಿಂಡಿಗಳನ್ನು 1929ರಿಂದ ತಯಾರಿಸುತ್ತಿದೆ.

English summary
Parle Products plant at Peenya Bangalore to close down in September 2013
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X