ಚಿತ್ರಗಳಲ್ಲಿ: ಪಾಕ್ ದುಷ್ಕೃತ್ಯ ಖಂಡಿಸಿ ಪ್ರತಿಭಟನೆ

ಬೆಂಗಳೂರು, ಆ.6: ಗಡಿ ಉಲ್ಲಂಘನೆ ಮಾಡಿ ಭಾರತೀಯ ಯೋಧರನ್ನು ಕೊಂದ ಪಾಕಿಸ್ತಾನ ಕ್ರಮವನ್ನು ಖಂಡಿಸಿ ಶಿವ ಸೇನೆ ಹಾಗೂ ಡೊಗ್ರಾ ಫ್ರಂಟ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಐವರು ಭಾರತೀಯ ಯೋಧರ ಹತ್ಯೆಯನ್ನು ಖಂಡಿಸಿ ಜಮ್ಮುವಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ, ಮೆರವಣಿಗೆ ನಡೆಸಿವೆ. ವಿವರ ಇಲ್ಲಿದೆ ಓದಿ

ಜಪಾನ್ನಿನ ಹಿರೋಷಿಯಾ ನಗರದ ಮೇಲೆ ಅಮೆರಿಕ ನಡೆಸಿದ ಅಣು ಬಾಂಬ್ ದಾಳಿಯ 68ನೇ ವಾರ್ಷಿಕ ಕಹಿ ನೆನಪು ಇಂದು ಎಲ್ಲರನ್ನು ಕಾಡುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಹಿರೋಷಿಯಾ ಶಾಂತಿ ಸ್ಮಾರಕ ಉದ್ಯಾನವನಕ್ಕೆ ಧಾವಿಸಿ ಪ್ರಾರ್ಥನೆ ಸಲ್ಲಿಸಿದರು.

ವಿಶ್ವ ಮಹಾಯುದ್ಧ IIರಲ್ಲಿ ಆಗಸ್ಟ್ 6, 1945ರಂದು ಎನೊಲಾ ಗೇ ಹೆಸರಿನ ಯುಎಸ್ ಬಿ 29 ಬಾಂಬರ್ ದಾಳಿಗೆ ಹಿರೋಷಿಯಾ ನಗರ ಧ್ವಂಸಗೊಂಡಿತ್ತು. ಆಗಸ್ಟ್ 9ರಂದು ನಾಗಾಸಾಕಿ ನಗರದಲ್ಲಿ ಇಂಥದ್ದೇ ಬಾಂಬ್ ಬಿದ್ದಿತ್ತು ಸುಮಾರು 70 ಸಾವಿರ ಜನರನ್ನು ಈ ಬಾಂಬ್ ದಾಳಿ ಬಲಿ ತೆಗೆದುಕೊಂಡಿತ್ತು, ಒಟ್ಟಾರೆ 2 ಲಕ್ಷಕ್ಕೂ ಅಧಿಕ ಜೀವಿಗಳನ್ನು ನಾಶ ಪಡೆಸಿದ್ದಲ್ಲದೆ ಅನೇಕ ವರ್ಷಗಳ ಕಾಲ ಮಾರಣಾಂತಿಕ ಕಾಯಿಲೆಗೆ ಜನರನ್ನು ದೂಡಿತ್ತು. ಹೆಚ್ಚಿನ ಸುದ್ದಿ ಇಲ್ಲಿದೆ

ಉಳಿದಂತೆ ಇಂದಿನ ಚಿತ್ರ ಸುದ್ದಿಗಳಲ್ಲಿ ಆಷಸ್ ಉಳಿಸಿಕೊಂಡ ಇಂಗ್ಲೆಂಡ್ ಸಂಭ್ರಮ, ಲಂಡನ್ನಿನಲ್ಲಿ ಲ್ಯಾಬ್ ನಲ್ಲಿ ತಯಾರಾದ ಭೀಪ್ ಬರ್ಗರ್, ಅಜ್ಮೇರಾದ ದರ್ಗಾಕ್ಕೆ ತೆರಳಿದ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ, ಮುಂಬೈನಲ್ಲಿ ಜ್ಯುವೆಲ್ಲರಿ ಫ್ಯಾಷನ್ ಶೋನಲ್ಲಿ ಬೆಂಗಾಳಿ ಬೆಡಗಿ, ಅಲಹಾಬಾದಿನಲ್ಲಿ ವಿದ್ಯಾರ್ಥಿಗಳ ಜೊತೆ ರಾಹುಲ್ ಗಾಂಧಿ, ಲಕ್ನೋದಲ್ಲಿ ದುರ್ಗಾಶಕ್ತಿ ಬೆಂಬಲಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರಿಂದ ಪ್ರತಿಭಟನೆ, ಬೆಂಗಳೂರಿನಲ್ಲಿ ಕುಸಿತ ನಿರ್ಮಾಣ ಹಂತದಲ್ಲಿದ್ದ ಕಟ್ಟಡ, ಕೊಚ್ಚಿ ಮಳೆ, ಗುರ್ ಗಾಂವ್ ನಲ್ಲಿ ಮಳೆ ಮುಂದಿನ ಚಿತ್ರಗಳಿವೆ...

ಜಮ್ಮು ಮತ್ತು ಕಾಶ್ಮೀರದಲ್ಲಿ

ಜಮ್ಮು ಮತ್ತು ಕಾಶ್ಮೀರದಲ್ಲಿ

ಗಡಿ ಉಲ್ಲಂಘನೆ ಮಾಡಿ ಭಾರತೀಯ ಯೋಧರನ್ನು ಕೊಂದ ಪಾಕಿಸ್ತಾನ ಕ್ರಮವನ್ನು ಖಂಡಿಸಿ ಶಿವ ಸೇನೆ ಹಾಗೂ ಡೊಗ್ರಾ ಫ್ರಂಟ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಹಿರೋಷಿಮಾದಲ್ಲಿ

ಹಿರೋಷಿಮಾದಲ್ಲಿ

ಜಪಾನಿನ ಪಶ್ಚಿಮ ಭಾಗದಲ್ಲಿರುವ ಹಿರೋಷಿಮಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಶಾಂತಿ ಸ್ಮಾರಕ ಉದ್ಯಾನವನದತ್ತ ಧಾವಿಸುತ್ತಿರುವ ದೃಶ್ಯ

ಅಲಹಾಬಾದಿನಲ್ಲಿ ರಾಹುಲ್

ಅಲಹಾಬಾದಿನಲ್ಲಿ ರಾಹುಲ್

ಅಲಹಾಬಾದ್: ಇಲ್ಲಿನ ನೈನಿಯಲ್ಲಿರುವ ಕಮಲಾ ನೆಹರೂ ಸ್ಮಾರಕ ಆಸ್ಪತ್ರೆ ಹೊಸ ವಿಭಾಗ ಉದ್ಘಾಟನೆಗೆ ಬಂದಿದ್ದ ರಾಹುಲ್ ಗಾಂಧಿ ಅವರು ಸ್ಥಳೀಯ ವಿದ್ಯಾರ್ಥಿಗಳ ಜೊತೆ ಕಾಣಿಸಿದ್ದು ಹೀಗೆ

ಕೊಚ್ಚಿಯಲ್ಲಿ ಪ್ರವಾಹ

ಕೊಚ್ಚಿಯಲ್ಲಿ ಪ್ರವಾಹ

ಕೊಚ್ಚಿ: ಜಲಪ್ರವಾಹದಲ್ಲಿ ಮುಳುಗಿರುವ ದೇಗುಲ. ಇನ್ನಷ್ಟು ಪ್ರವಾಹ ಚಿತ್ರಗಳನ್ನು ಇಲ್ಲಿ ನೋಡಿ

ಲಕ್ನೋದಲ್ಲಿ ದುರ್ಗಾಶಕ್ತಿಗೆ ಬೆಂಬಲ

ಲಕ್ನೋದಲ್ಲಿ ದುರ್ಗಾಶಕ್ತಿಗೆ ಬೆಂಬಲ

ಲಕ್ನೋದಲ್ಲಿ ದುರ್ಗಾಶಕ್ತಿ ಬೆಂಬಲಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರಿಂದ ಪ್ರತಿಭಟನೆ. PTI Photo by Nand Kumar

ಅಜ್ಮೇರಾದಲ್ಲಿ ಅಕ್ಕಿ-ಸೋನಾಕ್ಷಿ

ಅಜ್ಮೇರಾದಲ್ಲಿ ಅಕ್ಕಿ-ಸೋನಾಕ್ಷಿ

ಅಜ್ಮೇರ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ಅವರು ಖ್ವಾಜಾ ಮೊಯಿದ್ದೀನ್ ಚಿಸ್ಟಿಗೆ ಭೇಟಿ ನೀಡಿ ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ ಅಗೇನ್ ಚಿತ್ರದ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 ಬೀಫ್ ಬರ್ಗರ್

ಬೀಫ್ ಬರ್ಗರ್

ಲಂಡನ್: ಹಸುವಿನ ಸ್ಟೆಮ್ ಸೆಲ್ ಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಿ ಬೀಫ್ ಬರ್ಗರ್ ತಯಾರಿಸಲಾಗಿದೆ. ಚೆಫ್ ರಿಚರ್ಡ್ ಮೆಕ್ ಗಿಯೋನ್ ಅವರು ಇದನ್ನು ಆಹಾರ ಕ್ರಾಂತಿ ಎಂದು ಕರೆದಿದ್ದಾರೆ. ಈ ಬರ್ಗರ್ ಬೆಲೆ 250,000 ಯುರೋಗಳು (332,000 ಯುಎಸ್ ಡಾಲರ್) ತಗುಲುತ್ತದಂತೆ.

ಆಷ್ಯಸ್ ಸರಣಿ

ಆಷ್ಯಸ್ ಸರಣಿ

ಮ್ಯಾಚೆಂಸ್ಟರ್: ಓಲ್ಡ್ ಟ್ರಾಫೊರ್ಡ್ ನಲ್ಲಿ ಆಸ್ಟ್ರೇಲಿಯಾ- ಇಂಗ್ಲೆಂಡ್ ನಡುವಿನ ಆಷ್ಯಸ್ ಸರಣಿಯ ಮೂರನೇ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದೆ. ಇದರ ಜೊತೆಗೆ ಇಂಗ್ಲೆಂಡ್ ತಂಡ ಆಷ್ಯಸ್ ಕಪ್ ತನ್ನದಾಗಿಸಿಕೊಂಡಿದೆ. ಇಂಗ್ಲೆಂಡ್ ನಾಯಕ ಅಲೆಸ್ಟರ್ ಕುಕ್ ಅವರು ಅಭಿಮಾನಿಗಳ ಜೊತೆ ಪೋಸ್

ಗುರ್ ಗಾಂವ್ ನಲ್ಲಿ ಮಳೆ

ಗುರ್ ಗಾಂವ್ ನಲ್ಲಿ ಮಳೆ

ಗುರ್ ಗಾಂವ್ ನಲ್ಲಿ ಮಳೆ ನಡುವೆ ಕೊಡೆ ಹಿಡಿದು ಕುಳಿತ ಪ್ರಯಾಣಿಕರು ರಿಕ್ಷಾದಲ್ಲಿ

ಮುಂಬೈನಲ್ಲಿ

ಮುಂಬೈನಲ್ಲಿ

ಮುಂಬೈ: ನಟಿ ರಿತುಪರ್ಣಾ ಸೇನ್ ಗುಪ್ತಾ ಅಂತಾರಾಷ್ಟ್ರೀಯ ಜ್ಯುವೆಲ್ಲರಿ ವೀಕ್ ನ 2ನೇ ದಿನ ಬೆಕ್ಕಿನ ನಡಿಗೆ ಇಟ್ಟಿದ್ದಾರೆ.

ಕೊಚ್ಚಿಯಲ್ಲಿ

ಕೊಚ್ಚಿಯಲ್ಲಿ

ಕೊಚ್ಚಿ ವಿಮಾನ ನಿಲ್ದಾಣದ ಮುಂದೆ ಕಂಡು ಬಂದ ದೃಶ್ಯ. ಇನ್ನಷ್ಟು ಮಳೆ, ಪ್ರವಾಹದ ಚಿತ್ರಗಳನ್ನು ಇಲ್ಲಿ ನೋಡಿ

ಕಾವೇರಿ ನದಿಯಲ್ಲಿ

ಕಾವೇರಿ ನದಿಯಲ್ಲಿ

ಕಾವೇರಿ ನದಿಯಲ್ಲಿ ನಿಂತ ಭಕ್ತರೊಬ್ಬರು ಆಡಿ ಅಮಾವಸ್ಯೆ ಅಂಗವಾಗಿ ಮಂಗಳವಾರ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ನಟಿ ನೇಹಾ ಧೂಪಿಯಾ

ನಟಿ ನೇಹಾ ಧೂಪಿಯಾ

ಮುಂಬೈನಲ್ಲಿ ನಡೆದಿರುವ ಇಂಡಿಯಾ ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ವೀಕ್ ಫ್ಯಾಷನ್ ಶೋ ವೇಳೆ ನಟಿ ನೇಹಾ ಧೂಪಿಯಾ

ಟಿಸಿಎಸ್ ತ್ರೈಮಾಸಿಕ

ಟಿಸಿಎಸ್ ತ್ರೈಮಾಸಿಕ

ಟಿಸಿಎಸ್ Q1 ತ್ರೈಮಾಸಿಕ ವರದಿ ಇಲ್ಲಿದೆ ನೋಡಿ

ಹುತಾತ್ಮರಾದ ಸೈನಿಕರು

ಹುತಾತ್ಮರಾದ ಸೈನಿಕರು

ಪುಂಡಲೀಕ ಮಾನೆ, ಪ್ರೇಮನಾಥ್ ಸಿಂಗ್, ಲ್ಯಾನ್ಸ್ ನಾಯ್ಕ್ ಶಂಭು, ಶ್ರವಣ್ ರೇ, ವಿಜಯ್ ತುಮಾರ್, ರಘುನಂದನ್ ಪ್ರಸಾದ್

ಕುತೂಹಲಕಾರಿ ಅಂಕಿ ಅಂಶ

ಕುತೂಹಲಕಾರಿ ಅಂಕಿ ಅಂಶ

ಬೆಂಗಳೂರಿನ ಕಚೇರಿಗಳಲ್ಲಿ ಭಾಷಾ ತಾರತಮ್ಯ ಇದೆಯಂತೆ

ಆರ್ ಬಿಐ ಗವರ್ನರ್

ಆರ್ ಬಿಐ ಗವರ್ನರ್

ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ರಘುರಾಮ್ ಗೋವಿಂದ್ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ್ ಆಗಿ ನೇಮಕವಾಗಿದ್ದಾರೆ.

ಆಲಿಯಾ ಭಟ್

ಆಲಿಯಾ ಭಟ್

ಮುಂಬೈನಲ್ಲಿ ನಡೆದಿರುವ ಇಂಡಿಯಾ ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ವೀಕ್ ಫ್ಯಾಷನ್ ಶೋ ವೇಳೆ ನಟಿ ಆಲಿಯಾ ಭಟ್PTI Photo by Mitesh Bhuvad

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+