ಸಪತ್ನೀಕರಾಗಿ ಬಾಗಿನ ಅರ್ಪಿಸುತ್ತಾರಾ ಸಿಎಂ ಸಿದ್ದು?
ಬೆಂಗಳೂರು,
ಜುಲೈ31: ಭರ್ಜರಿ ಮುಂಗಾರು ಋತುವಿನಲ್ಲಿ ಮಳೆ ವೈಭವ ಮರುಕಳಿಸಿದ್ದು, ಬಹುತೇಕ ನದಿಗಳು ಉಕ್ಕುಹರಿದಿವೆ. ಇದರಿಂದ ನಾಡಿನ ಜನ ಸಂಭ್ರಮಗೊಂಡಿದ್ದಾರೆ. ನಾಡಿನ ನೂತನ ದೊರೆ ಸಿದ್ದರಾಮಯ್ಯ ಅವರಿಗೆ ಮುಂಗಾರು ಭರ್ಜರಿ ಸ್ವಾಗತ ಕೋರಿದೆ. id="toptextpromo"> id='are-slot-1' class='oiad oi-axt oiadv'>ತನ್ನಿಮಿತ್ತ
ನಾಡಿನ ದೊರೆ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಯ ಹಾದಿಯಲ್ಲಿರುವ ಕನ್ನಂಬಾಡಿ ಅಣೆಕಟ್ಟೆಗೆ ಆಗಸ್ಟ್ 1 ರಂದು ಬಾಗಿನ ಅರ್ಪಿಸುವ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ, ಕುಟುಂಬ ವರ್ಗದೊಂದಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸುತ್ತಾರೋ ಅಥವಾ ಏಕಾಂಗಿಯಾಗಿ ಶಾಸ್ತ್ರ ಮುಗಿಸುತ್ತಾರೋ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.id='are-slot-2' class='oiad oi-axt oiadv'>

ಸತ್ಸಂಪ್ರದಾಯಕ್ಕೆ ಚ್ಯುತಿ ಬಾರದಿರಲಿ
ತುಂಬಿದ ನದಿಗಳಿಗೆ ಜನಪ್ರತಿನಿಧಿಗಳು ಬಾಗಿನ ಅರ್ಪಿಸುವ ಸಂಪ್ರದಾಯ ಅನೂಚವಾಗಿ ನಡೆದುಬಂದಿದೆ. ಆದ್ದರಿಂದ ಈ ಸತ್ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ದೊರೆ ಸಿದ್ದರಾಮಯ್ಯ ಅವರು ದಂಪತಿ ಸಮೇತ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿ ಎಂಬ ಪ್ರಾರ್ಥನೆ ಕೇಳಿಬರುತ್ತಿದೆ.

ಸಿದ್ದರಾಮಯ್ಯ ದೇವರು ದಿಂಡಿರಿಗೆ ಕೈಮುಗಿಯುವವರಲ್ಲ
ಆದರೆ ವಿಷಯ ಅದಲ್ಲ. ಮೊನ್ನೆ ತುಂಬಿದ (ವಿಧಾನ)ಸಭೆಯಲ್ಲಿ ಸ್ವಪಕ್ಷೀಯರು/ವಿಪಕ್ಷೀಯರು ಎನ್ನದೆ ಸಿದ್ದರಾಮಯ್ಯನವರ ಎಲ್ಲ ಶಾಸಕ ಮಿತ್ರರು ಹೇಳಿದ್ದು ಕೇಳಿಸಿಕೊಂಡರೆ ಸಿದ್ದರಾಮಯ್ಯನವರು ಸಪತ್ನೀಕರಾಗಿ ಕೆಆರ್ ಎಸ್ ಗೆ ಬಾಗಿನ ಅರ್ಪಿಸುವುದು ಕೈಗೂಡುವುದಿಲ್ಲ ಎನಿಸುತ್ತಿದೆ. ಜತೆಗೆ, ಸಿದ್ದರಾಮಯ್ಯ ತಾವು ದೇವರು ದಿಂಡಿರಿಗೆಲ್ಲಾ ಕೈಮುಗಿಯುವವರಲ್ಲ ಎಂದು ನಾಸ್ತಿಕವಾದವನ್ನು ನಂಬಿಕೊಂಡುಬಂದವರು.

ಪಾರ್ವತಮ್ಮನವರು ಪತಿ ಜತೆಗೂಡಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸುತ್ತಾರಾ?
ಏಕೆಂದರೆ ಸಿದ್ದರಾಮಯ್ಯ ಅವರ ಪತ್ನಿ ಮೇಡಂ ಪಾರ್ವತಿ ಅವರನ್ನು ಸಿದ್ದರಾಮಯ್ಯನವರ ಆಪ್ತ ಬಳಗವೇ ಕಳೆದ ಹತ್ತನ್ನೆರಡು ವರ್ಷಗಳಿಂದ ನೋಡಿಲ್ಲವಂತೆ. ಸಿದ್ದರಾಮಯ್ಯನವರ ಏರಿಳಿತದ ರಾಜಕೀಯಕ್ಕೆ ಆಕೆಯದು ದಿವ್ಯಮೌನವೇ ಉತ್ತರವಂತೆ. ಏನಿದ್ದರೂ ಊರಿನಲ್ಲಿ ಮನೆಯೊಳಗಷ್ಟೇ ಇವರ ಪಾತ್ರ. ಯಜಮಾನರು ಇತ್ತೀಚೆಗೆ ನಾಡಿನ ದೊರೆಯಾದಾಗಲೂ ಈಕೆ ಹೊಸಲು ದಾಟಿಬಂದವರಲ್ಲ. ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದವರಲ್ಲ. ದಂಪತಿಯ ಕಿರಿಯ ಪುತ್ರ ಯತೀಂದ್ರನೂ ಅಷ್ಟೇ. ತಾಯಿ ಹಾಕಿದ ಗೆರೆ ದಾಟಿದವರಲ್ಲ. ವೈದ್ಯರಾಗಿದ್ದುಕೊಂಡು ಜನ ಸೇವೆಯಲ್ಲಿ ಪರಮಾರ್ಥ ಕಾಣುತ್ತಿದ್ದಾರೆ.
ಇಂತಿಪ್ಪ ಪಾರ್ವತಮ್ಮನವರು ನಾಳೆ ಪತಿ ಜತೆಗೂಡಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಲು ಹೊರಬರುತ್ತಾರಾ? ಕಾದು ನೊಡಬೇಕು.

ಸಿದ್ದು ಕುಟುಂಬದ ಬಗ್ಗೆ ಹೇಳೋದೇನು?
ಈ ಮಧ್ಯೆ, ಸಿದ್ದರಾಮಯ್ಯನವರು ತಮ್ಮ ಕುಟುಂಬದ ಬಗ್ಗೆ ಏನು ಹೇಳಿದ್ದಾರೋ ಸ್ವಲ್ಪ ಕೇಳಿಸಿಕೊಳ್ಳಿ.
ಕುಟುಂಬಗಳ ವಿಘಟನೆ ಆಗುತ್ತಿರುವ ಕಾಲದಲ್ಲಿ ಇಂದಿನ ದಿನಮಾನದಲ್ಲಿ ನಮ್ಮದು ಅವಿಭಕ್ತ ಕುಟುಂಬ. ಅದಕ್ಕೆ ನಾನೇ ಕರ್ತಾ (ಯಜಮಾನ). ನಾವು ನಾಲ್ಕು ಮಂದಿ ಅಣ್ಣ ತಮ್ಮಂದಿರು. ಎಲ್ಲರೂ ಬೇರೆ ಬೇರೆ ವಾಸ ಮಾಡುತ್ತಿದ್ದೇವೆ. ಆದರೆ ಜಮೀನು ಮಾತ್ರ ಒಂದೇ ಇದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನನಗೆ ಪಾಲು ಬೇಡ ಅಂತ ಹೇಳಿದ್ದೇನೆ. ಆದರೂ ಆಗಾಗ ಅಕ್ಕಿ- ಬೇಳೆ ಕೊಡುತ್ತಾರೆ. ನನ್ನ ತಮ್ಮಂದಿರು ಬಹಳ ಒಳ್ಳೆಯವರು. ಅಡಚಣೆ ಮಾಡಲೊಲ್ಲರು. ಇಲ್ಲಿಗೆ ಬರೋದೆ ಇಲ್ಲ. ಇನ್ನೂ ಊರಲ್ಲಿ ಚೆಡ್ಡಿ ಹಾಕಿಕೊಂಡು ಕೆಲಸ ಮಾಡ್ತಾರೆ. ನಾನೇ ಊರಿಗೆ ಹೋಗಿ ಮಾತ್ನಾಡಿಸಿಕೊಂಡು ಬರುತ್ತೇನೆ.












Click it and Unblock the Notifications