ಶಾಲಾ ಬಸ್ ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ
ಜೈಪುರ,ಜುಲೈ 31: ಮಂಗಳವಾರ ಬೆಳಗ್ಗೆ 7 ಗಂಟೆಯಲ್ಲಿ ಶಾಲೆಗೆ ಹೊರಟಿದ್ದ ಮಕ್ಕಳು ಬಸ್ ಚಾಲಕನ ತಪ್ಪಿನಿಂದಾಗಿ ಭೀಕರ ರಸ್ತೆ ಅಪಘಾತದಿಂದ ಸಾವಿನ ಮನೆ ಸೇರಿದ್ದಾರೆ. ರಾಜಸ್ಥಾನದ ಹುನಮಾನಗಢ ಜಿಲ್ಲೆಯಲ್ಲಿ ಗೋಲುವಾಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.

ಶಾಲಾ ಬಸ್ ಡ್ರೈವರ್ ಮುಂದಿದ್ದ ವಾಹನವನ್ನು ಹಿಂದಿಕ್ಕುವ ದುಸ್ಸಾಹಕ್ಕೆ ಮುಂದಾದಾಗ ಈ ದುರ್ಘಟನೆ ನಡೆದಿದೆ. ಡ್ರೈವರ್ ನಿಯಂತ್ರಣ ತಪ್ಪಿದ ಬಸ್ ಎದುರಿಗೆ ಬಂದ ಟ್ರಕ್ಕಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಮೃತ ಮಕ್ಕಳು ಪಿಲಿಬಂಗಾದ ಸರಸ್ವತಿ ಬಾಲ ವಿದ್ಯಾ ಮಂದಿರಕ್ಕೆ ಸೇರಿದವರು. ಬಸ್ಸಿನಲ್ಲಿ 45 ಮಕ್ಕಳು ಇದ್ದರು.
8 ಮಕ್ಕಳು ಸ್ಥಳದಲ್ಲೇ ಅಸುನೀಗಿದ್ದಾರೆ. ಮೂವರು ಆಸ್ಪತ್ರೆಗೆ ದಾಖಲಿಸುವಾಗ ಅಸುನೀಗಿದ್ದಾರೆ. 20 ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಶಾಲಾ ಬಸ್ ಡ್ರೈವರ್ ಮತ್ತು ಟ್ರಕ್ಕಿನ ಡ್ರೈವರ್ ಅಪಘಾತವಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ.












Click it and Unblock the Notifications