ಮೀರತ್ : ಚಲಿಸುತ್ತಿರುವ ಕಾರಲ್ಲಿ ಸಾಮೂಹಿಕ ಅತ್ಯಾಚಾರ

ಈ ಘಟನೆ ಶನಿವಾರ ಸಂಜೆ 7 ಗಂಟೆಯ ನಂತರ ನಡೆದಿದೆ. ಶಾಸ್ತ್ರಿನಗರದ ವಾಸಿಯಾಗಿರು ಯುವತಿ ಮನೆತರಗತಿಗೆ ಹೋಗುತ್ತಿದ್ದಾಗ ಕಪ್ಪು ಬಣ್ಣದ ವಾಹನದಲ್ಲಿ ಬಂದ ದುರುಳರು ಆಕೆಯನ್ನು ಚಲಿಸುತ್ತಿರುವ ವಾಹನದಲ್ಲಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.
ನಂತರ ಆಕೆಯನ್ನು ಲಕ್ಷ್ಮಿ ವಿಹಾರದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಆಕೆಯನ್ನು ಪಿವಿಎಸ್ ಮಾಲ್ ಬಳಿ ಬಿಸಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದೆ, ಭಾನುವಾರ ಯುವತಿಯ ಮನೆಗೆ ನುಗ್ಗಿದ ನಾಲ್ವರು, ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದರೆ ಆಕೆಯನ್ನು ಮತ್ತು ಯುವತಿಯ ತಮ್ಮನನ್ನು ಕೊಲೆ ಮಾಡುವುದಾಗಿ ಬೆದರಿಸಿ ತೆರಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬೆದರಿಕೆಗೆ ಜಗ್ಗದ ಯುವತಿ ಪೊಲೀಸರಿಗೆ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ದೂರು ನೀಡಿದ್ದು, ಅತ್ಯಾಚಾರವೆಸಗಿದ ಇಬ್ಬರು ಯುವಕರಾದ ಅಮಿತ್ ಭದನಾ ಮತ್ತು ಸುಮಿತ್ ಗುರ್ಜೂರ್ ಎಂದು ಗುರುತಿಸಿದ್ದು, ಇನ್ನಿಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಇವರಲ್ಲಿ ಅಮಿತ್ ಬಿಎಸ್ ಪಿ ಪಕ್ಷದ ಸ್ಥಳೀಯ ನಾಯಕನಾಗಿದ್ದಾನೆ.
ಪ್ರಕರಣದ ತನಿಖೆ ನಡೆಸುತ್ತಿದ್ದು ಎಲ್ಲ ಅತ್ಯಾಚಾರಿಗಳನ್ನು ಸದ್ಯದಲ್ಲಿಯೇ ಬಂಧಿಸುವುದಾಗಿ ಬ್ರಹ್ಮಪುರಿಯ ಸರ್ಕಲ್ ಇನ್‌ಸ್ಪೆಕ್ಟರ್ ವಿಕಾಸ ಚಂದ್ ತ್ರಿಪಾಠಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಹುಜನ ಸಮಾಜವಾದಿ ಪಕ್ಷದ ಅಧಿನಾಯಕಿ ಮಾಯಾವತಿ ಈ ಘಟನೆ ಕುರಿತು ಏನು ಹೇಳುತ್ತಾರೆ? [ಚಲಿಸುತ್ತಿರುವ ವಾಹನದಲ್ಲಿ ನಡೆದ ಅತ್ಯಾಚಾರಗಳು]











Click it and Unblock the Notifications