ನೂತನ ಕಾಮಗಾರಿಗಳಿಗೆ ಬಿಎಂಟಿಸಿ ಚಾಲನೆ!

ramalinga reddy
ಬೆಂಗಳೂರು, ಜು.22 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಶೀಘ್ರದಲ್ಲೇ ಏಳು ನೂತನ ಬಸ್ ಡಿಪೋ ಮತ್ತು ಹನ್ನೆರಡು ಬಸ್ ನಿಲ್ದಾಣ ಕಾಮಗಾರಿಗಳನ್ನು ಪ್ರಾರಂಭಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಯಶವಂತಪುರ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ವಾಯು ವಜ್ರ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, 60 ಕೋಟಿ ವೆಚ್ಚದಲ್ಲಿ 12 ಬಸ್ ನಿಲ್ದಾಣ ಮತ್ತು ಏಳು ಬಸ್ ಡಿಪೋಗಳ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

ನೂತನ ಬಸ್ ಡಿಪೋಗಳನ್ನು ಕುರುಬರಹಳ್ಳಿ, ಮಂಡೂರು, ಸಾದರಮಂಗಳ, ನಾಗದಾಸನಹಳ್ಳಿ, ದೇವನಹಳ್ಳಿ, ಸಾತನೂರು, ಮತ್ತಹಳ್ಳಿ, ಸಾದೇನಹಳ್ಳಿ ಮತ್ತು ಅಂಜನಾಪುರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಖಾಸಗಿ ಸಹಭಾಗಿತ್ವದಲ್ಲಿ ಹೆಬ್ಬಾಳ, ಜಯನಗರ 4ನೇ ಹಂತ, ಯಲಹಂಕ (ಪುಟ್ಟೇನಹಳ್ಳಿ), ಎಲೆಕ್ಟ್ರಾನಿಕ್‌ಸಿಟಿ, ಚಿಕ್ಕಬೆಟ್ಟಹಳ್ಳಿ (ಎಂ.ಎಸ್.ಪಾಳ್ಯ) ಹಾಗೂ ಕತ್ತರಿಗುಪ್ಪೆಯಲ್ಲಿ ಟಿಟಿಎಂಸಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಬಸ್ ಖರೀದಿ : ಬಿಎಂಟಿಸಿ ಈ ವರ್ಷ ಹೊಸದಾಗಿ 1,139 ಬಸ್ ಗಳನ್ನು ಈ ವರ್ಷ ಖರೀದಿಸಲಿದೆ. ಸಂಸ್ಥೆಗೆ ಅಗತ್ಯವಿರುವ ವಿವಿಧ ವರ್ಗದ 4,000 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಆಲೋಚಿಸಲಾಗಿದೆ. 1,500 ಚಾಲಕ (ದರ್ಜೆ-3) ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ವಾಯುವಜ್ರ ಸೇವೆ : ಯಶವಂತಪುರದಿಂದ ಬಿಐಎಎಲ್ ವರೆಗಿನ ವಾಯುವಜ್ರ ಸೇವೆಯ ಬಗ್ಗೆ ಮಾಹಿತಿ ನೀಡಿದ ಸಚಿವರು, ಒಟ್ಟು 43.4 ಕಿ.ಮೀ ಉದ್ದದ ಮಾರ್ಗಕ್ಕೆ 200 ರೂ. ಪ್ರಯಾಣ ದರ ನಿಗದಿ ಪಡಿಸಲಾಗಿದೆ ಎಂದರು.

ವಾಯು ವಜ್ರ ಸೇವೆ ಬ್ರಿಗೇಡ್ ಗೇಟ್ ವೇ ಯಿಂದ ರಾಜಾಜಿನಗರ ಮೊದಲ ಹಂತ, ಇಸ್ಕಾನ್ ದೇವಾಲಯ, ಯಶವಂತಪುರ ಟಿಟಿಎಂಸಿ, ಎಂ.ಎಸ್.ರಾಮಯ್ಯ ಆಸ್ಪತ್ರೆ, ಚಿಕ್ಕಮಾರನಹಳ್ಳಿ, ಬಿಇಎಲ್ ವೃತ್ತ, ವಿದ್ಯಾರಣ್ಯಪುರ, ಜೆಲ್ಲಿ ಮಿಷನ್, ಮದರ್ ಡೇರಿ, ಯಲಹಂಕ ಉಪನಗರ ಮತ್ತು ಕೋಗಿಲು ಅಡ್ಡರಸ್ತೆ ಮಾರ್ಗವಾಗಿ ವಾಯುವಜ್ರ ಬಸ್‌ಗಳು ವಿಮಾನ ನಿಲ್ದಾಣ ತಲುಪಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+