ಆಧಾರ್ ನೋಂದಣಿ: ಲಂಚಕ್ಕೆ ಕೈಯೊಡ್ಡಿದ ಏಜೆನ್ಸಿ

ಹೀಗಿರುವಾಗ ನೋಂದಣಿಯ ಹೊನೆಹೊತ್ತ ಸಂಸ್ಥೆಯೊಂದು ಪರಿಸ್ಥಿತಿಯ ದುರ್ಲಾಭ ಪಡೆಯಲು ಜನರಿಂದ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದು ರಾಜಧಾನಿಯಲ್ಲೇ ನಡೆದಿರುವುದು ದುರದೃಷ್ಟಕರ.
ಈಜಿಪುರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. Unique Identification Authority of India (UIDAI)ಯಿಂದ ನೇಮಿಸಲ್ಪಟ್ಟ ಏಜೆನ್ಸಿಯೊಂದು ಆಧಾರ್ ನೋಂದಣಿ ಅರ್ಜಿಗಾಗಿ ತಲಾ 30 ರೂಪಾಯಿ ವಸೂಲಿ ಮಾಡುತ್ತಿದೆ.
ಆಧಾರ್ ನೋಂದಣಿ ಕಡ್ಡಾಯವಾಗಿರುವಾಗ/ ನಮ್ಮ ಹಕ್ಕು ಆಗಿರುವಾಗ ನಾವೇಕೆ ದುಡ್ಡು ಕೊಟ್ಟು ನೋಂದಣಿ ಮಾಡಿಸಿಕೊಳ್ಳಬೇಕು. Shame on them ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಹೌದು ಈ ಕೆಟ್ಟ ಚಾಳಿ ಯಾವಾಗ ಕೊನೆಗಾಣುತ್ತದೋ, ಎಲ್ಲಿ ನೋಡಿದರೂ ದುಡ್ಡಿಗಾಗಿ ಕೈಯೊಡ್ಡುವ ಭ್ರಷ್ಟ ಮಂದಿ. ಇವರಿಗೆ ಧಿಕ್ಕಾರವಿರಲಿ!
ಒನ್ಇಂಡಿಯಾ ಓದುಗರಾದ ಸತೀಶ್ ರೆಡ್ಡಿ ಅವರ ಪ್ರತಿಕ್ರಿಯೆ ಹೀಗಿದೆ: ನಮ್ಮೂರಲ್ಲಿ (ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ) ration ಕಾರ್ಡ್ ಫೋಟೋ ತೆಗಿಯೋದಕ್ಕೆ 50rs ತಗೊಂಥ ಇದ್ದಾರೆ. 50rs ಕೊಡಲಿಲ್ಲ ಅಂದ್ರೆ ration ಕಾರ್ಡ್ ಇಲ್ಲ ಹೋಗಿ ಅಂತಾರೆ ಅದಕ್ಕೆ ಎಲ್ಲರು ಬಡವರು ಕೂಲಿ ಮಾಡಿ 50rs ಕೊಡ್ತಾ ಇದಾರೆ. ದಯವಿಟ್ಟು ಅವರಿಗೆಲ್ಲ ಪಾಠ ಕಲಿಸಿ.
ಒಬ್ಬರಿಗೆ 50rs. ಒಂದು ಸಂಸಾರ ದಲ್ಲಿ 3 ಜನ ಇದ್ದರೆ 150rs (3*50=150). ಇದಕ್ಕೆ ಉತ್ತರ ಕೊಡುವವರು ಯಾರು?












Click it and Unblock the Notifications