ಧಾರವಾಡ, ಗುಲ್ಬರ್ಗಾ ನ್ಯಾಯಾರ್ಥಿಗಳಿಗೆ ಶುಭ ಸುದ್ದಿ

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಕೆ.ಬಿ. ಕೋಳಿವಾಡ ಪ್ರಶ್ನೆಗೆ ಉತ್ತರಿಸಿದ ಅವರು, 2008ರ ಜು.7ರಿಂದ ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠಗಳು ಕಾರ್ಯನಿರ್ವಹಿಸುತ್ತಿವೆ. 2010ರಲ್ಲಿ ಈ ಪೀಠಗಳನ್ನು ಖಾಯಂ ಪೀಠಗಳಾಗಿ ಪರಿವರ್ತಿಸಲು ರಾಜ್ಯ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದರು.
2013 ಜೂ.27ರಂದು ಕೇಂದ್ರ ಸರಕಾರದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಈ ಎರಡೂ ಸಂಚಾರಿ ಪೀಠಗಳನ್ನು ಖಾಯಂ ನ್ಯಾಯಪೀಠಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಬಗ್ಗೆ ತಿಳಿಸಿದ್ದಾರೆ. ಮೇಲ್ಕಂಡ ನ್ಯಾಯಾಲಯಗಳ ಖಾಯಂ ಪೀಠ ಸ್ಥಾಪನೆಗೆ ಪೂರ್ವಭಾವಿಯಾಗಿ ಅಗತ್ಯವಿರುವ ನ್ಯಾಯಾಧೀಶರ ನೇಮಕಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸದನಕ್ಕೆ ಮಾಹಿತಿ ನೀಡಿದರು.
2008ರಲ್ಲಿ ಧಾರವಾಡ ಮತ್ತು ಗುಲ್ಬರ್ಗಗಳಲ್ಲಿ ಸಂಚಾರಿ ಪೀಠಗಳನ್ನು ಆರಂಭಿಸಲಾಗಿತ್ತು. ಉತ್ತರ ಕರ್ನಾಟಕದ ಭಾಗದ ಜನರು ಬೆಂಗಳೂರಿಗೆ ವಿಚಾರಣೆಗಾಗಿ ಆಗಮಿಸುವುದು ಕಷ್ಟವಾಗಲಿದೆ ಎಂಬ ಕಾರಣಕ್ಕಾಗಿ ಸಂಚಾರಿ ಪೀಠಗಳನ್ನು ರಚಿಸಲಾಗಿತ್ತು.
ಸದ್ಯ ಧಾರವಾಡ ಸಂಚಾರಿ ಪೀಠದಲ್ಲಿ 6 ರಿಂದ 7 ಜನ ನ್ಯಾಯಮೂರ್ತಿಗಳು ಮತ್ತು ಗುಲ್ಬರ್ಗ ಪೀಠದಲ್ಲಿ 3-4 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಸಂಚಾರಿ ಹೈಕೋರ್ಟ್ ಪೀಠಗಳನ್ನು ಕಾಯಂ ಮಾಡಬೇಕು ಎಂಬ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಒಪ್ಪಿಗೆ ಮುದ್ರೆ ಹಾಕಿದೆ.
ಧಾರವಾಡದ ಸಂಚಾರಿ ಪೀಠ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಜ್ಯಗಳ ವಿಚಾರಣೆ ನಡೆಸುತ್ತಿದೆ. ಬಿಜಾಪುರ, ಬೀದರ್, ಗುಲ್ಪರ್ಗ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಜ್ಯಗಳ ವಿಚಾರಣೆಯನ್ನು ಗುಲ್ಪರ್ಗ ಪೀಠ ನಡೆಸುತ್ತಿದೆ. ಈ ಸಂಚಾರಿ ಪೀಠಗಳು ಕಾಯಂ ಆಗಿರುವುದರಿಂದ ಉತ್ತರ ಕರ್ನಾಟಕ ಭಾಗದ ಜನರ ಕನಸು ಈಡೇರಿದೆ.












Click it and Unblock the Notifications