ಪ್ರವಾಸ: ಕೋಲ್ಕೊತ್ತಾ ದುಬಾರಿ; ಬೆಂಗಳೂರಿಗೆ 5ನೇ ಸ್ಥಾನ

ವಾಣಿಜ್ಯ ನಗರಿ ಮುಂಬೈ ಈಗಲೂ ದುಬಾರಿಯಾಗಿಯೇ ಇದೆ. ಆದರೆ ಎರಡನೆಯ ಸ್ಥಾನದಲ್ಲಿದೆ. ಆನಂತರ ದೆಹಲಿಯದ್ದಾಗಿದೆ. TripAdvisor ಸಮೀಕ್ಷೆ ಪ್ರಕಾರ ಕೋಲ್ಕೊತ್ತಾ, ಮುಂಬೈ, ದೆಹಲಿ, ಹೈದರಾಬಾದ್ ನಂತರ ಬೆಂಗಳೂರು 5ನೆಯ ದುಬಾರಿ ನಗರವೆನಿಸಿದೆ. ಮುಂದೆ ಚೆನ್ನೈ, ಪೂನಾ ನಗರಗಳಿವೆ.
ಈ ಮಹಾನಗರಗಳಲ್ಲಿ ಇಬ್ಬರು ವ್ಯಕ್ತಿಗಳು ಪ್ರವಾಸಿಗರಾಗಿ ಉಳಿದುಕೊಳ್ಳಲು ತಗಲುವ ವೆಚ್ಚಗಳನ್ನು ತಾಳೆ ಹಾಕಿ ನೋಡಲಾಗಿದೆ ಈ ವ್ಯತ್ಯಾಸ ಕಂಡುಬಂದಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಸರಿ ಹಾಗಾದರೆ ಕಡಿಮೆ ವೆಚ್ಚದ ಪ್ರವಾಸಿಗರಿಗೆ ಹಿತಕರವಾಗಿರುವ ನಗರ ಯಾವುದಪ್ಪಾ ಎಂದು ಕೇಳಿದರೆ ಉತ್ತರವಾಗಿ ಅಹಮದಾಬಾದ್ ನಗರ ಪ್ರತ್ಯಕ್ಷವಾಗುತ್ತದೆ. ನೋಡಿ, ಕೋಲ್ಕೊತ್ತಾ ಒಂದು ರಾತ್ರಿ ಮಟ್ಟಿಗೆ ಚತುರ್ತಾರಾ ಹೋಟೆಲಿನಲ್ಲಿ ಇಬ್ಬರು ಉಳಿದುಕೊಳ್ಳಬೇಕು ಅಂದರೆ ಅವರಿಗೆ 10,115 ವೆಚ್ಚವಾಗುತ್ತದೆ. ಅದೇ ಅಹಮದಾಬಾದಿನಲ್ಲಿ 6,406 ರೂ ಸಾಕಾದೀತು.
ಮುಂಬೈನಲ್ಲಿ? 10,074 ರೂಪಾಯಿ. ದೆಹಲಿಯಲ್ಲಿ ? 9,728 ರೂ. ಕಳೆದ ವರ್ಷ ಚೆನ್ನೈ ಸಹ ಸ್ವಲ್ಪ ಮಟ್ಟಿಗೆ ದುಬಾರಿಯಾಗಿಯೇ (12,530 ರೂ.) ಇತ್ತು. ಆದರೆ ಈಗ 8,122 ರೂ. ಗೆ ಕುಸಿದಿದೆ!












Click it and Unblock the Notifications