ಮಹಾತ್ಮಾ ಗಾಂಧಿ ನನ್ನ ಸ್ಫೂರ್ತಿ: ಮಲಾಲಾ

ವಿಶ್ವಸಂಸ್ಥೆ,ಜು.13: ಮಹಾತ್ಮಾಗಾಂಧಿ ಅವರ ಅಹಿಂಸಾ ಮಾರ್ಗ ನನಗೆ ಸ್ಫೂರ್ತಿ. ಅದು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದೆ ಎಂದು ಪಾಕಿಸ್ತಾನದ ಸ್ವಾತ್ ನಲ್ಲಿ ಶಾಲೆಗೆ ಹೋಗುತ್ತಿದ್ದ ಸಂದರ್ಭ ತಾಲಿಬಾನ್ ಮೂಲಭೂತವಾದಿಗಳ ದಾಳಿಗೆ ಸಿಕ್ಕಿ, ಬದುಕುಳಿದ 16 ವರ್ಷದ ಬಾಲೆ ಮಲಾಲಾ ಯೂಸಾಫ್ ಜೈ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದಳು.

ಜಗತ್ತಿಗೆ ಅಹಿಂಸೆ, ಸಹನೆಗಳನ್ನು ಸಾರಿದ ಗಾಂಧೀಜಿ ಮತ್ತಿತರ ಮಹಾಪುರುಷರನ್ನು ನೆನೆದ ಮಲಾಲಾ, ನನಗೆ ಯಾರ ವಿರುದ್ಧವೂ ಕೋಪವಿಲ್ಲ. ತಾಲಿಬಾನ್ ಉಗ್ರರನ್ನಾಗಲಿ ಅಥವಾ ಇನ್ನಾವುದೇ ಉಗ್ರರ ಸಂಘಟನೆಗಳನ್ನು ಛೇಡಿಸಲು ನಾನಿಲ್ಲಿ ಬಂದಿಲ್ಲ. ನಾನಿಲ್ಲಿ ಮಾತನಾಡುತ್ತಿರುವುದು ವಿಶ್ವದ ಪ್ರತಿಯೊಂದು ಮಗುವಿನ ಶಿಕ್ಷಣದ ಬಗ್ಗೆ ಎಂದು ವಿಶ್ವಸಂಸ್ಥೆಯ ಯುವ ಸಮಾವೇಶದಲ್ಲಿ ಹೇಳಿದ್ದಾಳೆ.

Mahatma Gandhi inspires me: Malala Yousafzai

ನನ್ನ ಮೇಲೆ ಗುಂಡಿನ ದಾಳಿ ನಡೆಸಿದ ತಾಲಿಬಾನ್ ಉಗ್ರರನ್ನು ನಾನು ದ್ವೇಷಿಸುವುದಿಲ್ಲ. ನನ್ನ ಕೈಗೆ ಬಂದೂಕು ನೀಡಿ ಉಗ್ರನ ಮುಂದೆ ನಿಲ್ಲಿಸಿದ್ದರೂ ನಾನು ಅವರನ್ನು ಶೂಟ್ ಮಾಡಲಾರೆ. ನನ್ನ ಉದ್ದೇಶ ಇಷ್ಟೆ ಪ್ರತಿಯೊಬ್ಬ ಉಗ್ರ, ತೀವ್ರವಾದಿಯ ಮಗ, ಮಗಳಿಗೆ ಶಿಕ್ಷಣ ದೊರೆಯಬೇಕು. ಗಾಂಧೀಜಿ, ಬಾದಷಾ ಖಾನ್, ಮದರ್ ತೆರೇಸಾರಂಥ ಮಹಾಪುರುಷರಿಂದ ನಾನು ಕಂಡುಕೊಂಡಿರುವ ಅಹಿಂಸಾ ವಾದ ಮೂಲತತ್ವವೂ ಇದೆ.

ಉಗ್ರರ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಬಾಯಿಮುಚ್ಚಿಕೊಂಡು ಸಹಿಸುವುದೂ ಇಲ್ಲ. ನಮ್ಮ ಪುಸ್ತಕ, ಲೇಖನಗಳನ್ನು ಕೈಗೆತ್ತಿಕೊಳ್ಳೋಣ. ಅದೇ ನಮ್ಮ ಪ್ರಬಲ ಆಯುಧ ಎಂದಿದ್ದಾಳೆ. ಒಬ್ಬ ಶಿಕ್ಷಕ/ಶಿಕ್ಷಕಿ, ಒಂದು ಪುಸ್ತಕ, ಒಂದು ಲೇಖನಿ ವಿಶ್ವದ ಇತಿಹಾಸವನ್ನೇ ಬದಲಿಸಬಲ್ಲವು ಎಂದು ಮಲಾಲಾ ಹೇಳಿದ್ದಾಳೆ.

ಮಲಾಲಾ ಡೇ : ವಿಶ್ವದ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಯುವ ಜನರ ಜೊತೆ ನಿನ್ನೆ ಇಡೀ ಬಿಡುವಿರದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದ ಮಲಾಲಾಳ 16 ನೇ ಹುಟ್ಟುಹಬ್ಬವನ್ನು ವಿಶ್ವಸಂಸ್ಥೆ ಆತ್ಮೀಯವಾಗಿ ಆಚರಿಸಿತು.

ಮಲಾಲಾ ಜನ್ಮ ದಿನವನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ಕಿಮೂನ್ ಮಲಾಲಾ ಡೇ ಎಂದು ಕರೆದು ಅವಳ ದಿಟ್ಟತನವನ್ನು ಪ್ರಶಂಸಿಸಿದರು. ಅವರೇ ಖುದ್ದಾಗಿ ಸಭೆಗೆ ಮಲಾಲಾಳನ್ನು ಆಹ್ವಾನಿಸಿದರು. ಮಲಾಲಾ ತನ್ನ ಹುಟ್ಟುಹಬ್ಬವನ್ನು ಈ ಪ್ರಪಂಚದ ಜೊತೆ ಆಚರಿಸಿಕೊಳ್ಳುತ್ತಿದ್ದಾಳೆ.

ವಿಶ್ವದ ಮಿಲಿಯನ್‌ಗಟ್ಟಲೇ ಜನರ ಬೆಂಬಲ ಅವಳಿಗೆ ಸಿಕ್ಕಿದೆ ಎಂದರು ಬಾನ್‌ಕಿಮೂನ್. ಯುನೈಟೆಡ್ ಕಿಂಗ್‌ಡಮ್ ಮಾಜಿ ಪ್ರಧಾನಿ ಗೋರ್ಡಾನ್ ಬ್ರೌನ್, ವುಕ್ ಜೆರ್ಮಿಕ್, ಅಹ್ಮದ್ ಅಲ್‌ಹೆಂಡಾವಿ ಮುಂತಾದ ವಿಶ್ವನಾಯಕರು ಸಭೆಯಲ್ಲಿದ್ದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಯುವ ಸದಸ್ಯರು ಹಾಜರಿದ್ದರು.

2012ರ ಅಕ್ಟೋಬರ್ 9ರಂದು ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಶಾಲೆಗೆ ಹೋಗುತ್ತಿದ್ದ ಮಲಾಲಾಳ ಮೇಲೆ ಮೃಗೀಯ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು ಅವಳ ತಲೆಗೆ ಗುಂಡು ಹೊಡೆದಿದ್ದರು. ಇದನ್ನು ನೆನಪಿಸಿಕೊಂಡ ಮಲಾಲಾ ಉಗ್ರರು ನನ್ನ ಮೇಲೆ ಹಾರಿಸಿದ ಗುಂಡುಗಳು ನನ್ನಲ್ಲಿದ್ದ ದೌರ್ಬಲ್ಯ, ಭಯ ಹಾಗೂ ನಿರಾಸೆಗಳನ್ನು ಕೊಂದು ಹಾಕಿವೆ ಎಂದು ಹೇಳುವ ಮೂಲಕ ತನ್ನ ದೃಢತೆಯನ್ನು ಪ್ರದರ್ಶಿಸಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+