ಕಳುವಾದ ಜೈನ ವಿಗ್ರಹಗಳು ಕೊಹಿನೂರಿಗಿಂತ ಅಮೂಲ್ಯ

ಕಳೆದ ಶುಕ್ರವಾರ 10ನೇ ಶತಮಾನದ ಇತಿಹಾಸ ಪ್ರಸಿದ್ಧ ಬಸದಿಯ ಸಿದ್ಧಾಂತ ದರ್ಶನ ಮಂದಿರದಲ್ಲಿ ಕೋಟ್ಯಂತರ ರೂ. ಮೌಲ್ಯದ ಅಪೂರ್ವ ವಿಗ್ರಹಗಳನ್ನು ಕನ್ನ ಹಾಕಿ ಕಳುವು ಮಾಡಿರುವುದು ಶನಿವಾರ ಮುಂಜಾನೆ ಬೆಳಕಿಗೆ ಬಂದಿತ್ತು.
ಮಂದಿರದ ಬಲ ಬದಿಯ ಕಿಟಿಕಿಯ ಹೊರಭಾಗದ ಗ್ರಿಲ್‌ನ ಸ್ವಲ್ಪ ಭಾಗವನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಒಬ್ಬ ವ್ಯಕ್ತಿ ಸುಲಭವಾಗಿ ಒಳನುಗ್ಗಿ ಬಳಿಕ ಸಿಗುವ ಇನ್ನೊಂದು ಕಿಟಿಕಿಯ ಮೇಲ್ಭಾಗದ ಕಿಂಡಿಯ ಗ್ರಿಲ್ಸ್ ಅನ್ನು ಪೂರ್ಣವಾಗಿ ಕತ್ತರಿಸಿ ಒಳಗೆ ಧುಮಿಕಿದ ಕಳ್ಳ ನೇರವಾಗಿ ಮೂರ್ತಿಗಳನ್ನಿಟ್ಟಿರುವ ಮಂದಿರದ ಕಬ್ಬಿಣದ ಶಟರ್ ಅನ್ನು ಗ್ಯಾಸ್ ಕಟ್ಟರಿನಿಂದ ಕತ್ತರಿಸಿ ಸುಮಾರು ನಾಲ್ಕು ಚದರಡಿಯ ಅವಕಾಶ ಮಾಡಿಕೊಂಡು ಒಳಗಿನ ದಪ್ಪಗಿನ ಗಾಜನ್ನು ಒಡೆದು ಒಳ ಪ್ರವೇಶಿಸಿ ಕಳ್ಳತನ ಮಾಡಲಾಗಿದೆ.
ಒಳ ನುಗ್ಗಿದವನು ಒಬ್ಬನೇ ವ್ಯಕ್ತಿಯಾಗಿದ್ದು ಆತ ಒಳಗಿದ್ದ 8 ಸಿಸಿಟಿವಿ ಗಳ ಪೈಕಿ ಒಂದರಲ್ಲಿ ಆತನ ಚಹರೆ ಸ್ವಲ್ಪ ಮಟ್ಟಿಗೆ ಮಾತ್ರ ಗೋಚರವಾಗಿದೆ. ಮುಸುಕುಧಾರಿ ದಢೂತಿ ವ್ಯಕ್ತಿ ಕೆಲವು ನಿಮಿಷಗಳ ಮಟ್ಟಿಗೆ ಚಾಲೂ ಇದ್ದ ಸಿಸಿ ಕ್ಯಾಮರಾ ತೋರಿಸಿದೆ. ಒಂದೊಂದೇ CCTV ಕ್ಯಾಮರಾಗಳ ಸಂಪರ್ಕ ತುಂಡರಿಸಿದ್ದು ಕೊನೆಯ ಕ್ಯಾಮರಾದಲ್ಲಿ ಒಂದಷ್ಟು ವಿವರಗಳು ದಾಖಲಾಗಿವೆ.
ಕಳುವಾಗಿರುವ 15 ಮೂರ್ತಿಗಳು ಇಂತಿವೆ:
1. ಚಿನ್ನದ ಚಂದ್ರನಾಥ (ಮುಕ್ಕಾಲು ಅಡಿ), 2. ಚಿನ್ನದ ಪಂಚ ಪರಮೇಷ್ಟಿ (ಮುಕ್ಕಾಲು ಅಡಿ), 3. ಚಿನ್ನದ ಪಾರ್ಶ್ವನಾಥ (5 ಇಂಚು), 4. ಪಚ್ಚೆ ಕಲ್ಲಿನ ಪಾರ್ಶ್ವನಾಥ (ಒಂದು ಇಂಚು) 5. ಗಜ ಮುತ್ತಿನ ಚಂದ್ರಪ್ರಭ , 6. ಚಿನ್ನದ ಉಂಗುರದಲ್ಲಿ ಸಣ್ಣ ಮಹಾವೀರ, 7. ಮಾಣಿಕ್ಯ ವಾಸು ಪೂಜ್ಯ, 8-9-10. ನೀಲ ಕಲ್ಲಿನ 3 ಮೂರ್ತಿಗಳು (ಅರಿಹಂತ, ಮುನಿಸುವ್ರತ ಹಾಗೂ ನೇಮಿನಾಥ), 11. ಸ್ಪಟಿಕ ರತ್ನದ ಅರ್ಹನಾಥ ಸ್ವಾಮಿ, 12. ಚಿನ್ನದ ಮಂಟಪದ ಮುತ್ತಿನ ಬಾಹುಬಲಿ, 13. ನೀಲ ಕಲ್ಲಿನ ಮಲ್ಲಿನಾಥ ಸ್ವಾಮಿ, 14. ಸ್ಪಟಿಕದ ಮುನಿಸುವ್ರತ ಸ್ವಾಮಿ ಹಾಗೂ 15. ವಜ್ರದ ಚಂದ್ರಪ್ರಭ (ಮೂರುವರೆ ಇಂಚು).












Click it and Unblock the Notifications