ಭಾಜಪ ಅಂದ್ರೆ ಬೆಸ್ಟ್ ಜೋಕರ್ಸ್ ಪಾರ್ಟಿ: ಮೇಯರ್ ಜಪ

raipur-mayor-facebook-cartoon-bjp-as-best-jokers-party
ರಾಯ್ಪುರ, ಜು 8: ಛತ್ತೀಸ್ ಗಢದ ರಾಜಧಾನಿ ರಾಯ್ಪುರದ ಪ್ರಥಮ ಪ್ರಜೆ ಅಂದರೆ ಮೇಯರ್ ಭಾರತೀಯ ಜನತಾ ಪಕ್ಷದ ಹಾಲಿ ಅತ್ಯುನ್ನತ ತ್ರಿಮೂರ್ತಿಗಳ ಬಗ್ಗೆ ಅವಹೇಳನಕಾರಿ ವ್ಯಂಗ್ಯಚಿತ್ರ ಗೀಚಿದ್ದಾರೆ. ಮತ್ತು ಅದಕ್ಕೆ ಕೊಟ್ಟಿರುವ ಒಕ್ಕಣೆಯಲ್ಲಿ ಮೋದಿ, ಅಡ್ವಾಣಿ ಮತ್ತು ರಾಜನಾಥ್ ಸಿಂಗ್ ಅವರನ್ನು ಕತ್ತೆಗಳಿಗೆ ಹೋಲಿಸಿದ್ದಾರೆ. ಆದರೆ ಬಿಜೆಪಿ ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಗುಡುಗಿದೆ.

ರಾಯ್ಪುರದ ಕಾಂಗ್ರೆಸ್ ಮೇಯರ್ ಕಿರಣ್ಮಯೀ ನಾಯಕ್ ತಮ್ಮ ಫೇಸ್ ಬುಕ್ ನಲ್ಲಿ ಈ ಅವಹೇಳನಕಾರಿ ವ್ಯಂಗ್ಯಚಿತ್ರವನ್ನು ಛಾಪಿಸಿದ್ದಾರೆ. ಇದರ ವಿರುದ್ಧ ಭಾನುವಾರವೇ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ವ್ಯಕ್ತಪಡಿಸಿ, ಪೋಸ್ಟ್ ವಾಪಸ್ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರೂ ಅದಿನ್ನೂ ಫೇಸ್ ಬುಕ್ ವಾಲ್ ನಲ್ಲಿ ಕಂಡುಬರುತ್ತಿದೆ.

ಕಾಂಗ್ರೆಸ್ ಮೇಯರ್ ಕಿರಣ್ಮಯೀ ನಾಯಕ್ ಅವರು ತಕ್ಷಣ ಕ್ಷಮಾಪಣೆ ಕೇಳಬೇಕು. ವ್ಯಂಗ್ಯಚಿತ್ರವನ್ನು ವಾಪಸ್ ತೆಗೆಯಬೇಕು. ಇಲ್ಲವಾದಲ್ಲಿ ಆಕೆಯ ವಿರುದ್ಧ ಕಾನೂನುಕ್ರಮ ಜರುಗಿಸುವುದಾಗಿ ಬಿಜೆಪಿ ವಕ್ತಾರ ಶಿವರತ್ನ ಶರ್ಮಾ ಎಚ್ಚರಿಸಿದ್ದಾರೆ.

ಇತ್ತೀಚೆಗೆ ಮೋದಿ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ಅಡ್ವಾಣಿ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಒಳಜಗಳಕ್ಕೆ ಕಾರಣವಾದ ಘಟನೆಯನ್ನು ಉಲ್ಲೇಖಿಸಿ ಅವಹೇಳನಕಾರಿಯಾಗಿ ಪದ್ಯವನ್ನೂ ರಚಿಸಿದ್ದಾರೆ. ಇದರಲ್ಲಿ ಆರ್ ಎಸ್ಎಸ್ ನಾಯಕ ಮೋಹನ್ ಭಾಗವತ್ ಅವರ ಚಿತ್ರವನ್ನೂ ಬಿಡಿಸಿದ್ದಾರೆ. ಇದರಲ್ಲಿ ಕತ್ತೆಯ ಚಿತ್ರಣವೂ ಇದೆ. ಕಾರ್ಟೂನಿನಲ್ಲಿ Best Jokers Party ಎಂಬ ಬ್ಯಾನರ್ ಸಹ ರಾರಾಜಿಸುತ್ತಿದೆ.

ಕಿರಣ್ಮಯೀ ರಚಿಸಿರುವ ಪದ್ಯ ಹೀಗಿದೆ:
Gadhe par gadhe lade, karan chale shikaar.
Kahet kavi Sumer Bhai, ek anaar sau bimaar"
(Donkeys go for a hunt, riding upon donkeys.
Where hundreds grapple for one fruit).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+