ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಸೀಟು ಸಿಕ್ಕರೆ, ಕಾಮೆಡ್-ಕೆ ಶುಲ್ಕ ವಾಪಸ್

|
Google Oneindia Kannada News

rv deshpande
ಬೆಂಗಳೂರು, ಜು.4 : ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳಿಗೆ ಮೊದಲು ಕೌನ್ಸೆಲಿಂಗ್ ಆರಂಭವಾಗಿದ್ದರಿಂದ ಉಂಟಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಪೋಷಕರಿಗೆ ಶುಲ್ಕ ವಾಪಸ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುರುವಾರ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ ಪಾಟೀಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕೌನ್ಸೆಲಿಂಗ್ ಕುರಿತು ಉಂಟಾಗಿದ್ದ ಎಲ್ಲಾ ಗೊಂದಲಗಳನ್ನು ಬಗೆಹರಿಸಿದರು.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರ್.ವಿ.ದೇಶಪಾಂಡೆ, ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಸಿಇಟಿ ಕೌನ್ಸೆಲಿಂಗ್‌ಗಿಂತ ಮೊದಲು, ಕಾಮೆಡ್ -ಕೆ ಕೌನ್ಸಿಲಿಂಗ್ ಆರಂಭವಾಗಿದೆ.

ಮೊದಲು ನಡೆದ ಕಾಮೆಡ್‌-ಕೆ ಕೌನ್ಸೆಲಿಂಗ್‌ನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು, ಸಿಇಟಿ ಕೌನ್ಸೆಲಿಂಗ್‌ನಲ್ಲೂ ಸೀಟು ಪಡೆದರೆ ಕಾಮೆಡ್‌-ಕೆ ಸೀಟು ಪಡೆವಾಗ ಪಾವತಿಸಿದ್ದ ಸಂಪೂರ್ಣ ಶುಲ್ಕವನ್ನು ವಾಪಸ್‌ ಕೊಡಿಸುವುದಾಗಿ ಭರವಸೆ ನೀಡಿದರು.

ಕಾಮೆಡ್-ಕೆ ಜೊತೆ ಈ ಕುರಿತು ಮಾತುಕತೆ ನಡೆಸಲಾಗಿದ್ದು, ಒಂದು ವೇಳೆ ಸಿಇಟಿಯಲ್ಲಿ ಸೀಟು ಪಡೆದ ಯಾವುದೇ ವಿದ್ಯಾರ್ಥಿ ಕಾಮೆಡ್‌-ಕೆ ಸೀಟನ್ನು ವಾಪಸ್‌ ಮಾಡಿದರೆ, ಪೂರ್ಣ ಪ್ರಮಾಣದ ಶುಲ್ಕವನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ ಎಂದರು.

ಎಷ್ಟು ಸೀಟು ಲಭ್ಯವಿದೆ : ಈ ಬಾರಿ ಕಾಮೆಡ್-ಕೆಯಲ್ಲಿ 683 ವೈದ್ಯಕೀಯ ಸೀಟುಗಳು ಲಭ್ಯವಿವೆ. ಅವುಗಳಲ್ಲಿ 348 ಸೀಟುಗಳು ಭರ್ತಿಯಾಗಿವೆ. ಇವರಲ್ಲಿ ಕೇವಲ 21 ಜನರು ಕರ್ನಾಟಕದವರು.

ದಂತ ವೈದ್ಯಕೀಯದಲ್ಲಿ 744 ಸೀಟುಗಳಲ್ಲಿ ಕೇವಲ 64 ಸೀಟು ಭರ್ತಿಯಾಗಿವೆ. ಇದರಲ್ಲಿ ಇಬ್ಬರು ಮಾತ್ರ ರಾಜ್ಯದ ವಿದ್ಯಾರ್ಥಿಗಳಾಗಿದ್ದಾರೆ. ಕಾಮೆಡ್‌-ಕೆ ಸೀಟು ಪಡೆದಿರುವವರಿಗೆ ಜು.13ರವರೆಗೆ ಸೀಟು ಹಿಂತಿರುಗಿಸಲು ಕಾಲಾವಕಾಶ ಇದೆ.

ಅಷ್ಟರೊಳಗೆ ಸಿಇಟಿ ಕೌನ್ಸೆಲಿಂಗ್ ನಡೆದು, ಸೀಟು ಲಭ್ಯತೆಯ ಖಾತ್ರಿ ದೊರೆಯೆಲಿದೆ. ನಂತರ ವಿದ್ಯಾರ್ಥಿಗಳು ಕಾಮೆಡ್-ಕೆ ಸೀಟುಗಳನ್ನು ವಾಪಸ್ ಮಾಡಬಹದು. ಅಗತ್ಯವಿದ್ದರೆ, ಕಾಮೆಡ್‌-ಕೆ ಸೀಟು ವಾಪಸ್‌ ಮಾಡಲು ಇರುವ ಜು.13ರ ಕೊನೆಯ ದಿನಾಂಕವನ್ನೂ ವಿಸ್ತರಿಸಲು ಮನವಿ ಮಾಡುವುದಾಗಿ ಮಾಹಿತಿ ನೀಡಿದರು.

221 ಹೆಚ್ಚು ವೈದ್ಯ ಸೀಟು : ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, ಕಳೆದ ಬಾರಿಗಿಂತ ಈ ವರ್ಷ ಸರ್ಕಾರಿ ಕೋಟಾದಡಿ 221ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ ಎಂದು ಹೇಳಿದರು.

ಆನ್‌ಲೈನ್‌ ಮೂಲಕ ಶುಲ್ಕ ಪಾವತಿ : ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶುಲ್ಕ ಪಾವತಿಗೆ ಡಿಡಿ ಪಡೆಯುವ ಅಗತ್ಯವಿಲ್ಲ. ಇಂಡಿಯನ್‌ ಬ್ಯಾಂಕ್‌ ಮೂಲಕ ನೇರವಾಗಿ ಶುಲ್ಕ ಪಾವತಿಸಬಹುದು ಎಂದು ತಿಳಿಸಿದರು.

ಸಚಿವರ ಭರವಸೆಯಿಂದಾಗಿ ಕಾಮೆಡ್-ಕೆ ಸೀಟು ಪಡೆದ ನಂತರ ಸರ್ಕಾರಿ ಸೀಟು ದೊರೆಕಿದರೆ, ಕಾಮೆಡ್-ಕೆ ಶುಲ್ಕ ಮರುಪಾವತಿಯಾಗುವುದೇ? ಎಂಬ ಪೋಷಕರ ಮತ್ತು ವಿದ್ಯಾರ್ಥಿಗಳ ಗೊಂದಗಳಿಗೆ ತೆರೆ ಬಿದ್ದಿದೆ.

English summary
Bringing relief to students aspiring for seats in professional colleges, more number of seats were added to the CET seat matrix under government quota for this academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X