ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆ

By Srinath
|
Google Oneindia Kannada News

ನವದೆಹಲಿ, ಜುಲೈ5: ಅತ್ತ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ Mission 2014ಗೆ ಪಕ್ಕಾ ತಯಾರಿ ನಡೆಸಿರುವಾಗ ಇತ್ತ ಬಿಜೆಪಿಗೆ ಅನುಕೂಲಕರವಾಗಿರುವ ಸುದ್ದಿ ಸಮೀಕ್ಷೆಯೊಂದು ಹೊರಬಿದ್ದಿದೆ.

The Week magazine ನಡೆಸಿರುವ ತಾಜಾ ಸಮೀಕ್ಷೆಯ ಪ್ರಕಾರ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗುವ ಅರ್ಹತೆ ಅಧಿಕವಾಗಿರುವುದು ನರೇಂದ್ರ ಮೋದಿ ಅವರಿಗೇ. ದೇಶಾದ್ಯಂತ ಬಹುತೇಕ ಮಂದಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ಯಾರು ಹಿತವರು?
ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಯಾರು ಹಿತವರು ಎನ್ನುವ ಪ್ರಶ್ನೆಗೆ ಶೇ. 56ರಷ್ಟು ಮಂದಿ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಆಡ್ವಾಣಿ ಅವರಿಗೆ ಶೇ.15, ಸುಷ್ಮಾ ಸ್ವರಾಜ್ ಅವರಿಗೆ ಶೇ. 13, ರಾಜನಾಥ್ ಸಿಂಗ್ ಅವರಿಗೆ ಶೇ. 4 ಮತ್ತು ನಿತಿನ್ ಗಡ್ಕರಿ ಅವರಿಗೆ ಶೇ. 3 ಮಂದಿ ಬೆಂಬಲ ವ್ಯಕ್ತವಾಗಿದೆ.
ಇಂಗ್ಲಿಷ್ ನಿಯತಕಾಲಿಕ 'ದಿ ವೀಕ್' ನಡೆಸಿರುವ ಸಮೀಕ್ಷಾ ವರದಿಗಾಗಿ ಸ್ಲೈಡ್ ಪ್ಲೀಸ್ (PTI)

ಪ್ರಧಾನಿ ಹುದ್ದೆಗೆ ಮೋದಿಯೇ ಬೆಸ್ಟ್

ಪ್ರಧಾನಿ ಹುದ್ದೆಗೆ ಮೋದಿಯೇ ಬೆಸ್ಟ್

ಬಿಜೆಪಿ ಮುಂದಾಳತ್ವದ NDA ಮೈತ್ರಿ ಒಕ್ಕೂಟವು 197 ಸೀಟುಗಳಲ್ಲಿ ಗೆಲವು ಸಾಧಿಸಲಿದೆ. ಮನಮೋಹನ ಸಿಂಗ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಹೋಲಿಸಿದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಪ್ರಧಾನಿ ಹುದ್ದೆಗೆ ಬೆಸ್ಟ್ ಅಂತೆ

ಮುಂದಿನ ಲೋಕಸಭಾ ಚುನಾವಣೆ ಜಿದ್ದಾಜಿದ್ದಿ ತೀವ್ರ

ಮುಂದಿನ ಲೋಕಸಭಾ ಚುನಾವಣೆ ಜಿದ್ದಾಜಿದ್ದಿ ತೀವ್ರ

2014ರ ಲೋಕಸಭಾ ಚುನಾವಣೆಯಲ್ಲಿ UPAಗೆ 184 ಸೀಟು ಒಲಿದರೆ, ಇತರೆ ಪಕ್ಷಗಳು 162 ಸ್ಥಾನಗಳನ್ನು ಗಳಿಸಲಿವೆ. 2009ರ ಚುನಾವಣೆಯಲ್ಲಿ ಶೇ. 37 ರಷ್ಟಿದ್ದ UPAಮತ ಗಳಿಕೆ ಪ್ರಮಾಣ ಮುಂದೆ ಶೇ. 32 ಕ್ಕೆ ಇಳಿಕೆಯಾಗಲಿದೆ. NDA ಮತ ಗಳಿಕೆ ಪ್ರಮಾಣ ಶೇ. 23 ರಿಂದ ಶೇ. 27 ಕ್ಕೆ ಏರಿಕೆಯಾಗಲಿದೆ. ಇತರೆ ಪಕ್ಷಗಳ ಮತಗಳ ಪ್ರಮಾಣ ಶೇ. 39 ರಿಂದ ಶೇ.42 ಕ್ಕೆ ಏರಿಕೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ರಾಹುಲ್ ಗಾಂಧಿಗಿಂತ ಮೋದಿಯೇ ಬೆಸ್ಟ್

ರಾಹುಲ್ ಗಾಂಧಿಗಿಂತ ಮೋದಿಯೇ ಬೆಸ್ಟ್

ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಹೋಲಿಸಿದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಬೆಸ್ಟ್ ಅಂತೆ. ಶೇ. 32ರಷ್ಟು ಮಂದಿ ಪ್ರಧಾನಿ ಸ್ಥಾನಕ್ಕೆ ಮೋದಿ ಸೂಕ್ತ ವ್ಯಕ್ತಿ ಎಂದಿದ್ದರೆ ಶೇ. 15 ರಷ್ಟು ಮಂದಿ ಸಿಂಗ್ ಹಾಗೂ ಶೇ. 13ರಷ್ಟು ಮಂದಿ ರಾಹುಲ್ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಶೇ. 8ರಷ್ಟು ಮಂದಿ ಸೋನಿಯಾ, ಶೇ. 5ರಷ್ಟು ಮಂದಿ ಮಾಯಾವತಿ ಹಾಗೂ ಎಲ್ ಕೆ ಆಡ್ವಾಣಿ ಅವರು ಯೋಗ್ಯರು ಎಂದಿದ್ದಾರೆ. ಮುಲಾಯಂ ಪರ ಶೇ. 4, ನಿತೀಶ್ ಪರ ಶೇ. 3 ಮತ್ತು ಮಮತಾ ಬ್ಯಾನರ್ಜಿ ಪರ ಶೇ. 3ರಷ್ಟು ಮಂದಿ ನಿಂತಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿಯೇ ಬೆಸ್ಟ್

ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿಯೇ ಬೆಸ್ಟ್

ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅವರೇ ಯೋಗ್ಯ ಎಂದಿದ್ದಾರೆ ಬಹುತೇಕ ಮಂದಿ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 39ರಷ್ಟು ಮಂದಿ ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶೇ. 25ರಷ್ಟು ಮಂದಿ ಸಿಂಗ್ ಹಾಗೂ ಶೇ. 18ರಷ್ಟು ಮಂದಿ ಸೋನಿಯಾ ಅವರನ್ನು ಬೆಂಬಲಿಸಿದ್ದಾರೆ. ಉಳಿದಂತೆ ಶೇ. 5ರಷ್ಟು ಮಂದಿ ಚಿದಂಬರಂ, ಶೇ. 3ರಷ್ಟು ಮಂದಿ ಎಕೆ ಆಂಟನಿ ಪರ ನಿಂತಿದ್ದಾರೆ.

ತೃತೀಯ ರಂಗದ ಕಥೆಯೇನು?

ತೃತೀಯ ರಂಗದ ಕಥೆಯೇನು?

ತೃತೀಯ ರಂಗ ಅಧಿಕಾರಕ್ಕೆ ಬಂದರೆ ನಿತೀಶ್ ಕುಮಾರ್ ಅವರೇ ಪ್ರಧಾನಿ ಹುದ್ದೆಗೆ ಯೋಗ್ಯ ಎನ್ನುವ ಅಭಿಪ್ರಾಯ ಬಹುತೇಕರದ್ದಾಗಿದೆ. ಶೇ. 19ರಷ್ಟು ಮಂದಿ ಬೆಂಬಲ ನಿತೀಶ್ ಕುಮಾರ್ ಅವರಿಗೆ ಸಿಕ್ಕಿದೆ. ಮಾಯಾವತಿ, ಮಮತಾ ಅವರು ಶೇ. 14 ಮಂದಿಯ ಬೆಂಬಲ ಗಳಿಸಿದ್ದಾರೆ.

ಮತದಾರ ಬಯಸುತ್ತಿರುವುದೇನು?

ಮತದಾರ ಬಯಸುತ್ತಿರುವುದೇನು?

ಮತದಾರ ಬಯಸುತ್ತಿರುವುದೇನನ್ನು? ಶೇ. 60 ರಷ್ಟು ಮಂದಿ ಹೇಳುವಂತೆ ಆಯಾ ಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಮುಂಚಿತವಾಗಿಯೇ ಘೋಷಿಸಬೇಕು ಎಂದು ಬಯಸಿದ್ದಾರೆ. ನಿಗದಿತವಾಗಿ 2014ರ ಮೇ ನಲ್ಲಿಯೇ ಮುಂದಿನ ಲೋಕಸಭೆಗೆ ಚುನಾವಣೆಗಳು ನಡೆಯಬೇಕು ಎಂದು ಶೇ. 74ರಷ್ಟು ಆಶಿಸಿದ್ದಾರೆ.
ಶೇ. 21 ಮಂದಿ ಬಡವರ ಉದ್ಧಾರ ಮಾಡುವುದು ಪಕ್ಷಗಳ ಧ್ಯೇಯವಾಗಬೇಕು ಎಂದು ಬಯಸಿದ್ದರೆ, ಶೇ. 17ರಷ್ಟು ಮಂದಿ ಕುಡಿಯುವ ನೀರು, ವಿದ್ಯುತ್, ರಸ್ತೆಯಂತಹ ಪ್ರಮುಖ ಅಂಶಗಳಿಗೆ ಒತ್ತು ನೀಡಿದ್ದಾರೆ.

English summary
Lok Sabha polls 2014: The Week Survey Narendra Modi best suited for PM post. A survey by The Week magazine has predicted that NDA will win in 197 seats, UPA in 184 seats while other parties will get a total of 162 seats in the polls. The survey said 32 per cent people felt Gujarat Chief Minister Narendra Modi will be the best Prime Minister followed by Manmohan Singh (15) and Rahul Gandhi (13).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X