• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಶಪಥ ಮುರಿದ ಕಿಂಗ್ ಖಾನ್ ಶಾರುಖ್

By Mahesh
|
Google Oneindia Kannada News

ಬೆಂಗಳೂರು, ಜು.4: ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಅವರು ತಮ್ಮ ಶಪಥ ಮುರಿದಿದ್ದಾರೆ. ವಿಷಯ ಅವರ ಮೂರನೇ ಮಗುವಿನ ಬಗ್ಗೆ ಅಲ್ಲ. ಶಾರುಖ್ ಖಾನ್ ಅವರನ್ನು ಬಿಡದಂತೆ ಕಾಡುತ್ತಿರುವ ಚಟದ ಬಗ್ಗೆ.

ಸಾರ್ವಜನಿಕ ಸ್ಥಳಗಳಲ್ಲಿ ಇನ್ಮುಂದೆ ಧೂಮಪಾನ ಸೇದುವುದಿಲ್ಲ ಎಂದು ಶಪಥ ಮಾಡಿದ್ದ ಶಾರುಖ್ ಖಾನ್ ಅವರು ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಪ್ರಚಾರಕ್ಕಾಗಿ ಟಿವಿ ಶೋಗೆ ಬಂದಿದ್ದವರು ತುಟಿಗೆ ಸಿಗರೇಟ್ ಏರಿಸಿಬಿಟ್ಟರು. ಶಾರುಖ್ ಗೆ ಶಪಥ ನೆನಪಾಗುವ ಹೊತ್ತಿಗೆ ಸಿಗರೇಟ್ ತುಟಿಯಿಂದ ಕೆಳಗಿಳಿಸಿದ್ದರು ಹೊಗೆಯಾಡುತ್ತಿತ್ತು. ಈ ನಡುವೆ ಬೆಂಗಳೂರಿಗೆ ಬಂದಿರುವ ದೀಪಿಕಾ ಪಡುಕೋಣೆ ಅವರು ಖಾಸಗಿ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದು ತಮ್ಮ ಚಿತ್ರ ಪ್ರಚಾರವನ್ನು ಭರ್ಜರಿಯಾಗಿ ಮಾಡುತ್ತಿದ್ದಾರೆ.

ಈಜಿಪ್ಟ್ ಗಲಭೆ: ಈಜಿಪ್ಟ್ ನಲ್ಲಿ ಸೇನೆ ಅಧಿಕಾರ ವಹಿಸಿಕೊಳ್ಳುತ್ತಿದೆ. ಮಧ್ಯಂತರ ಪ್ರಧಾನಿಯಾಗಿ ಮುಖ್ಯ ನ್ಯಾಯಾಧೀಶರನ್ನು ನೇಮಿಸುವ ಸುದ್ದಿ ಬಂದಿದೆ. ಸೇನೆಯ ಹಿರಿಯ ಅಧಿಕಾರಿಗಳು ಅಧ್ಯಕ್ಷ ಮೊಹಮ್ಮದ್ ಮೋರ್ಸಿ ಅವರ ಗೃಹ ಬಂಧನ ಮುಂದುವರೆಸಲಾಗಿದೆ.

ಈ ಬಾರಿ ವಿಂಬಲ್ಡನ್ ಸೆಮಿಫೈನಲ್ ರೋಚಕತೆ ಘಟ್ಟ ಮುಟ್ಟುತ್ತಿದೆ. ರಫೆಲ್ ನಡಾಲ್, ಹುಲ್ಲು ಹಾಸಿನ ಕಿಂಗ್ ರೋಜರ್ ಫೆಡರರ್, ಮರಿಯಾ ಶರಪೋವಾ, ಸೆರೆನಾ ವಿಲಿಯಮ್ಸ್ ಸೇರಿದಂತೆ 7-8 ಘಟಾನುಘಟಿಗಳು ಟೂರ್ನಿಯಿಂದ ಹೊರಬಿದ್ದ ಮೇಲೆ ದೈತ್ಯ ಸಂಹಾರಿಗಳದ್ದೇ ಕಾರುಬಾರಾಗಿದೆ. ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಬುಧವಾರ ನಡೆದ ಪಂದ್ಯಗಳ ಚಿತ್ರಗಳು ನಿಮಗಾಗಿ ಇಲ್ಲಿದೆ.

ಶಾರುಖ್ -ಚೆನ್ನೈ ಎಕ್ಸ್ ಪ್ರೆಸ್

ಶಾರುಖ್ -ಚೆನ್ನೈ ಎಕ್ಸ್ ಪ್ರೆಸ್

ಸಾರ್ವಜನಿಕ ಸ್ಥಳಗಳಲ್ಲಿ ಇನ್ಮುಂದೆ ಧೂಮಪಾನ ಸೇದುವುದಿಲ್ಲ ಎಂದು ಶಪಥ ಮಾಡಿದ್ದ ಶಾರುಖ್ ಖಾನ್ ಅವರು ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಪ್ರಚಾರಕ್ಕಾಗಿ ಟಿವಿ ಶೋಗೆ ಬಂದಿದ್ದವರು ತುಟಿಗೆ ಸಿಗರೇಟ್ ಏರಿಸಿಬಿಟ್ಟರು.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ಬೆಂಗಳೂರು: ದೀಪಿಕಾ ಪಡುಕೋಣೆ ಅವರು ಖಾಸಗಿ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದು ತಮ್ಮ ಚಿತ್ರ ಪ್ರಚಾರ ಮಾಡಿದರು.

ಅಮರನಾಥ ಯಾತ್ರೆ ಮತ್ತೆ ಆರಂಭ

ಅಮರನಾಥ ಯಾತ್ರೆ ಮತ್ತೆ ಆರಂಭ

ಯೋಧರ ರಕ್ಷಣೆ ಜೊತೆಗೆ ಸುಮಾರು 81 ವಾಹನಗಳಲ್ಲಿ 2 ಸಾವಿರಕ್ಕೂ ಅಧಿಕ ಯಾತ್ರಿಗಳು ಭಾಗ್ವತಿ ನಗರ ಬೇಸ್ ಕ್ಯಾಂಪ್ ಬಿಟ್ಟು ಅಮರನಾಥ ಕಡೆಗೆ ಪಾದ ಬೆಳೆಸಿದ್ದಾರೆ

ಇಸ್ರೋ ಮುಖ್ಯಸ್ಥರ ದೇಗುಲ ಭೇಟಿ

ಇಸ್ರೋ ಮುಖ್ಯಸ್ಥರ ದೇಗುಲ ಭೇಟಿ

ತಿರುಪತಿ: ಜಿಪಿಎಎಸ್ ಗೆ ಸಮನಾದ ವ್ಯವಸ್ಥೆ ಒದಗಿಸಬಲ್ಲ ಉಪಗ್ರಹ ಯಶಸ್ವಿ ಉಡಾವಣೆ ನಂತರ ಇಸ್ರೋ ಅಧ್ಯಕ್ಷ ಕೆ ರಾಧಕೃಷ್ಣನ್ ಅವರು ಪತ್ನಿ ಪದ್ಮಿನಿ ಜೊತೆ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕೃಷ್ಣ ಡಿಸ್ಕಸ್ ಥ್ರೋ

ಕೃಷ್ಣ ಡಿಸ್ಕಸ್ ಥ್ರೋ

ಪುಣೆಯಲ್ಲಿ ನಡೆದಿರುವ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿರುವ ಕೃಷ್ಣ ಪೂನಿಯಾ ಅವರು ಡಿಸ್ಕಸ್ ಎಸೆತದ ಭಂಗಿ

ಈಜಿಪ್ಟ್ ಗಲಭೆ

ಈಜಿಪ್ಟ್ ಗಲಭೆ

ಇಸ್ಲಾಂ ಮೂಲದ ಅಧ್ಯಕ್ಷ ಮೋರ್ಸಿ ಪದಚ್ಯುತಿಗೊಳಿಸಿದ ಬಳಿಕ ಮಿಲಿಟರಿ ಪಡೆ ವಶದಲ್ಲಿ ಈಜಿಪ್ಟ್

ಈಜಿಪ್ಟ್ ಗಲಭೆ ಚಿತ್ರ

ಈಜಿಪ್ಟ್ ಗಲಭೆ ಚಿತ್ರ

ಅಧ್ಯಕ್ಷ ಮೊಹಮ್ಮದ್ ಮೋರ್ಸಿ ಪದವಿಯಿಂದ ಕೆಳಗಿಳಿಸಿದ ಖುಷಿಯಲ್ಲಿ ವಿರೋಧಿಗಳ ಸಂಭ್ರಮ

ಈಜಿಪ್ಟ್ ಗಲಭೆ ಚಿತ್ರ

ಈಜಿಪ್ಟ್ ಗಲಭೆ ಚಿತ್ರ

ಕೈರೋ: ಅಧ್ಯಕ್ಷರ ಅರಮನೆ ಹೊರಗಡೆ ಅಸಂಖ್ಯಾತ ಪ್ರತಿಭಟನಾಕಾರರು ಸಂಭ್ರಮದಲ್ಲಿ ತೊಡಗಿರುವ ಚಿತ್ರ

ಈಜಿಪ್ಟ್ ಗಲಭೆ ಚಿತ್ರ

ಈಜಿಪ್ಟ್ ಗಲಭೆ ಚಿತ್ರ

ಕೈರೋ: ಅಧ್ಯಕ್ಷ ಮೊಹಮ್ಮದ್ ಮೋರ್ಸಿ ಪದಚ್ಯುತಿಗೆ ಆಗ್ರಹಿಸಿ 18 ದಿನಗಳಿಂದ ತಹರಿರ್ ಚೌಕದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದರು.

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ : ಫ್ರಾನ್ಸಿನ ಫರ್ನಾಂಡೋ ವರ್ಡೆಸ್ಕೋ ವಿರುದ್ಧ ಕ್ವಾಟರ್ ಫೈನಲ್ ನಲ್ಲಿ ಜಯಭೇರಿ ಬಾರಿಸಿದ ಇಂಗ್ಲೆಂಡಿನ ಆಂಡೆ ಮರೆ ಗೆಲುವಿನ ಅಬ್ಬರ

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ಡೇವಿಡ್ ಫೆರಾರ್ ವಿರುದ್ಧ ಅರ್ಜೆಂಟೀನಾದ ಯುವಾನ್ ಮಾರ್ಟಿನ್ ಡೆಲ್ ಪೊರ್ಟೊ ಗಾಯಗೊಂಡು ಚಿಕಿತ್ಸೆ ಪಡೆದರು.

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ಜೆಕ್ ಗಣರಾಜ್ಯದ ಬೆಡ್ರಿಂಕ್ ವಿರುದ್ಧ ಸೆರ್ಬಿಯಾದ ನೋವಾಕ್ ಜೋಕಾವಿಕ್ ಆಟದ ಭಂಗಿ

English summary
Todays News stories in Pics: Mumbai : Bollywood actor Shah Rukh Khan promoting the film Chennai Express on the sets of a TV show in Mumbai on Wednesday evening. and Many More interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X