ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಷ್ಟದ ಗಾಲಿ ಮೇಲೆ ಓಡುತ್ತಿದೆ ಬಿಎಂಟಿಸಿ ಬಸ್!

|
Google Oneindia Kannada News

ಬೆಂಗಳೂರು, ಜು.4 : ಮಹಾನಗರ ಬೆಂಗಳೂರಿನ ಜನತೆಯ ಜೀವನಾಡಿ. ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆ ಎಂದು ಬೀಗುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ. ಮತ್ತು 450 ಕೋಟಿ ರೂ.ಸಾಲದ ಹೊರಗೆ ಸಿಲುಕಿದೆ.

ಆಶ್ಚರ್ಯವಾದರೂ ಇದು ಸತ್ಯ. ಬಿಎಂಟಿಸಿಯು 2012-13ನೇ ಹಣಕಾಸು ವರ್ಷದಲ್ಲಿ 147.95 ಕೋಟಿ ರೂ. ನಷ್ಟ ಅನುಭವಿಸಿದೆ. 1997-98ರಲ್ಲಿ ಸಂಸ್ಥೆ 7.82 ಕೋಟಿ ನಷ್ಟ ಅನುಭವಿಸಿತ್ತು. ಅದನ್ನು ಹೊರತು ಪಡಿಸಿದರೆ ಈ ವರ್ಷವೇ ಭಾರೀ ನಷ್ಟ ಅನುಭವಿಸಿದೆ.

ಸಂಸ್ಥೆ ನಷ್ಟದಲ್ಲಿದ್ದರೂ ಹೊಸ ಬಸ್ ಖರೀದಿ ಮಾತ್ರ ನಿಂತಿಲ್ಲ. ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ, ಐದು ಹೊಸ ವಿಭಾಗಗಳನ್ನು ಬಿಎಂಟಿಸಿ ಪ್ರಾರಂಭಿಸಿದೆ, ಡೀಸೆಲ್ ದರ ಹೆಚ್ಚಳವಾಗಿದೆ. ಇವೆಲ್ಲ ಕಾರಣಗಳಿಂದಾಗಿ ಬಿಎಂಟಿಸಿ ಇಂದು ಸಾಲದ ಶೂಲಕ್ಕೆ ಸಿಲುಕಿದೆ. ಪ್ರಯಾಣದರ ಹೆಚ್ಚಳದಿಂದಾಗಿ ಸಂಸ್ಥೆ ಕೊಂಚ ಸುಧಾರಿಸಿಕೊಂಡಿದೆ.

ಬಿಎಂಟಿಸಿ 2006-07ರಲ್ಲಿ 224 ಕೋಟಿ ರೂ. ಆದಾಯ ಗಳಿಸಿತ್ತು. ಬಿಜೆಪಿ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಸಂಸ್ಥೆಯ ಲಾಭದ ಪ್ರಮಾಣ ಕುಸಿದಿದೆ. 2011-12ರಲ್ಲಿ 21 ಕೋಟಿ ರೂ. ಲಾಭದಲ್ಲಿದ್ದ ಸಂಸ್ಥೆಯು, ವರ್ಷ ಕಳೆಯುವುದರೊಳಗೆ 100 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಲೆಕ್ಕಪತ್ರಗಳು ಹೇಳುತ್ತಿವೆ.

ಬಿಳಿಯಾನೆಯಾಂತಾಗಿವೆ ವೋಲ್ವೊ ಬಸ್

ಬಿಳಿಯಾನೆಯಾಂತಾಗಿವೆ ವೋಲ್ವೊ ಬಸ್

ಬಿಎಂಟಿಸಿ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ವೋಲ್ವೊ ಬಸ್‌ಗಳು ಎಂಬುದು ಅಧಿಕಾರಿಗಳ ಅಭಿಪ್ರಾಯ. 700ಕ್ಕೂ ಅಧಿಕ ವೋಲ್ವೊ ಬಸ್ ಗಳಿದ್ದು, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಪ್ರಯಾಣದರ ಹೆಚ್ಚಾದ ಮೇಲೆ, ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಈ ಬಸ್ ಗಳ ನಿರ್ವಹಣಾ ಶುಲ್ಕ ಹೆಚ್ಚಾಗಿದೆ. ಆದ್ದರಿಂದ ಬಸ್ ನಿರ್ವಹಣೆ ಬಿಳಿಯಾನೆ ಸಾಕಿದಂತಾಗುತ್ತದೆ.

ಹೊಸ ಡಿಪೋಗಳ ಸಂಖ್ಯೆ ಹೆಚ್ಚಳ

ಹೊಸ ಡಿಪೋಗಳ ಸಂಖ್ಯೆ ಹೆಚ್ಚಳ

ಸಂಸ್ಥೆಗೆ ಹೊಸದಾಗಿ ಹೆಚ್ಚಿನ ಬಸ್ ಗಳು ಸೇರ್ಪಡೆಗೊಂಡಿದ್ದರಿಂದ ಹೊಸದಾಗಿ ಐದು ಡಿಪೋಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿಯೂ ಸಂಸ್ಥೆ ನಷ್ಟ ಉಂಟಾಗುತ್ತಿದೆ. 2008-09ರಲ್ಲಿ ಬಿಎಂಟಿಸಿಯ 30 ಡಿಪೋಗಳಿದ್ದವು. 2012-13ರಲ್ಲಿ 39 ಡಿಪೋಗಳಿವೆ.

ಟಿಟಿಎಂಸಿಗಳಿಂದಲೂ ನಷ್ಟ

ಟಿಟಿಎಂಸಿಗಳಿಂದಲೂ ನಷ್ಟ

ಬಿಎಂಟಿಸಿಯ ಹೊಸ ಹೊಸ ಪ್ರಯೋಗಗಳು ಸಂಸ್ಥೆಯನ್ನು ಸಾಲದ ಹೊರೆಗೆ ತಳ್ಳಿದೆ. ಟಿಟಿಎಂಸಿ ಕಟ್ಟಡಗಳಿಂದ ಸಮರ್ಪಕವಾಗಿ ಬಾಡಿಗೆ ವಸೂಲಿ ಆಗುತ್ತಿಲ್ಲ. ಸಂಸ್ಥೆಯ ಯೋಜನೆಗಳಿಗಾಗಿ ಮಾಡಿದ ಸಾಲಕ್ಕೆ ಸಂಸ್ಥೆ ವಾರ್ಷಿಕವಾಗಿ 20 ಕೋಟಿ ರೂ. ಬಡ್ಡಿ ಪಾವತಿ ಮಾಡುತ್ತಿದೆ. 450 ಕೋಟಿ.ರೂ. ಸಾಲವನ್ನು ಸಂಸ್ಥೆ ಪಡೆದಿದೆ.

ಎಷ್ಟು ಆದಾಯ ಬರುತ್ತದೆ

ಎಷ್ಟು ಆದಾಯ ಬರುತ್ತದೆ

ಬಿಎಂಟಿಸಿಗೆ ಬಸ್, ಬಾಡಿಗೆ ಇತರೆ ಮೂಲಗಳಿಂದ ಮಾಸಿಕ 130 ಕೋಟಿ ರೂ. ಆದಾಯ ಬರುತ್ತದೆ. ಇದರಲ್ಲಿ ಸಿಬ್ಬಂದಿಗೆ 65 ಕೋಟಿ ರೂ. ವೇತನ ನೀಡಲಾಗುತ್ತಿದೆ. 50 ಕೋಟಿ ರೂ. ಡೀಸೆಲ್ ಖರೀದಿಗೆ ವೆಚ್ಚ ಮಾಡಲಾಗುತ್ತಿದೆ.

ವೇತನ ಪರಿಷ್ಕರಣೆ ನಷ್ಟ

ವೇತನ ಪರಿಷ್ಕರಣೆ ನಷ್ಟ

ಬಿಎಂಟಿಸಿ ಸಿಬ್ಬಂದಿ ವೇತನ ಪರಿಷ್ಕರಣೆ ಬಳಿಕ 90.96 ಕೋಟಿ ರೂ. ವೇತನಕ್ಕಾಗಿ, ಡೀಸೆಲ್ ದರ ಹೆಚ್ಚಳದ ಬಳಿಕ 9.39 ಕೋಟಿ ರೂ. ಹೆಚ್ಚುವರಿ ವೆಚ್ಚ ಸಂಸ್ಥೆಗೆ ಆಗುತ್ತಿದೆ. ಬಸ್‌ಗಳು ಕಡಿಮೆ ಮೈಲೇಜ್ ನೀಡುತ್ತಿದ್ದು ಇದರಿಂದಾಗಿ 17.90 ಕೋಟಿ ರೂ. ನಷ್ಟವಾಗುತ್ತಿದೆ.

ಸಂಸ್ಥೆಯ ಆದಾಯ ಎಷ್ಟಿತ್ತು

ಸಂಸ್ಥೆಯ ಆದಾಯ ಎಷ್ಟಿತ್ತು

2008-09ರಲ್ಲಿ 55ಕೋಟಿ ರೂ. ಇತ್ತು. 2009-10ರಲ್ಲಿ 65ಕೋಟಿ ಆದಾಯ ಬರುತ್ತಿತ್ತು. ಆದರೆ, 2010-11ರಲ್ಲಿ 50 ಕೋಟಿ ಆದಾಯ ಬಂದಿತ್ತು. 2011-12ರಲ್ಲಿ ಆದಾಯ 21 ಕೋಟಿಗೆ ಇಳಿಯಿತು. 2012-13ರಲ್ಲಿ 147 ಕೋಟಿ ನಷ್ಟು ಉಂಟಾಗಿದೆ.

ಎಷ್ಟು ಬಸ್ ಗಳಿವೆ

ಎಷ್ಟು ಬಸ್ ಗಳಿವೆ

ಬಿಎಂಟಿಸಿಯಲ್ಲಿ ಸದ್ಯ ಒಟ್ಟು 6,246 ಬಸ್ ಗಳಿವೆ. ಆದರೆ, ಅವುಗಳಲ್ಲಿ 286 ಬಸ್ ಗಳು ನಿರುಪಯುಕ್ತವಾಗಿದೆ. 2011-12ರಲ್ಲಿ 549 ಬಸ್ ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸಂಸ್ಥೆ ನಷ್ಟದಲ್ಲಿದ್ದರೂ, ಕಳೆದ ವರ್ಷ 549 ಬಸ್ ಗಳನ್ನು ಕೊಂಡುಕೊಳ್ಳಲಾಗಿದೆ.

English summary
The year 2012–13 witnessed the Bangalore Metropolitan Transport Corporation (BMTC) losing its recognition as the lone urban public transport entity earning profits, after it posted a loss Rs. 147 crore. This is the first time that BMTC has suffered loss after its formation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X