53 ಡಿಗ್ರಿ: ಅಮೆರಿಕಕ್ಕೆ ಹೋದ್ರೆ ರೋಸ್ಟ್ ಆಗಿಬಿಡ್ತೀರಿ

ಅಮೆರಿಕದ ಈ ಸುಡು ಬಿಸಿಲು ಸಾರ್ವಕಾಲಿಕ ದಾಖಲೆಯ ನಿರ್ಮಾಣದತ್ತ ಸಾಗಿದೆ. ಇದರಿಂದ ಜನಸಾಮಾನ್ಯರು ಹೈರಾಣಗೊಂಡಿದ್ದಾರೆ. ಭೂಮಿಯ ಮೇಲೆ ಗರಿಷ್ಠ ತಾಪಮಾನ ದಾಖಲಾಗುವ ಇತಿಹಾಸ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯದ್ದಾಗಿದೆ.
ಇಲ್ಲಿ ಭಾನುವಾರ 128 ಡಿಗ್ರಿ ಫ್ಯಾರನ್ ಹೀಟ್ (53 ಡಿಗ್ರಿ ಸೆಲ್ಸಿಯಸ್) ಉಷ್ಣಾಂಶ ದಾಖಲಾಗಿದೆ. ಸದ್ಯದಲ್ಲೇ ಈ ಉಷ್ಣಾಂಶದ ಪ್ರಮಾಣ ಮತ್ತಷ್ಟು ಹೆಚ್ಚುವ ಭೀತಿಯೂ ಇದೆ.
ತಾಪಮಾನ, ಶತಮಾತನದ ಹಿಂದಿನ ದಾಖಲೆಯತ್ತ:
ಡೆತ್ ವ್ಯಾಲಿಯಲ್ಲಿ (ಫೀನಿಕ್ಸ್ ನಲ್ಲಿ) ಈ ಹಿಂದೆ 1913ರಲ್ಲಿ 134 ಫ್ಯಾರನ್ ಹೀಟ್ (56.66 ಡಿಗ್ರಿ ಸೆಲ್ಸಿಯಸ್) ಉಷ್ಣಾಂಶ ದಾಖಲಾಗಿತ್ತು. ಇದು, ಈವರೆಗೆ ಭೂಮಿಯಲ್ಲಿ ಯಾವುದೇ ಪ್ರದೇಶದಲ್ಲಿ ದಾಖಲಾದ ಗರಿಷ್ಠ ತಾಪಮಾನವೆಂದು ಹೇಳಲಾಗಿದೆ.
ಡೆತ್ ವ್ಯಾಲಿಯಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ಉಂಟಾಗುತ್ತಿರುವ ಏರಿಕೆ ಗಮನಿಸಿದರೆ, ಈ ಬಾರಿ ಹಳೆಯ ದಾಖಲೆಗಳು ಮುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (National Weather Service) ಮುನ್ನೆಚ್ಚರಿಕೆ ನೀಡಿದೆ.
ಲಾಸ್ ವೇಗಾಸ್, ಆರಿಜೋನಾ, ನೆವಾಡಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ತಾಪಮಾನ ಈಗಾಗಲೇ 48 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಭಾರೀ ಬಿಸಿಗಾಳಿ ಸಾಮಾನ್ಯ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಬಿಸಿಲಿನ ಹೊಡೆತಕ್ಕೆ ಸಿಕ್ಕಿ ನೂರಾರು ಸಂಖ್ಯೆಯಲ್ಲಿ ಜನರು ಅಸ್ವಸ್ಥಗೊಂಡಿದ್ದಾರೆ. ಲಾಸ್ ವೇಗಾಸ್ ನಲ್ಲಿ ಬಿಸಿಲ ತಾಪ ತಾಳಲಾರದೆ ಶನಿವಾರ ಒಬ್ಬರು ಮೃತಪಟ್ಟಿದ್ದಾರೆ.












Click it and Unblock the Notifications