ರಸೆಲ್ ಮಾರ್ಕೆಟ್ ಹೂಹಣ್ಣು ಮನೆ ಮುಂದಿನ ಬೃಂದಾವನ

 Russell-Market Shivaji Nagar Bangalore- Flowers Vegetables shop
ಬೆಂಗಳೂರು, ಜೂನ್ 29: ಶಿವಾಜಿನಗರದ ರಸೆಲ್ ಮಾರ್ಕೆಟ್ ಕಥೆ ಹೇಗಿದೆಯಪ್ಪಾ ಅಂದರೆ ಮನೆ ಮುಂದೆ ಬೃಂದಾವನ. ಹಿತ್ತಲಲ್ಲಿ ಮಟನ್!

ರಸೆಲ್ ಮಾರ್ಕೆಟ್ ನಾನ್ ವೆಜ್ ಐಟಂಗಳಿಗೆ ಹೇಗೆ ಬಹುಬೇಡಿಕೆ ಪಡೆದಿದೆಯೋ ಇಲ್ಲಿನ ಹೂ-ಹಣ್ಣು-ತರಕಾರಿ ಮಾರುಕಟ್ಟೆಯೂ ಅಷ್ಟೇ ಪ್ರಸಿದ್ಧಿ. ತಾಜಾ ತಾಜಾ ಹೂ-ಹಣ್ಣು-ತರಕಾರಿಗಳು ಇಲ್ಲಿ ನಿಮಗೆ ಪರಿಮಳಯುಕ್ತ ಸ್ವಾಗತ ಕೋರುತ್ತದೆ. ಇಡೀ ಮಾರುಕಟ್ಟೆಯ ಸೌಂದರ್ಯವನ್ನು ಹೆಚ್ಚಿಸುವುದು ಇದೇ ಹೂ-ಹಣ್ಣು ಅಂಗಡಿಗಳು. (ಇಲ್ಲೊಮ್ಮೆ ಕ್ಲಿಕ್ಕಿಸಿ ನೋಡಿ)

ಆದರೆ ಹಿತ್ತಲಕಡೆ ಮೀನುಲೋಕ, ಮಟನ್ ಲೋಕದಲ್ಲಿ ನಾನ್ ವೆಜ್ ಐಟಂಗಳು ಹೋಲ್ ಸೇಲ್ ದರದಲ್ಲಿ ದೊರೆತರೆ ಇಲ್ಲಿ ಹೂ-ಹಣ್ಣು-ತರಕಾರಿ ರೀಟೇಲ್ ದರದಲ್ಲಿ ತುಸು ದುಬಾರಿ ಬೆಲೆಯಲ್ಲಿ ಸಿಗುತ್ತದೆ.

ಆದರೆ ಇಲ್ಲಿನ ಹೂ-ಹಣ್ಣು-ತರಕಾರಿ ತಾಜಾ ಆಗಿ ಸಿಗುತ್ತದೆ. ಇದು ಮನೆ ಮಟ್ಟಿಗೆ ಸಾಕಾಗುವಷ್ಟು ಖರೀದಿಸುವವರಿಗೆ ಇದು ಪ್ರಶಸ್ತವಾದ ಸ್ಥಳ. ಅದೇ ಮದುವೆ-ಮುಂಜಿ ಮತ್ತಿತರ ಕಾರ್ಯಗಳಿಗೆ ಹೂ-ಹಣ್ಣು-ತರಕಾರಿ ಬೇಕು ಅಂದರೆ ಸೀದಾ ಸಿಟಿ ಮಾರುಕಟ್ಟೆಗೆ ಹೋಗುವುದು ವಾಸಿ. ಅಲ್ಲಿ ಸಗಟು ದರದಲ್ಲಿ ದಡಿಯ ಲೆಕ್ಕದಲ್ಲಿ ಹೇರಳವಾಗಿ ಹಣ್ಣು ಹಂಪಲು ಸಿಗುತ್ತದೆ. ಇಲ್ಲೇನಿದ್ದರೂ ಕೆಜಿ ಲೆಕ್ಕದಲ್ಲಿ ಸಿಗುತ್ತದೆ.

ಆದರೆ ಇಲ್ಲಿ ಸಿಗುವ ಹೂವು ನಿಜಕ್ಕೂ ವಿಶೇಷವೇ. ಬೆಂಗಳೂರಿನ ಅತ್ಯಂತ ದುಬಾರಿ ಮಾರುಕಟ್ಟೆ ಎನಿಸಿರುವ ಗಾಂಧಿಬಜಾರ್ ಹೂ ಮಾರುಕಟ್ಟೆಯಲ್ಲೂ ಇಷ್ಟೊಂದು ತಾಜಾ ಹೂ ಸಿಗುವುದಿಲ್ಲ. ರಸೆಲ್ ಮಾರ್ಕೆಟ್ ಆವರಣದಲ್ಲಿ ಸಿಗುವ ಮಲ್ಲಿಗೆಯಿಂದ ಹಿಡಿದು ಆಲಂಕಾರಿಕ ಹೂಗಳು ನಿಜಕ್ಕೂ ವಿಭಿನ್ನವಾಗಿದೆ.

ಇಲ್ಲಿನ ವಿದೇಶಿ ಹಣ್ಣು ವಿಶಿಷ್ಟ: ಇಲ್ಲಿ ದೂರದ ದೇಶಗಳ ಹಣ್ಣುಗಳು ಹೇರಳವಾಗಿ ಸಿಗುತ್ತದೆ. ಈ ಮಾರುಕಟ್ಟೆ ಆ ಹಣ್ಣುಗಳಿಗೆ ಹೆಸರುವಾಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+