ಫೋರ್ಬ್ ಪಟ್ಟಿ ಸೇರಿದ ಕನ್ನಡಿಗ ಬಿಆರ್ ಶೆಟ್ಟಿ

ಇದೇ ಮೊದಲ ಬಾರಿಗೆ 'ಫೋರ್ಬ್ಸ್' ಬಿಡುಗಡೆಗೊಳಿಸಿದೆ. ಲುಲು ಸಮೂಹದ ಎಂ.ಎ. ಯೂಸುಫ್ ಅಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅನಂತರದ ಎರಡು ಸ್ಥಾನಗಳನ್ನು ಲ್ಯಾಂಡ್ ಮಾರ್ಕ್ ಸಮೂಹದ ಅಧ್ಯಕ್ಷ ಮಿಕಿ ಜಗತ್ಯಾನಿ ಹಾಗೂ ಎನ್ ಎಂಸಿ ಸಮೂಹದ ಬಿ.ಆರ್.ಶೆಟ್ಟಿ ಪಡೆದುಕೊಂಡಿದ್ದಾರೆ.
ಪಿ.ಎನ್.ಸಿ. ಮೆನನ್, ಸನ್ನಿ ವಾರ್ಕೆ, ಆಝಾದ್ ಮೂಪನ್, ಜಾಯ್ ಆಲುಕ್ಕಾಸ್, ಸಈದ್ ಸಲಾಹುದ್ದೀನ್ ಹಾಗೂ ಜಾಕಿ ಪಂಜಾಬಿ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಇತರರಾಗಿದ್ದಾರೆ. ಯೂಸುಫ್ ಅಲಿಯವರು 1.5 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದುವ ಮೂಲಕ ಫೋರ್ಬ್ಸ್ ಇತ್ತೀಚೆಗೆ ಪ್ರಕಟಿಸಿರುವ ಕೋಟ್ಯಧಿಪತಿಗಳ ಪಟ್ಟಿಯಲ್ಲಿಯೂ ಸ್ಥಾನ ಗಳಿಸಿದ್ದರು.
ಅಬುದಾಬಿಯಲ್ಲಿ ನೆಲೆಸಿರುವ ಮಂಗಳೂರು ಮೂಲದ ಕನ್ನಡಿಗ ಡಾ ಬಿ. ಆರ್ ಶೆಟ್ಟಿ ದುಬೈನಲ್ಲಿ ತಲೆಎತ್ತಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ 100ನೇ ಮಹಡಿಯ ಮಾಲೀಕರಾಗಿದ್ದಾರೆ. ಜೊತೆಗೆ 141 ನೇ ಮಹಡಿಯಯಲ್ಲಿ ಸ್ವಂತ ಕಚೇರಿ ತೆರೆದಿದ್ದಾರೆ.
ಅಬುದಾಬಿಯಲ್ಲಿ ನೆಲೆಸಿರುವ ಶೆಟ್ಟಿ ನ್ಯೂ ಮೆಡಿಕಲ್ ಸೆಂಟರ್ ಸಮೂಹ ಅಸ್ಪತ್ರೆಗಳ ಸಂಸ್ಥಾಪಕರು. ಎಎಂಸಿ ಸಮೂಹದ ಮೂಲಕ ಪ್ರಸಿದ್ದಿ ಪಡೆದವರು. ವಿಶ್ವದ ಅತ್ಯಂತ ಪ್ರತಿಷ್ಠಿತ ಕಟ್ಟಡದಲ್ಲಿ ಎರಡು ಮಹಡಿಗಳನ್ನು ಖರೀದಿಸಿ ಕೋಟ್ಯಾಧಿಪತಿಯ ಹೊಸ ವಿಳಾಸವೀಗ 100, ಬುರ್ಜ್ ಖಲೀಫಾ.
ಬಿ.ಆರ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಕಾಪು ಸಮೀಪದ ಬಾವಗತ್ ನವರು. 1972 ರಲ್ಲಿ ಕ್ಲಿನಿಕಲ್ ಫಾರ್ಮಸಿಯಲ್ಲಿ ಪದವಿ ಪಡೆದ ನಂತರ ಉದ್ಯೋಗ ಅರಸಿ ಅಬುದಾಬಿಗೆ ತೆರಳಿ ನ್ಯೂ ಮೆಡಿಕಲ್ ಸೆಂಟರ್ ಎಂಬ ಕ್ಲಿನಿಕ್ ಆರಂಭಿಸಿದ ಹಂತಹಂತವಾಗಿ ಶೆಟ್ಟಿ ಬೆಳೆಯುತ್ತಾ ಹೋದರು. ಇದೀಗ ಶೆಟ್ಟಿ ದುಬೈ ಸರಕಾರದ ವಿತ್ತ ಇಲಾಖೆಯ ಸಲಹಾ ಮಂಡಳಿಯ ಸದಸ್ಯ ಕೂಡ. 2009ರ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ, ಮಂಗಳೂರು ವಿವಿ ಡಾಕ್ಟರೇಟ್ ಪುರಸ್ಕಾರ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಪತ್ನಿ ಚಂದ್ರಕುಮಾರಿ, ಒಬ್ಬ ಮಗ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಶೆಟ್ಟಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.












Click it and Unblock the Notifications